Headlines

ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಕಾರ್ಮಿಕನ ಮೇಲೆ ಮಾರಣಾಂತಿಕ ಹಲ್ಲೆ!

ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಕಾರ್ಮಿಕನ ಮೇಲೆ ಮಾರಣಾಂತಿಕ ಹಲ್ಲೆ!


ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿ ಕಾರ್ಮಿಕನ ಮೇಲೆ ಮಾರಣಾಂತಿಕ ಹಲ್ಲೆ!

ಮಂಗಳೂರು, ಜನವರಿ 12: ನಗರದ ಕಾವೂರು ಪ್ರದೇಶದಲ್ಲಿ ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿ ಕಾರ್ಮಿಕನ ಮೇಲೆ ನಾಲ್ವರು ಯುವಕರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಿನ್ನೆ (ಜ.11) ಸಂಜೆ ನಡೆದಿದೆ. ಜಾರ್ಖಂಡ್ ಮೂಲದ ಕಾರ್ಮಿಕ ದಿಲ್ಶಾನ್ ಅನ್ಸಾರಿಯನ್ನು ತಡೆದು ಥಳಿಸಿದ ಆರೋಪಿಗಳ ಮೇಲೆ ಎಫ್ಐಆರ್ ಆಗಿದೆ.

ದಾಖಲೆ ತೋರಿಸುವಂತೆ ಒತ್ತಾಯ

ದಿಲ್ಶಾನ್ ಅನ್ಸಾರಿ ಕಳೆದ 10–15 ವರ್ಷಗಳಿಂದ ವರ್ಷಕ್ಕೆ 4–5 ತಿಂಗಳ ಕಾಲ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಿನ್ನೆ ಸಂಜೆ ಕಾವೂರಿನ ಬಳಿ ಸ್ಥಳೀಯರಾದ ಸಾಗರ್, ಧನುಷ್, ಲಾಲು ಅಲಿಯಾಸ್ ರತೀಶ್ ಹಾಗೂ ಮೋಹನ್ ಎಂಬ ನಾಲ್ವರು ಯುವಕರು ದಿಲ್ಶಾನ್ ಅವರನ್ನು ತಡೆದು ನಿಲ್ಲಿಸಿ, ತಾನು ಭಾರತೀಯ ಪ್ರಜೆ ಎಂಬುದಕ್ಕೆ ದಾಖಲೆ ತೋರಿಸುವಂತೆ ಒತ್ತಾಯಿಸಿದ್ದಾರೆ. ದಿಲ್ಶಾನ್ ತಕ್ಷಣ ದಾಖಲೆ ತೋರಿಸಿದ ಆರೋಪಿಗಳು ಆತನ ಮೇಲೆ ತಲೆಗೆ ತೀವ್ರ ಹಲ್ಲೆ. ಪರಿಣಾಮವಾಗಿ ದಿಲ್ಶಾನ್ ಅವರ ತಲೆಗೆ ತೀವ್ರ ಗಾಯಗಳಾಗಿದ್ದರೆ, ರಕ್ತಸ್ರಾವ ಉಂಟಾಗಿದೆ.

ನಾಲ್ವರ ವಿರುದ್ಧ ಎಫ್‌ಐಆರ್

ಹಲ್ಲೆಯ ವೇಳೆ ಸ್ಥಳದಲ್ಲಿದ್ದ ಒಬ್ಬ ಹಿಂದು ಮಹಿಳೆ ಮಧ್ಯ ಪ್ರವೇಶಿಸಿ ದಿಲ್ಶಾನ್ ಅವರನ್ನು ರಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ. ಹಲ್ಲೆಯ ಬಳಿಕ ದಿಲ್ಶಾನ್ ಮನೆಗೆ ತೆರಳಿದ್ದು, ನಂತರ ಕಾವೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ನಾಲ್ವರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಕುರಿತು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದು, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *