ಬೆಂಗಳೂರು, ಜನವರಿ 13: ಈ ಹಿಂದೆ 40 ವರ್ಷ ಮೇಲ್ಪಟ್ಟವರಲ್ಲಿ ಹೃದಯಘಾತ (ಹೃದಯಾಘಾತ) ಸಂಭವಿಸಿದೆ. ಆದರೆ ಈಗ ಯುವ ಸಮೂಹವನ್ನೇ ಹೃದಯಾಘಾತ ಕಾಡಲಾರಂಭಿಸಿದೆ. ಯುವಕರಲ್ಲಿ ಹೆಚ್ಚು ಹೃದಯಾಘಾತ ಸಂಭವಿಸುತ್ತಿರುವ ಬಗ್ಗೆ, ಬಹುತೇಕ ರಾಜಧಾನಿ ಬೆಂಗಳೂರಿನಲ್ಲಿ (ಬೆಂಗಳೂರು) ಹೆಚ್ಚು ಹೃದಯಘಾತ ಹಿನ್ನಲೆ ಶಸ್ತ್ರಚಿಕಿತ್ಸೆಗೆ ಓಟಿಗಳ ಬೆಡ್ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ ಸರ್ಕಾರ ಬೆಂಗಳೂರಿನಲ್ಲಿ 5 ಜಯದೇವ ಯೂನಿಟ್ ಶುರು ಮಾಡಲು ಮುಂದಾಗಿದೆ.
5 ಜಯದೇವ ಯೂನಿಟ್ ಶುರು ಮಾಡುವ ಕ್ಯಾಬಿನೆಟ್ ಬಗ್ಗೆ ಅನುಮೋದನೆ ಪಡೆಯಲು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿದೆ. ಜಯದೇವದಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಸಾವಿರಕ್ಕಿಂತ ಕಡಿಮೆ ಇದ್ದ ವಾಕ್ ಇನ್ ರೋಗಿಗಳ ಸಂಖ್ಯೆ ಈಗ 2 ಸಾವಿರ ಗಡಿದಾಟಿದೆ. ಹೀಗಾಗಿ ಹೊಸದಾಗಿ ರಚನೆಯಾದ ಗ್ರೇಟರ್ ಬೆಂಗಳೂರು 5 ಕಾರ್ಪೊರೇಷನ್‌ಗಳಲ್ಲಿ ಜಯದೇವ ಸ್ಯಾಟಲೈಟ್ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾವನೆಯನ್ನು ನೀಡಿದ್ದು ಈಗ ವೈದ್ಯಕೀಯ ಶಿಕ್ಷಣ ಇಲಾಖೆಯು ಈ ಹಂತದಲ್ಲಿ ಗ್ರೀನ್ ಸಿಗ್ನಲ್ ಪಡೆಯಲು ಮುಂದಾಗಿದೆ. ಜನಸಂಖ್ಯೆಗೆ ತಲಾ 100 ಹಾಸಿಗೆಗಳ ಸಾಮರ್ಥ್ಯದ ಐದು ಸ್ಯಾಟಲೈಟ್ ಕೇಂದ್ರಗಳನ್ನು ಪ್ರಾರಂಭಿಸಲು ಮುಂದಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ರೋಗಿಗಳ ಸಂಖ್ಯೆ ಹೆಚ್ಚಾಗಿ ಜಯದೇವ ಆಸ್ಪತ್ರೆಯ ಒತ್ತಡ ಹೆಚ್ಚಾಗಿರುತ್ತದೆ. ಹೀಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಐದು ಕಾರ್ಪೊರೇಷನ್‌ಗಳಲ್ಲಿ ಒಂದು ಸ್ಯಾಟಲೈಟ್ ಕೇಂದ್ರ ಆರಂಭಕ್ಕೆ ಮುಂದಾಗಿದೆ.
ಓದಿ: ಹೃದಯ ಚೆನ್ನಾಗಿರುತ್ತದೆ ಅಂದ್ರೆ ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಈ 3 ಆಹಾರಗಳನ್ನು ಸೇವಿಸಬೇಡಿ
ಒಟ್ಟಿನಲ್ಲಿ ರಾಜಧಾನಿಯಲ್ಲಿ ಇದೀಗ ಜಯದೇವ ಆಸ್ಪತ್ರೆಯ ಮೇಲೆ ಒತ್ತಡದ ಜೊತೆಗೆ ಟ್ರಾಫಿಕ್ ಸಮಸ್ಯೆಯಿಂದ ಬೇಗ ಆಸ್ಪತ್ರೆ ತಲುಪಲು ಸಾಧ್ಯವಾಗಿಲ್ಲ ಹಿನ್ನಲೆ ಬೆಂಗಳೂರು 5 ಜಯದೇವ ಘಟಕ ಸ್ಥಾಪನೆಗೆ ಇಲಾಖೆ ಮುಂದಾಗಿದೆ. ಸರ್ಕಾರ ಈ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