Video: ತನ್ನ ಸ್ನೇಹಿತೆಯ ಜತೆಗೆ ರಸ್ತೆ ದಾಟಲು ಹರಸಾಹಸ ಪಡುತ್ತಿರುವ ವಿದೇಶಿ ಮಹಿಳೆ

Video: ತನ್ನ ಸ್ನೇಹಿತೆಯ ಜತೆಗೆ ರಸ್ತೆ ದಾಟಲು ಹರಸಾಹಸ ಪಡುತ್ತಿರುವ ವಿದೇಶಿ ಮಹಿಳೆ


ಬೆಂಗಳೂರು, ಜನವರಿ 13: ರಸ್ತೆಯ ತುಂಬಾ ಗಿಜಿಗುಟ್ಟುವ ವಾಹನಗಳು, ಒಂದರ ಹಿಂದೆ ಒಂದರಂತೆ ಸಾಲಾಗಿ ಬಂದು ಬಿಟ್ಟರೆ ಮುಗಿದೇ ಹೋಯ್ತು. ಎಷ್ಟು ಆರಾಮಾಗಿ ರಸ್ತೆ ದಾಟುವವರು ಒಂದು ಕ್ಷಣ ಕಸಿವಿಸಿಗೊಳ್ಳುತ್ತಾರೆ. ಇನ್ನು ಬೆಂಗಳೂರು (ಬೆಂಗಳೂರು) ಸಂಚಾರ ದಟ್ಟಣೆಯ ನಡುವೆ ರಸ್ತೆ ದಾಡುವ ಬಗ್ಗೆ ಕೇಳಬೇಕೆ. ಇಲ್ಲೊಬ್ಬ ವಿದೇಶಿ ಮಹಿಳೆ (ವಿದೇಶಿ ಮಹಿಳೆ) ಇದೇ ರೀತಿಯ ಪರಿಸ್ಥಿತಿ. ವಿದೇಶಿ ಮಹಿಳೆಯೂ ತನ್ನ ಸ್ನೇಹಿತೆಯ ಜೊತೆಗೆ ಬೆಂಗಳೂರಿನಲ್ಲಿ ಜನದಟ್ಟಣೆಯ ರಸ್ತೆಯನ್ನು ದಾಟಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ವಿದೇಶಿ ಮಹಿಳೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

lost.with.ines ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಇನೆಸ್ ಫರಿಯಾ ಎಂಬ ವಿದೇಶಿ ಮಹಿಳೆ ತನ್ನ ಸ್ನೇಹಿತೆಯ ಜೊತೆಗೆ ಬೆಂಗಳೂರಿನಲ್ಲಿ ಜನನಿಬಿಡ ರಸ್ತೆಯನ್ನು ದಾಟಲು ಪ್ರಯತ್ನಿಸುತ್ತಿದ್ದಾಳೆ. ಈ ವಿಡಿಯೋ ಕ್ಲಿಪ್‌ನಲ್ಲಿ ಭಾರತದಲ್ಲಿ ರಸ್ತೆ ದಾಟಲು ಪ್ರಯತ್ನಿಸುವುದು ಹೀಗೇ ಇರಲಿ ಎಂದು ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಭಾರತದಲ್ಲಿ ನೀವು ರಸ್ತೆ ದಾಟುವುದಿಲ್ಲ. ನೀವು ವಿಧಿಯೊಂದಿಗೆ ಮಾತುಕತೆ ನಡೆಸುತ್ತೀರಿ ಎಂದು ಶೀರ್ಷಿಕೆಯಲ್ಲಿ ಬರೆದಿರುವುದನ್ನು ನೋಡಬಹುದು. ಇಲ್ಲಿ ಚಲಿಸುವ ವಾಹನಗಳ ನಡುವೆ ವಿದೇಶಿ ಮಹಿಳೆಯರೂ ಎಚ್ಚರಿಕೆಯಿಂದ ನಡೆದುಕೊಂಡು ಹೋಗುವುದನ್ನು ಕಾಣಬಹುದು. ವಾಹನಗಳು ಸಂಚಾರ ಮಾಡುತ್ತಿರುವಾಗಲೇ ಜಾಗರೂಕರಾಗಿರುವುದನ್ನು ಹಾಗೂ ವಾಹನ ಬರದಂತೆ ರಸ್ತೆ ದಾಟಲು ಹಿಂಜರಿಯುವುದನ್ನು ನೋಡಲಾಗಿದೆ.

ಇದನ್ನೂ ಓದಿ:ನನ್ನನ್ನು ಬಲಶಾಲಿಯನ್ನಾಗಿಸಿದ ಬೆಂಗಳೂರಿಗೆ ಧನ್ಯವಾದ ತಿಳಿಸಿದ ಯುವತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಮಾಡಲಾಗಿದೆ. ಒಬ್ಬ ಬಳಕೆದಾರ ಇಲ್ಲಿ ಅಷ್ಟೊಂದು ಟ್ರಾಫಿಕ್ ಇಲ್ಲ, ಎಂದು ಬರೆದಿದ್ದಾರೆ. ಇತರರು, ಕಿಕ್ಕಿರಿದ ವಾಹನಗಳ ನಡುವೆ ರಸ್ತೆ ದಾಟುವುದು ಜೀವ ಕೈಯಲ್ಲಿಟ್ಟು ಕೊಂಡ ಹಾಗೆ ಎಂದು ಹೇಳಿದರು. ಮತ್ತೊಬ್ಬರು, ಏನೇ ಹೇಳಿ ನೀವು ಹೇಳಿದ ಮಾತು ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 12:09 pm, ಮಂಗಳವಾರ, 13 ಜನವರಿ 26





Source link

Leave a Reply

Your email address will not be published. Required fields are marked *