ಉಚ್ಛಾಟಿತ ಶಾಸಕನ ಸಂಪರ್ಕದಲ್ಲಿದ್ಯಾ ಬಿಜೆಪಿ ಹೈಕಮಾಂಡ್​?: ಯತ್ನಾಳ್​​ ಸ್ಫೋಟಕ ಹೇಳಿಕೆ

ಉಚ್ಛಾಟಿತ ಶಾಸಕನ ಸಂಪರ್ಕದಲ್ಲಿದ್ಯಾ ಬಿಜೆಪಿ ಹೈಕಮಾಂಡ್​?: ಯತ್ನಾಳ್​​ ಸ್ಫೋಟಕ ಹೇಳಿಕೆ


ವಿಜಯಪುರ, ಜನವರಿ 12: ಬಿಜೆಪಿಯಿಂದ ಉಚ್ಛಾಟನೆಗೊಂಡಿರೋ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಹೊಸ ಬಾಂಬ್ ಸಿಡಿಸಿದ್ದಾರೆ. ಹೈಕಮಾಂಡ್ ನಾಯ್ಯಕರು ತಮ್ಮ ಜೊತೆ ನೇರ ಸಂಪರ್ಕದಲ್ಲಿ ಇರೋದಾಗಿ ಯತ್ನಾಳ್ ಹೇಳಿರೋದೀಗ ಭಾರಿ ಕುತೂಹಲ ಕೆರಳಿಸಿದೆ. ವಿಜಯಪುರ ಶಾಸಕ ಮರಳಿ ಬಿಜೆಪಿಗೆ ಬರ್ತಾರಾ ಎಂಬ ಪ್ರಶ್ನೆಗಳು ಇತ್ತೀಚೆಗೆ ಮೇಲಿಂದ ಮೇಲೆ ಕೇಳಿಬರುತ್ತಿವೆ. ಈ ನಡುವೆ ಉಚ್ಛಾಟಿತ ನಾಯಕನ ಹೇಳಿಕೆ ಹೊಸ ಚರ್ಚೆ ಹುಟ್ಟುಹಾಕಿದೆ.
ಕಾಂಗ್ರೆಸ್ ಹಿರಿಯ ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕುರಿತು ಶಾಸಕ ಯತ್ನಾಳ್ ಮಹತ್ವದ ಹೇಳಿಕೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡೋದಾಗಿ. ಜೊತೆಗೆ, ಪಕ್ಷದ ಅಭ್ಯರ್ಥಿಗಳು ಆಹ್ವಾನಿಸಿದರೆ ಪ್ರಚಾರಕ್ಕೂ ಸಿದ್ಧವ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *