ರಾಕಿಂಗ್ ಸ್ಟಾರ್ ಯಶ್ (ಯಶ್) ಅವರ ನಟನೆಯ ‘ಟಾಕ್ಸಿಕ್’ ಸಿನಿಮಾ ಟೀಸರ್ ಜನವರಿ 8ರಂದು ರಿಲೀಸ್ ಆಯಿತು. ಅವರ ಬರ್ತ್ತೇ ಪ್ರಯುಕ್ತ ಈ ಟೀಸರ್ ರಿಲೀಸ್ ಆಗಿ ಅಬ್ಬರಿಸಿತ್ತು. ಈ ಟೀಸರ್ ಈವರೆಗೆ 83 ಮಿಲಿಯನ್ ವೀಕ್ಷಣೆ ಪಡೆದಿದೆ. ಈ ಟೀಸರ್ ನೋಡಿದ ಸುದೀಪ್ ಮೆಚ್ಚುಗೆ ಸೂಚಿಸಿದ್ದರು. ಈ ಟ್ವೀಟ್ ಗೆ ಯಶ್ ಪ್ರತಿಕ್ರಿಯೆ.
ಯಶ್ ಹಾಗೂ ಸುದೀಪ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತುಗಳು ಆಗಾಗ ಕೇಳಿ ಬರುತ್ತವೆ. ಇದು ಅಭಿಮಾನಿಗಳ ವಲಯದಲ್ಲಿ ಇರುವ ಚರ್ಚೆ. ಆದರೆ, ಇದನ್ನು ಅವರು ಸುಳ್ಳು ಮಾಡಿದ್ದಾರೆ. ಈ ಮೊದಲು ಒಟ್ಟಿಗೆ ಕಾಣಿಸಿಕೊಂಡಾಗ ಪರಸ್ಪರ ಹಗ್ ಮಾಡಿದ್ದು ಇದೆ. ಈಗ ‘ಟಾಕ್ಸಿ’ ವಿಷಯದಲ್ಲಿ ಇವರ ಬಂಧ ಮತ್ತೆ ಇದೆ.
ಟೀಸರ್ ರಿಲೀಸ್ ಬಳಿಕ ಟ್ವೀಟ್ ಮಾಡಿದ್ದ ಸುದೀಪ್, ‘ಯಶ್’ಗೆ ಶುಭಾಶಯಗಳು. ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಸಮಯ.ಈ ಹೊಸ ಹೆಜ್ಜೆ ನಿಮ್ಮ ಅದೃಷ್ಟದ ಬಳಿ ಕೊಂಡೊಯ್ಯಲಿ. ನೀವು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ’ ಎಂದಿದ್ದರು. ಈ ಟ್ವೀಟ್ ಗೆ ಯಶ್ ಪ್ರತಿಕ್ರಿಯೆ.
ಇದನ್ನೂ ಓದಿ: ‘ಅಲೆಗಳ ವಿರುದ್ಧ ಹೋಗಲು ಸಮಯ ಬೇಕು’; ‘ಟಾಕ್ಸಿಕ್’ ಟೀಸರ್‌ಗೆ ಸುದೀಪ್ ವಿಶ್
‘ಧನ್ಯವಾದಗಳು ಸರ್. ಏಕಾಗ್ರತೆ ಅಥವಾ ಸಮಗ್ರತೆಯನ್ನು ಕಳೆದುಕೊಂಡೆ, ಪ್ರಾಮಾಣಿಕವಾಗಿ ಮತ್ತು ಧೈರ್ಯದಿಂದ ಹಾಗೆಯೇ ಕೆಲಸ ಮಾಡಬೇಕೆಂದು ನನ್ನ ಹಿರಿಯರಿಂದ ಕಲಿತಿದ್ದೇನೆ. ಆ ಹಿರಿಯರಲ್ಲಿ ನೀವು’ ಎಂದು ಅವರು ಉತ್ತರ ನೀಡಿದ್ದಾರೆ.
ಅತ್ಯುತ್ತಮ ವಿಶ್ಸ್… @TheNameIsYash
ಉಬ್ಬರವಿಳಿತದ ವಿರುದ್ಧ ಹೋಗಲು ಇದು ಯಾವಾಗಲೂ ಬಹಳಷ್ಟು ತೆಗೆದುಕೊಳ್ಳುತ್ತದೆ. ಈ ಹೊಸ ಹೆಜ್ಜೆಯು ನಿಮ್ಮನ್ನು ಹಣೆಬರಹಕ್ಕೆ ಹತ್ತಿರಕ್ಕೆ ಕೊಂಡೊಯ್ಯಲಿ, ನೀವು ನಿಮ್ಮ ಕಣ್ಣುಗಳನ್ನು ಹಾಕಿದ್ದೀರಿ. ಚೀರ್ಸ್ ♥️ಈ https://t.co/2YZ8NU3KEF
— ಕಿಚ್ಚ ಸುದೀಪ (@KicchaSudeep) ಜನವರಿ 8, 2026
ಧನ್ಯವಾದಗಳು, ಸರ್. ನನ್ನ ಹಿರಿಯರಿಂದ ನಾನು ಕಲಿತ ಒಂದು ವಿಷಯವೆಂದರೆ, ಅವರಲ್ಲಿ ನೀವೇ, ಗಮನ, ಪ್ರಾಮಾಣಿಕತೆ ಮತ್ತು ಧೈರ್ಯದಿಂದ ಕರಕುಶಲತೆಯನ್ನು ಮೇಲಕ್ಕೆತ್ತುವ ಪ್ರಯತ್ನ.🙂
— ಯಶ್ (@TheNameIsYash) ಜನವರಿ 11, 2026
ಸುದೀಪ್ ಹಾಗೂ ಯಶ್ ಪರಪಸ್ಪರ ಪ್ರತಿಕ್ರಿಯೆ ನೀಡಿದ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಬಾಂಧವ್ಯ ಹೀಗೆ ಮುಂದುವರಿದರೆ ಚಿತ್ರರಂಗಕ್ಕೆ ಸಹಕಾರಿ ಆಗಲಿದೆ ಎಂದು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.