ಕಿಚ್ಚ ಸುದೀಪ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಾರೆ. ಇತ್ತೀಚೆಗೆ ಅವರು ‘ಕುಣಿಗಲ್ ಉತ್ಸವ’ಕ್ಕೆ ಅತಿಥಿಯಾಗಿ ತೆರಳಿದ್ದರು. ಈ ವೇಳೆ ವೇದಿಕೆ ಮೇಲೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಸೇರಿದಂತೆ ಹಲವರು ಇದ್ದಾರೆ. ನಿರಂಜನ್ ದೇಶಪಾಂಡೆ ಅವರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ವೇದಿಕೆಯ ಮೇಲೆ ಸುದೀಪ್ ಮಾತನಾಡುವಾಗ ಅನೇಕರು ಗಿಲ್ಲಿ ಗಿಲ್ಲಿ (ಗಿಲ್ಲಿ ನಾಟಾ) ಎಂದು ಕೂಗಿದ್ದಾರೆ. ಈ ವೇಳೆ ಸುದೀಪ್ ಕಿವಿಮಾತು ಹೇಳಿದ್ದಾರೆ.
ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫಿನಾಲೆ. ಶನಿವಾರ ಹಾಗೂ ಭಾನುವಾರ ಎಪಿಸೋಡ್ ಪ್ರಸಾರ ಕಾಣಲಿದೆ. ಇದಕ್ಕೆ ಕೌಂಟ್ ಶುರುವಾಗಿದೆ. ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿದೆ. ಗಿಲ್ಲಿ, ಅಶ್ವಿನಿ ಹಾಗೂ ಇತರ ಸ್ಪರ್ಧಿಗಳು ರೇಸ್‌ನಲ್ಲಿ ಇದ್ದಾರೆ. ಈಗ ಸುದೀಪ್ ಆಡಿದ ಮಾತು ಗಮನ ಸೆಳೆದಿದೆ.
ಇತ್ತೀಚೆಗೆ ಕುಣಿಗಲ್ ಉತ್ಸವ ಅದ್ದೂರಿಯಾಗಿ ನಡೆಯಿತು. ಹ್ಯಾರಿಸ್ ನಲ್ಪಾಡ್ ಅವರ ಕೋರಿಕೆ ಸುದೀಪ್ ಈ ಕಾರ್ಯಕ್ರಮಕ್ಕೆ ತೆರಳಿದ್ದರು. ವೇದಿಕೆ ಮೇಲೆ ನಿಂತು ಸಾವಿರಾರು ಜನರನ್ನು ನೋಡಿದಾಗ ಸುದೀಪ್ ಅವರಿಗೆ ಖುಷಿಯಾಯಿತು. ಈ ವೇಳೆ ಅವರು ಬಿಗ್ ಬಾಸ್ ಬಗ್ಗೆ ಪ್ರಸ್ತಾಪ ಮಾಡಿದರು. ‘ಬಿಗ್ ಬಾಸ್ ಫಿನಾಲೆ ನೋಡ್ತೀರಾ’ ಎಂದು ಜನರ ಬಳಿ ಪ್ರಶ್ನೆ ಮಾಡಿದರೆ, ಜನರು ‘ಹೌದು’ ಎಂದು ಕೂಗಿದರು.
‘ನಿಮ್ಮಿಷ್ಟದ ಸ್ಪರ್ಧಿಗಳಿಗೆ ವೋಟ್ ಮಾಡಿ. ಕಿತ್ತಾಡಿಕೊಳ್ಳಬೇಡಿ’ ಎಂದು ಕಿಚ್ಚ ಕಿವಿಮಾತು ಹೇಳಿದರು. ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಕಿತ್ತಾಟ ಜೋರಾಗಿದೆ. ಸ್ಪರ್ಧಿಗಳ ಅಭಿಮಾನಿಗಳ ಮಧ್ಯೆಯೇ ಕಿತ್ತಾಟ ನಡೆಯುತ್ತಿದೆ. ಈ ಕಾರಣದಿಂದ ಸುದೀಪ್ ಅವರು ಈ ರೀತಿಯ ಕಿವಿಮಾತು ಹೇಳಬಹುದು ಎನ್ನುತ್ತಿದ್ದಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್ ಮಾತಿಗೂ ಬೆಲೆ ಕೊಡದ ಗಿಲ್ಲಿ; ಅಸಮಾಧಾನ ಹೊರಹಾಕಿದ ಬಿಗ್ ಬಾಸ್
ಬಿಗ್ ಬಾಸ್ ಅಲ್ಲಿ ಯಾರು ಗೆಲ್ಲುತ್ತಾರೆ,ಯಾರು ಸೋಲುತ್ತಾರೆ ಎಂಬುದು ಜನರ ವೋಟ್‌ಗಳ ಮೇಲೆ ನಿರ್ಧಾರವಾಗುತ್ತದೆ. ಈ ಬಾರಿ ಯಾರು ವಿನ್ ಆಗುತ್ತಾರೆ ಎಂಬ ಕುತೂಹಲ ಮೂಡಿದೆ. ಜನವರಿ 18ರಂದು ಈ ಪ್ರಶ್ನೆಗೆ ಉತ್ತರ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.