ಆರೋಪಿ ಕುಮಾರ್ ಮತ್ತು ಮೃತ ಮಹಿಳೆ ರಾಧಾ.
ಹಾಸನ, ಜನವರಿ 13: ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿಯನ್ನ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದಿದೆ. ಪತ್ನಿ ರಾಧಾ(40) ಮೃತ ದುರ್ದೈವಿ, ಶವವನ್ನು ಪತಿ ನದಿಗೆ ಎಸೆದಿದ್ದರು. ಜನವರಿ 10 ರಂದು ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
22 ವರ್ಷಗಳ ಹಿಂದೆ ಕುಮಾರ ಜೊತೆ ರಾಧಾ ವಿವಾಹವಾಗಿತ್ತು. ಆದರೆ ತನ್ನ ಮೇಲೆ ಕುಮಾರ ಅನುಮಾನ ಪಡುತ್ತಿದ್ದ ಕಾರಣ ಕಳೆದ 8 ವರ್ಷಗಳಿಂದ ಪತಿಯಿಂದ ರಾಧಾ ಬೇರೆಯಾಗಿ ವಾಸ ಮಾಡುತ್ತಿದ್ದರು. ಈ ನಡುವೆ ಜನವರಿ ಮೊದಲ ವಾರ ಕುಮಾರ್ ಶಬರಿಮಲೆಗೆ ತೆರಳಿದ್ದ. ಇರುಮುಡಿ ಕಟ್ಟುವಾಗ ಪತ್ನಿ ಸ್ಥಾನದಲ್ಲಿ ಬೇರೆ ಮಹಿಳೆಯಿಂದ ಪೂಜೆ ನಡೆದ ಕಾರಣ ಈ ವಿಚಾರವನ್ನು ಪ್ರಶ್ನಿಸಲು ತಾನು ವಾಸವಿದ್ದ ಹಾಸನದ ಆಡುವಳ್ಳಿಯಿಂದ ಯಡೂರು ಗ್ರಾಮಕ್ಕೆ ರಾಧ ಬಂದಿದ್ದರು. ಇದೇ ವಿಚಾರವಾಗಿ ಜ.10ರ ರಾತ್ರಿ 10.30ರ ಸಮಯದಲ್ಲಿ ಕುಮಾರ ಮತ್ತು ರಾಧಾ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಪತ್ನಿ ರಾಧಾ ಕಪಾಳಕ್ಕೆ ಕುಮಾರ ಹೊಡೆದಿದ್ದ ಕಾರಣ ಆಕೆ ಸ್ಥಳದಲ್ಲೇ ಕಾಣಿಸಿಕೊಂಡಿದ್ದಳು.
ಇದನ್ನೂ ಓದಿ: ಪತ್ನಿಗೆ ವಂಚಿಸಿ ಟೆಕ್ಕಿ ಪತಿ ಅಕ್ರಮ ಸಂಬಂಧ; ಪ್ರೇಯಸಿ ಜೊತೆ ಪಲ್ಲಂಗಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ!
ಪೊಲೀಸರಿಗೆ ತಾನೇ ಮಾಹಿತಿ ನೀಡಿದ ಆರೋಪಿ
ಘಟನೆ ಬಳಿಕ ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ರಾಧಾ ಶವಕ್ಕೆ ಬಟ್ಟೆ ಸುತ್ತಿ ಅದನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಹಾಸನ ಹೊರವಲಯದ ಕಂದಲಿ ಬಳಿ ಹರಿಯುವ ಯಗಚಿ ನದಿಗೆ ಕುಮಾರ ಬಿಸಾಡಿದ್ದ. ಬಳಿಕ ನಿನ್ನೆ ತಾನೇ ಪೊಲೀಸರಿಗೆ ಆರೋಪಿ ಘಟನೆ ನೀಡಿದ್ದು, ಇಂದು ಯಗಚಿ ನದಿಯಿಂದ ರಾಧಾ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಕುಮಾರ್ ಅವರನ್ನು ಆಲೂರು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 12:30 pm, ಮಂಗಳವಾರ, 13 ಜನವರಿ 26