Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಿಂದ ರಾಶಿಕಾ ಶೆಟ್ಟಿ ಅವರು ಎಲಿಮಿನೇಟ್ ಆಗಿದ್ದಾರೆ. ಕನ್ನಡ, ತೆಲುಗು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದರು. ದೊಡ್ಮನೆಗೆ ಬಂದಿದ್ದ ರಾಶಿಕಾ ಶೆಟ್ಟಿ ಅವರು ಎಲಿಮಿನೇಟ್ ಆಗಿದ್ದು, ಅವರ ಪ್ರತಿಕ್ರಿಯೆ ಏನು?

16 ವಾರಗಳ ಕಾಲ ರಾಶಿಕಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿದ್ದರು. ಫಿಸಿಕಲ್ ಟಾಸ್ಕ್‌ನಲ್ಲಿ ಅವರು ಚೆನ್ನಾಗಿ ಆಡಿದ್ದರು. ಇವರ ಟಾಸ್ಕ್‌ಗಳ ಪ್ರದರ್ಶನ ನಿಜಕ್ಕೂ ಚೆನ್ನಾಗಿತ್ತು.

ಬಿಗ್ ಬಾಸ್ ಮನೆಯ ಈ ಅದ್ಭುತ ಪಯಣ ಇಲ್ಲಿಗೆ ಮುಕ್ತಾಯವಾಗಿದೆ. ನನ್ನ ಈ ಜರ್ನಿಯಲ್ಲಿ ನೀವು ನೀಡಿದ ಪ್ರೀತಿ, ಬೆಂಬಲ ಮತ್ತು ಹಾರೈಕೆಗಳಿಗೆ ನಾನು ಸದಾ ಋಣಿ. ಸೋಲು-ಗೆಲುವಿಗಿಂತ ನಿಮ್ಮ ಹೃದಯದಲ್ಲಿ ನನಗೆ ಸಿಕ್ಕ ಸ್ಥಾನವೇ ದೊಡ್ಡದು. ನನ್ನನ್ನು ಬೆಳೆಸಿದ ಕನ್ನಡಿಗರಿಗೆ ಮತ್ತು ನನ್ನ ಎಲ್ಲಾ ಅಭಿಮಾನಿಗಳಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮ ಪ್ರೀತಿ ಹೀಗೆಯೇ ಇರಲಿ

ರಾಶಿಕಾ ಶೆಟ್ಟಿ ಅವರು ಈ ಮನೆಗೆ ಮೊದಲ ಮಹಿಳಾ ಕ್ಯಾಪ್ಟನ್ ಆಗಿದ್ದರು. ಸೂರಜ್ ಅವರಿಗೆ ಮೊದಲ ಬಾರಿಗೆ ರಾಶಿಕಾ ಸರಿಯಾಗಿ ಆಟ ಆಡದೆ ಗೆದ್ದರು ಎಂಬ ಅಸಮಾಧಾನ ಇತ್ತು. ಅದನ್ನು ಅವರು ಹೊರಗಡೆ ಹಾಕಿದ್ದರು.

ಬಿಗ್ ಬಾಸ್ ಆಯ್ಕೆ ನಾನು ನನ್ನ ಜೀವನದಲ್ಲಿ ತಗೊಂಡ ಉತ್ತಮ ನಿರ್ಧಾರ ಎಂದು ರಾಶಿಕಾ ಶೆಟ್ಟಿ ಅವರು ಕಿಚ್ಚ ಸುದೀಪ್ ಮುಂದೆ ಕೂಡ ಹೇಳಿದ್ದಾರೆ.

ರಾಶಿಕಾ ಶೆಟ್ಟಿ ಹಾಗೂ ಸೂರಜ್ ಅವರು ಬಿಗ್ ಬಾಸ್ ಮನೆಗೆ ಬಂದ ಒಂದೇ ವಾರಕ್ಕೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು. ಸೂರಜ್, ರಾಶಿಕಾ ಒಮ್ಮೆ ಲಾಂಗ್ ಹಗ್ ಮಾಡಿದ್ದು ಟ್ರೋಲ್ ಆಗಿತ್ತು. ಇದು ಕೂಡ ಚರ್ಚೆ ಆಗಿತ್ತು.

ದೊಡ್ಮನೆಯಿಂದ ಹೊರಬಂದ ಸೂರಜ್ ಅವರು ರಾಶಿಕಾ ಶೆಟ್ಟಿಗೆ ಮತ ಹಾಕಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದ್ದರು.

Source link
BBK 12 ಮನೆಯಿಂದ ಹೊರಬರುತ್ತಿದ್ದಂತೆ ಸುಂದರಿ Rashika Shetty ಫಸ್ಟ್ ರಿಯಾಕ್ಷನ್ ಏನು?