ಧಾರುಣವಾಗಿ ಕುಸಿದ ‘ರಾಜಾ ಸಾಬ್’ ಗಳಿಕೆ, ‘ಆದಿಪುರುಷ್’, ‘ಸಾಹೋ’ಗಿಂತಲೂ ಕಳಪೆ

ಧಾರುಣವಾಗಿ ಕುಸಿದ ‘ರಾಜಾ ಸಾಬ್’ ಗಳಿಕೆ, ‘ಆದಿಪುರುಷ್’, ‘ಸಾಹೋ’ಗಿಂತಲೂ ಕಳಪೆ


ಪ್ರಭಾಸ್ (ಪ್ರಭಾಸ್) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಜನವರಿ 09 ರಂದು ಬಿಡುಗಡೆ ಆಗುತ್ತಿದೆ. ಪ್ರಭಾಸ್ ಅವರ ಈ ಹಿಂದಿನ ಸಿನಿಮಾಗಳ ರೀತಿಯಲ್ಲೇ ಬಿಡುಗಡೆ ಆದ ಮೊದಲ ದಿನ ಭಾರಿ ಗಳಿಕೆಯನ್ನು ಸಿನಿಮಾ ಮಾಡಿತ್ತು. ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್ ನಲ್ಲಿ ಸುಮಾರು 112 ಕೋಟಿಗೂ ಅಧಿಕ ಮೊತ್ತವನ್ನು ಸಿನಿಮಾ ಮಾಡಿತ್ತು. ಆದರೆ ಎರಡನೇ ದಿನದಿಂದಲೇ ಸಿನಿಮಾದ ಉರುಳುವಿಕೆ ಪ್ರಾರಂಭವಾಯ್ತು. ಸಿನಿಮಾ ನೋಡಿದವರು ನೆಗೆಟಿವ್ ಅಭಿಪ್ರಾಯ ಹಂಚಿಕೊಂಡರು. ಬಹಳ ಕ್ರಿಂಜ್ ಆದ ಕತೆ, ದೃಶ್ಯಗಳನ್ನು ಸಿನಿಮಾ ಹೊಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಎರಡನೇ ದಿನದಿಂದಲೇ ಸಿನಿಮಾದ ಕಲೆಕ್ಷನ್ ಕುಸಿಯಲು ಶುರುವಾಯಿತು. ಬಿಡುಗಡೆ ಆದ ಮೂರೇ ದಿನಕ್ಕೆ ಸಿನಿಮಾದ ಗಳಿಕೆಯಲ್ಲಿ 88% ಕುಸಿತ ಕಂಡಿದೆ.

ಮೊದಲ ದಿನ 112 ಕೋಟಿ ಗಳಿಕೆ ಮಾಡಿದ್ದ ‘ದಿ ರಾಜಾ ಸಾಬ್’ ಸಿನಿಮಾ ಮೂರು ದಿನದ ಬಳಿಕ ಸೋಮವಾರ ಗಳಿಸಿರುವುದು ಕೇವಲ 6 ಕೋಟಿ ರೂಪಾಯಿ. ಆಂಧ್ರ, ತೆಲಂಗಾಣಗಳಲ್ಲಿ ಈಗ ಸಂಕ್ರಾಂತಿ ರಜೆಗಳು ಚಾಲ್ತಿಯಲ್ಲಿದ್ದರೂ ಸಹ ‘ದಿ ರಾಜಾ ಸಾಬ್’ ಸಿನಿಮಾ ಜನರನ್ನು ಸೆಳೆಯಲು ವಿಫಲವಾಗಿದೆ. ಮೂರನೇ ದಿನಕ್ಕೆ ಸಿನಿಮಾದ ಗಳಿಕೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದ್ದು, ಪ್ರಭಾಸ್ ಅವರ ಈ ಹಿಂದಿನ ಫ್ಲಾಪ್‌ಗಳಾದ ‘ಆದಿಪುರುಷ್’ ಮತ್ತು ‘ಸಾಹೋ’ ಸಿನಿಮಾಗಳು ಕೂಡ ಕಳಪೆ ಆಗಿರುವ ‘ದಿ ರಾಜಾ ಸಾಬ್’ ಸಿನಿಮಾದ ಗಳಿಕೆ.

