ಅದು 2013ರ ಸಮಯ. ಆಗತಾನೇ ಬಿಗ್ ಬಾಸ್ (ಬಿಗ್ ಬಾಸ್) ಕನ್ನಡಕ್ಕೆ ಬಂತು. ಕಿಚ್ಚ ಸುದೀಪ್ ಅವರು ಇದರ ಹೋಸ್ಟ್ ಆದರು. ಈಟಿವಿ ಕನ್ನಡದಲ್ಲಿ ಶೋ ಪ್ರಸಾರ ಕಂಡಿತು. 15 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದರು. ಈ ಮೇಲಿನ ವಿಜಯ್ ರಾಘವೇಂದ್ರ ಗೆಲುವು ಕಂಡರೆ, ಅರುಣ್ ಸಾಗರ್ ರನ್ನರ್ ಅಪ್ ಆದರು. ಅರುಣ್ ಸಾಗರ್ ನಿಜವಾದ ವಿನ್ನರ್ ಆಗಬೇಕಿತ್ತು ಎಂಬುದು ವೀಕ್ಷಕರ ಅಭಿಪ್ರಾಯ. ಈಗ ಈ ಸಾಲಿಗೆ ಗಿಲ್ಲಿ ಕೂಡ ಸೇರುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಗಿಲ್ಲಿ ನಟ ಅವರು ಹಾಸ್ಯ ನಟ. ಹಲವು ರಿಯಾಲಿಟಿ ಶೋಗಳಲ್ಲಿ ಅವರು ರಂಜಿಸಿದ್ದಾರೆ. ಈಗ ಬಿಗ್ ಬಾಸ್ ಗೆ ಬಂದು ಅವರು ಮನರಂಜನೆ ನೀಡುತ್ತಿದ್ದಾರೆ. ಅವರ ಹಾಸ್ಯಕ್ಕೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಅವರೇ ವಿನ್ ಆಗುತ್ತಾರೆ ಎಂದು ಫ್ಯಾನ್ಸ್ ಅಂದುಕೊಂಡಿದ್ದಾರೆ. ಆದರೆ, ಕೊನೆಯ ವಾರಗಳಲ್ಲಿ ಟ್ರೆಂಡ್ ಬದಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.
ಕಳೆದ ವಾರ ಸೀಸನ್ ಚಪ್ಪಾಳೆಯನ್ನು ಸುದೀಪ್ ಅವರು ಧ್ರುವಂತ್ ಗೆ ಪ್ರಸ್ತುತಪಡಿಸಿದ್ದಾರೆ. ಇಡೀ ಸೀಸನ್ ಮನರಂಜನೆ ನೀಡಿದ್ದು ಗಿಲ್ಲಿ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ. ಗಿಲ್ಲಿಗೆ ಚಪ್ಪಾಳೆ ಸಿಗುತ್ತಿದ್ದಂತೆ, ಗಿಲ್ಲಿ ಬಳಿ ಮಾತನಾಡಿದ್ದ ರಘು, ‘ಧ್ರುವಂತ್ ಈ ಬಾರಿ ವಿನ್ ಆದರೂ ಆಗಬಹುದು’ ಎಂದಿದ್ದರು. ಇನ್ನು, ಅಶ್ವಿನಿ ಕೂಡ ಒಳ್ಳೆಯ ಸ್ಪರ್ಧೆಯನ್ನೇ ನೀಡುತ್ತಿದ್ದರು, ಅವರಿಗೂ ವಿಜಯಲಕ್ಷ್ಮೀ ಒಲಿಯಬಹುದು ಎಂಬುದು ಕೆಲವರ ಅಭಿಪ್ರಾಯ.
ಇದನ್ನೂ ಓದಿ: ಬಿಗ್ ಬಾಸ್ ಎದುರು ವಿಚಿತ್ರ ಆಸೆ ಹೇಳಿಕೊಂಡ ಗಿಲ್ಲಿ ನಟ; ಬಯಸುತ್ತಾ ಬಯಕೆ?
ಇನ್ನು ಗಿಲ್ಲಿ ಅವರದ್ದು ಒಂದು ಕರಾಳ ಇತಿಹಾಸ. ಅವರು ಸಾಕಷ್ಟು ಶೋಗಳನ್ನು ಮಾಡಿದರು ಕೂಡ ಯಾವುದನ್ನೂ ವಿನ್ ಆಗಿಲ್ಲ. ಎಲ್ಲ ಕಡೆ ರನ್ನರ್ ಅಪ್ ಆಗಿದ್ದೇ ಹೆಚ್ಚು. ಈ ಶೋನಲ್ಲೂ ಇತಿಹಾಸ ಮರುಕಳಿಸುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಹಾಗಾದಾಗ ಅವರು ಮತ್ತೋರ್ವ ಅರುಣ್ ಸಾಗರ್ ಆಗಿದ್ದಾರೆ ಎಂಬುದು ಫ್ಯಾನ್ಸ್ ಅಭಿಪ್ರಾಯ. ಅರ್ಹರಿಗೆ ಗೆಲುವು ಸಿಗಬೇಕು ಎಂಬುದು ವೀಕ್ಷಕರ ಅಭಿಪ್ರಾಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 12:45 pm, ಮಂಗಳವಾರ, 13 ಜನವರಿ 26