Bigg Boss Kannada Season 12 Episode: ರಾಶಿಕಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ. ಈ ವಾರ ಪೂರ್ತಿ ಆಟದ ಬದಲು ಸೆಲೆಬ್ರೇಶನ್ ಇರುತ್ತದೆ. ಇಷ್ಟುದಿನ ಫಿಸಿಕಲ್ ಟಾಸ್ಕ್, ಲಕ್ಷುರಿ ಟಾಸ್ಕ್, ಮನೆ ಕೆಲಸ, ಅಟೆನ್ಶನ್, ಕಳಪೆ, ಉತ್ತಮ ಎಂದು ಸ್ಪರ್ಧಿಗಳು ಸ್ಪರ್ಧೆಯಲ್ಲಿದ್ದರು.

ರಘು, ಕಾವ್ಯ ಶೈವ, ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಧನುಷ್ ಗೌಡ, ಅಶ್ವಿನಿ ಗೌಡ, ಧ್ರುವಂತ್ ಅವರು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇವರಲ್ಲಿ ಐವರು ಟಾಪ್ 5 ಸ್ಥಾನಕ್ಕೆ ಅರ್ಹತೆ ಪಡೆದಿದ್ದಾರೆ.

ಈಗಾಗಲೇ ರಾಶಿಕಾ ಶೆಟ್ಟಿ ಅವರು ಎಲಿಮಿನೇಟ್ ಆಗಿದ್ದಾರೆ. ಮಿಡ್ ವೀಕ್ ಎಲಿಮಿನೇಶನ್ ಕೂಡ ನಡೆಯುವುದು, ಒಂದೇ ವಾರಕ್ಕೆ ಗ್ರ್ಯಾಂಡ್ ಫಿನಾಲೆ ಕೂಡ ನಡೆಯುವುದು.

ಅಂದಹಾಗೆ ಮಿಡ್ ವೀಕ್ ಎಲಿಮಿನೇಶನ್ ಆಗುವುದು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಮಧ್ಯರಾತ್ರಿ ಮಿಡ್ ವೀಕ್ ಎಲಿಮಿನೇಶನ್ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಎಲಿಮಿನೇಶನ್ ಆಗುವುದು? ಹೇಗೆ ವಿನ್ ಆಗುತ್ತಾರೆ ಎಂಬ ಪ್ರಶ್ನೆಯಿದೆ. ಈಗ ಇಡೀ ಮನೆ ನಾಮಿನೇಟ್ ಆಗಿದೆ.

ಅಂದಹಾಗೆ ಮಿಡ್ ವೀಕ್ ಎಲಿಮಿನೇಶನ್ ಹಾಗೂ ವಿಜೇತರು ಯಾರು ಎಂಬುದಿಕ್ಕೆ ವೋಟ್ ಮಾಡಲಾಗುವುದಂತೆ. ನಾಮಿನೇಟ್ ಆದ ತಕ್ಷಣ ವೋಟಿಂಗ್ ಲೈನ್ಸ್ ಒಪನ್ ಆಗುವುದು ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

Source link
ಓರ್ವ ಸ್ಪರ್ಧಿ BBK 12 ಟ್ರೋಫಿ ಹೇಗೆ ಪಡೆಯುತ್ತಾರೆ? ಮಿಡ್ ವೀಕ್ ಎಲಿಮಿನೇಶನ್ ಬಗ್ಗೆ Kiccha Sudeep ರಿವೀಲ್