ಇದನ್ನೂ ಓದಿ:ಶಬರಿಮಲೆಗೆ ಹೋಗಿ ಬಂದ, ಬಳಿಕ ಪತ್ನಿ ಕೊಂದ: ಸಿನಿಮಾ ಸ್ಟೈಲ್ ನಲ್ಲಿ ನಡೀತು ಹತ್ಯೆ!

ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್ ನಲ್ಲಿ 112 ಕೋಟಿ ಗಳಿಸಿದ್ದ ರಾಜಾ ಸಾಬ್. ಎರಡನೇ ದಿನ ಅಂದರೆ ಶನಿವಾರ ಭಾರತ ಬಾಕ್ಸ್ ಆಫೀಸ್ ನಲ್ಲಿ 30 ಕೋಟಿ ರೂಪಾಯಿ ಗಳಿಸಿತು. ಬಳಿಕ ಭಾನುವಾರ ಈ ಕಲೆಕ್ಷನ್ ಇನ್ನಷ್ಟು ತಗ್ಗಿ 22 ಕೋಟಿಗೆ ಬಂತು. ಬಳಿಕ ಸೋಮವಾರದ ಕಲೆಕ್ಷನ್ ಅಂತೂ ಇನ್ನು ಧಾರುಣವಾಗಿ ಕುಸಿದಿದ್ದು ಕೇವಲ 4 ಕೋಟಿ ಗಳಿಕೆ ಮಾಡಿದೆ. ವಿದೇಶಿ ಕಲೆಕ್ಷನ್ ಸೇರಿದಂತೆ ಸುಮಾರು 6 ಕೋಟಿ ರೂಪಾಯಿಗಳನ್ನು ಹೊಂದಿದೆ. ಆ ಮೂಲಕ ಪ್ರಭಾಸ್ ಅವರ ಇತ್ತೀಚೆಗಿನ ಫ್ಲಾಪ್‌ಗಳಲ್ಲಿಯೇ ಧಾರುಣ ಫ್ಲಾಪ್ ಆಗುತ್ತಿದೆ ದಾಪುಗಾಲು ಹಾಕುತ್ತಿದೆ ‘ದಿ ರಾಜಾ ಸಾಬ್’ ಸಿನಿಮಾ.

‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕಾಮಿಡಿ ಹಾರರ್ ಕತೆ ಒಳಗೊಂಡಿದೆ. ಸಿನಿಮಾದಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ನಾಯಕಿಯರು. ಸಿನಿಮಾ ನಿರ್ದೇಶನ ಮಾಡಿರುವುದು ಮಾರುತಿ. ಸಿನಿಮಾದಲ್ಲಿ ಸಂಜಯ್ ಮತ್ತು ಬೊಮನ್ ಇರಾನಿ ಅಂಥಾ ಪ್ರತಿಭಾವಂತ ನಟರೂ ಇದ್ದಾರೆ. ಸಿನಿಮಾ ಬಿಡುಗಡೆಗೆ ಮುಂಚೆ ಮಾತನಾಡಿದ್ದ ನಿರ್ದೇಶಕ ಮಾರುತಿ, ಭಾರತೀಯ ಚಿತ್ರರಂಗದಲ್ಲೇ ಯಾರೂ ತೆಗೆಯದ ರೀತಿ ನಾವು ಹಾರರ್ ಸಿನಿಮಾ ಮಾಡಿದ್ದೀವಿ ಎಂದಿದ್ದರು. ಭಾರಿ ಭರವಸೆಯನ್ನು ಸಿನಿಮಾ ಬಗ್ಗೆ ವ್ಯಕ್ತಪಡಿಸಿದ್ದಾರೆ ಆದರೆ ಇದೀಗ ಸಿನಿಮಾ ಫ್ಲಾಪ್ ಆಗುವ ಸೂಚನೆ ದಟ್ಟವಾಗಿ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *