Headlines

ಟ್ರಾಫಿಕ್ ಕಿರಿಕಿರಿಗೆ ಗುಡ್ ಬೈ ಹೇಳಲು ಬೆಂಗಳೂರಿನ 5 ಕಡೆ ನಿರ್ಮಾಣವಾಗಲಿದೆ ಎಲಿವೇಟೆಡ್​​ ಕಾರಿಡಾರ್: ಎಲ್ಲೆಲ್ಲಿ ಗೊತ್ತಾ?

ಟ್ರಾಫಿಕ್ ಕಿರಿಕಿರಿಗೆ ಗುಡ್ ಬೈ ಹೇಳಲು ಬೆಂಗಳೂರಿನ 5 ಕಡೆ ನಿರ್ಮಾಣವಾಗಲಿದೆ ಎಲಿವೇಟೆಡ್​​ ಕಾರಿಡಾರ್: ಎಲ್ಲೆಲ್ಲಿ ಗೊತ್ತಾ?


ಬೆಂಗಳೂರು, ಜನವರಿ 12: ಬೆಂಗಳೂರು (ಬೆಂಗಳೂರು) ಜನರು ಅತಿ ಜಿಗುಪ್ಸೆಗೆ ಒಳಗಾಗುವುದು ಇಲ್ಲಿನ ಸಂಚಾರ (ಸಂಚಾರ) ದಟ್ಟಣೆಯಿಂದ. ಹೀಗಾಗಿ ಸಂಚಾರ ದಟ್ಟಣೆ ನಿವಾರಣೆಗಾಗಿ ಸರ್ಕಾರ ನಾನಾ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಇದೀಗ ಪ್ರಮುಖ ಭಾಗಗಳಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಒಟ್ಟು ಸುಮಾರು 75 ಕಿಲೋ ಮೀಟರ್ ಉದ್ದದ 5 ಎತ್ತರದ ರಸ್ತೆಗಳು ಅಥವಾ ಎಲಿವೇಟೆಡ್ ಕಾರಿಡಾರ್ಗಳ ನಿರ್ಮಾಣದ ಜವಾಬ್ದಾರಿಯನ್ನು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗೆ ವಹಿಸಲಾಗಿದೆ.

ಎಲ್ಲೆಲ್ಲಿ ಎಲಿವೇಟೆಡ್ ಕಾರಿಡಾರ್?

  • ನಾಗವಾರ ಜಂಕ್ಷನ್ – ನ್ಯೂ ಏರ್ಪೋರ್ಟ್ ರಸ್ತೆ (17.94 ಕಿ.ಮೀ)
  • ಹಲಸೂರು ಕೆರೆ ಜಂಕ್ಷನ್ – ಬಾಗಲೂರು (27.19 ಕಿ.ಮೀ)
  • ಹಳೆ ಮದ್ರಾಸ್ ರಸ್ತೆ – ಸಿಟಿ ಫ್ಲೈಓವರ್ (10.81 ಕಿ.ಮೀ)
  • ಸಿರ್ಸಿ ಸರ್ಕಲ್ – ಸ್ಯಾಟಲೈಟ್ ಬಸ್ ನಿಲ್ದಾಣ (5.22 ಕಿಮೀ)
  • ರಾಗಿಗುಡ್ಡ ಜಂಕ್ಷನ್ – ಕನಕಪುರ ಮುಖ್ಯರಸ್ತೆ (18.47 ಕಿ.ಮೀ)

ಇದನ್ನೂ ಓದಿ: ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್: ಆಯಂಬುಲೆನ್ಸ್ ಸಿಲುಕಿ ರೋಗಿ ನರಳಾಟ

ಇನ್ನು ಹೊಸ ಎಲಿವೇಟೆಡ್ ರಸ್ತೆಗಳು ನಗರದ ವಾಹನಗಳಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ನೀಡುವ ನಿರೀಕ್ಷೆಯಿದೆ. ಆದರೆ, ಇವುಗಳ ನಿರ್ಮಾಣದ ಬಳಿಕ ಟೋಲ್ ಸಂಗ್ರಹ ಮಾಡುವ ಸಾಧ್ಯತೆಯೂ ಇದೆ. ಈ ಮೂಲಕ ದುಬಾರಿ ಕಾಮಗಾರಿಯ ವೆಚ್ಚವನ್ನು ಸವಾರರಿಂದಲೇ ವಸೂಲಿ ಮಾಡುವ ಚಿಂತನೆ ಕೂಡ ಸರ್ಕಾರದ್ದಾಗಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *