Gold Rate Today Bangalore: ಹತ್ತು ಗ್ರಾಮ್ ಬೆಳ್ಳಿ ಬೆಲೆ 2,750 ರೂಗೆ ಏರಿಕೆ

Gold Rate Today Bangalore: ಹತ್ತು ಗ್ರಾಮ್ ಬೆಳ್ಳಿ ಬೆಲೆ 2,750 ರೂಗೆ ಏರಿಕೆ


ಬೆಂಗಳೂರು, ಜನವರಿ 13: ಚಿನ್ನ, ಬೆಳ್ಳಿ ಬೆಲೆಗಳ ಏರಿಕೆ ಮುಂದುವರಿದಿದೆ. ಭಾರತದಲ್ಲಿ ಚಿನ್ನದ ಬೆಲೆ (ಚಿನ್ನದ ದರ) ಅಲ್ಪ ಸ್ವಲ್ಪವಾದರೆ, ವಿದೇಶಗಳಲ್ಲಿ ತುಸು ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಗ್ರಾಮಕ್ಕೆ 35 ರೂ ಬೆಲೆ ಜಾಸ್ತಿಯಾಗಿದೆ. ಬೆಳ್ಳಿ ಬೆಲೆಯ ಭರ್ಜರಿ ಓಟ ಇವತ್ತೂ ಮುಂದುವರಿದಿದೆ. ಮಂಗಳವಾರ ಬೆಳ್ಳಿ ಬೆಲೆ 5 ರೂ ಏರಿ ಹೊಸ ದಾಖಲೆ ಬರೆದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,30,650 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,42,530 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 27,500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,30,650 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 27,500 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,200 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 13ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,253 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,065 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,690 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,253 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,065 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 13,065 ರೂ
  • ಬೆಲೆ: 13,170 ರೂ
  • ಮುಂಬೈ: 13,065 ರೂ
  • ದೆಹಲಿ: 13,080 ರೂ
  • ಕೋಲ್ಕತಾ: 13,065 ರೂ
  • ಕೇರಳ: 13,065 ರೂ
  • ಅಹ್ಮದಾಬಾದ್: 13,070 ರೂ
  • ಜೈಪುರ: 13,080 ರೂ
  • ಲಕ್ನೋ: 13,080 ರೂ
  • ಭುವನೇಶ್ವರ್: 13,065 ರೂ

ಇದನ್ನೂ ಓದಿ: ನವೆಂಬರ್‌ನಲ್ಲಿ 0.7 ಪ್ರತಿಶತ ಇದ್ದ ಹಣದುಬ್ಬರ ಡಿಸೆಂಬರ್‌ನಲ್ಲಿ ಶೇ. 1.3ಕ್ಕೆ ಏರಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 585 ರಿಂಗಿಟ್ (13,014 ರೂಪಾಯಿ)
  • ದುಬೈ: 514.75 ಡಿರಾಮ್ (12,645 ರೂಪಾಯಿ)
  • ಅಮೆರಿಕ: 144 ಡಾಲರ್ (12,994 ರೂಪಾಯಿ)
  • ಸಿಂಗಾಪುರ: 183.80 ಸಿಂಗಾಪುರ ಡಾಲರ್ (12,891 ರೂಪಾಯಿ)
  • ಕತಾರ್: 513 ಕತಾರಿ ರಿಯಾಲ್ (12,699 ರೂ)
  • ಸೌದಿ ಅರೇಬಿಯಾ: 514.75 ಸೌದಿ ರಿಯಾಲ್ (12,645 ರುಪಾಯಿ)
  • ಓಮನ್: 54.65 ಒಮಾನಿ ರಿಯಾಲ್ (12,808 ರೂಪಾಯಿ)
  • ಕುವೇತ್: 41.91 ಕುವೇತಿ ದಿನಾರ್ (12,367 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 275 ರೂ
  • ಬೆಲೆ: 292 ರೂ
  • ಮುಂಬೈ: 275 ರೂ
  • ದೆಹಲಿ: 275 ರೂ
  • ಕೋಲ್ಕತಾ: 275 ರೂ
  • ಕೇರಳ: 292 ರೂ
  • ಅಹ್ಮದಾಬಾದ್: 275 ರೂ
  • ಜೈಪುರ: 275 ರೂ
  • ಲಕ್ನೋ: 275 ರೂ
  • ಭುವನೇಶ್ವರ್: 292 ರೂ
  • ಪುಣೆ: 275

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *