ಇಂದಿನ ದಿನ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸದ ಕೃಷ್ಣಪಕ್ಷದ ದಶಮಿ ತಿಥಿಯಾಗಿದೆ. ಚಂದ್ರನು ವಿಶಾಖ ನಕ್ಷತ್ರದ ತುಲಾ ರಾಶಿಯಲ್ಲಿ ಸಂಚರಿಸುತ್ತಾನೆ. ಇಂದು ಬೆಳಗಿನ ಜಾವ 4:02ಕ್ಕೆ ಶುಕ್ರ ಗ್ರಹವು ಧನು ರಾಶಿಯಿಂದ ಮಕರ ರಾಶಿಯು ಪ್ರವೇಶಿಸಿರುವುದು ವಿಶೇಷವಾಗಿದೆ. ಸಂಕ್ರಾಂತಿಯ ಪೂರ್ವಭಾವಿಯಾಗಿರುವ ಈ ದಿನವು ಸೂರ್ಯ ಭಗವಾನರು ಉತ್ತರಾಯಣಕ್ಕೆ ಪ್ರವೇಶಿಸುವ ಶುಭ ಕಾಲವನ್ನು ತಿಳಿಸುತ್ತದೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ನಿರ್ಮಾಣ ಡಾ ಬಸವರಾಜ ಗುರೂಜಿ ಇಂದಿನ ದಿನ ಭವಿಷ್ಯವನ್ನು ಇಲ್ಲಿ ವಿವರಿಸಲಾಗಿದೆ.
ಇಂದು ರಾಹುಕಾಲವು ಮಧ್ಯಾಹ್ನ 3:19 ರಿಂದ 4:45 ರವರೆಗೆ ಇರುತ್ತದೆ. ಸರ್ವ ಸಿದ್ಧಿ ಕಾಲ, ಸಂಕಲ್ಪಕಾಲ ಮತ್ತು ಶುಭಕಾಲವು ಮಧ್ಯಾಹ್ನ 12:28 ರಿಂದ 1:54 ರವರೆಗೆ ಇರುತ್ತದೆ.