ಬೆಂಗಳೂರು, ಜನವರಿ 13: ಜೆ.ಪಿ. ನಗರ, ಹೊಸಕೆರೆಹಳ್ಳಿ, ನಾಗರಭಾವಿ ಜನರಿಗೆ ಬಿಎಂಆರ್ ಸಿಎಲ್ ಗುಡ್ನ್ಯೂಸ್ ಕೊಟ್ಟಿದೆ. ಬೆಂಗಳೂರಿನ ಬಹು ನಿರೀಕ್ಷಿತ ಆರೆಂಜ್ ಲೈನ್ ಮೆಟ್ರೋಗೆ ಸಿವಿಲ್ ಟೆಂಡರ್ ಆಹ್ವಾನಿಸಲು, ಜೆ.ಪಿ. ನಗರ 4ನೇ ಹಂತದಿಂದ ನಾಗರಭಾವಿ ಕಾಮಗಾರಿಯನ್ನು ಒಳಗೊಂಡಿದೆ. ಫೆಬ್ರವರಿ 20 ರಿಂದ 25 ರೊಳಗೆ ಟೆಂಡರ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗುವುದು, ಮೂರು ಪ್ಯಾಕೇಜ್ನಲ್ಲಿ BMRCL ಸಿವಿಲ್ ಟೆಂಡರ್ ಕರೆದಿದೆ. ಮೂರು ಪ್ಯಾಜೆಜ್ಗಳಿಗೆ ಪ್ರತ್ಯೇಕ ಬಜೆಟ್ ಕೊಡುಗೆಗಳು.
ಪ್ಯಾಕೇಜ್ 1 ಜೆ.ಪಿ ನಗರ 4ನೇ ಹಂತದಿಂದ ಕಾಮಾಕ್ ವರೆಗೆ ಡಬಲ್ ಡೆಕ್ಕರ್ ಹಾಗೂ ಡಾಲರ್ಸ್ ಕಾಲೋನಿ ಫ್ಲೈಓವರ್ ತೆರವು ಒಳಗೊಂಡಿದೆ ಒಟ್ಟು ಜೆ.ಪಿ. ನಗರ 5ನೇ ಹಂತ, ಜೆ.ಪಿ. ನಗರ, ಕಾದಿರೇನಹಳ್ಳಿ, ಕಾಮಾಕ್ಯ ಜಂಕ್ಷನ್ ನಿಲ್ದಾಣಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್ ನ ಮೊತ್ತ 1,375 ಕೋಟಿ ರೂಪಾಯಿಗಳು. ಹೊಸಕೆರಹಳ್ಳಿಯಿಂದ ನಾಗರಭಾವಿ ಸರ್ಕಲ್ವರೆಗೆ ಡಬಲ್ ಡೆಕ್ಕರ್ನ ಪ್ಯಾಕ್ 2 ಒಳಗೊಂಡಿದೆ. 1,396 ಕೋಟಿ ಮೊತ್ತದ ಈ ಪ್ಯಾಕೇಜ್ ಹೊಸಕೆರಹಳ್ಳಿ, ದ್ವಾರಕಾನಗರ, ಮೈಸೂರು ರಸ್ತೆ ಮತ್ತು ನಾಗರಭಾವಿ ಸರ್ಕಲ್ ನಿಲ್ದಾಣಗಳು ಇವೆ.
ಇದನ್ನೂ ಓದಿ: ಆರೆಂಜ್ ಲೈನ್ ಗಾಗಿ 6500 ಮರ ಕಡಿಯಲು ಮುಂದಾದ ನಮ್ಮ ಮೆಟ್ರೋ; ಪರಿಸರ ಹೋರಾಟಗಾರರ ಅಧಿಕಾರಿಗಳ ಸಭೆ
ಪ್ಯಾಕೇಜ್ 3ರ ಕಾರಿಡಾರ್ 1 ವಿನಾಯಕ ಲೇಔಟ್ ನಿಂದ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ವರೆಗೆ ಒಟ್ಟು 3 ನಿಲ್ದಾಣಗಳನ್ನು ಒಳಗೊಂಡಿದೆ. ವಿನಾಯಕ ಲೇಔಟ್, ಪಾಪಿರೆಡ್ಡಿಪಾಳ್ಯ, ಬಿಡಿಎ ಕಾಂಪ್ಲೆಕ್ಸ್ ನಾಗರಭಾವಿ ನಿಲ್ದಾಣವಿದೆ. ಪೂರಕ 3ರ ಕಾರಿಡಾರ್ 2 ಸುಂಕದಕಟ್ಟೆ ನಿಲ್ದಾಣ , ಸುಂಕದಕಟ್ಟೆ ಡಿಪೋ ಮತ್ತು ನಿರ್ಗಮನ ಮಾರ್ಗವನ್ನು ಒಳಗೊಂಡಿದ್ದು, ಇದರ ಒಟ್ಟು ಮೊತ್ತ 1415 ಕೋಟಿ ರೂಪಾಯಿ
ನಮ್ಮ ಮೆಟ್ರೋದ ಮೂರನೇ ಪ್ರಾಜೆಕ್ಟ್ಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದರೂ ಯೋಜನೆ ಮಾತ್ರ ಇನ್ನೂ ಪ್ರಾರಂಭವಾಗಿರಲಿಲ್ಲ. 2024 ಆಗಸ್ಟ್ 16 ರಂದು ನಮ್ಮ ಮೆಟ್ರೋ ಆರೆಂಜ್ ಲೈನ್ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿತ್ತು. ಅದಾಗಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕಳೆದರೂ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಈ ಕಾಮಗಾರಿಗಳ ಟೆಂಡರ್ಗಳನ್ನು ಆಹ್ವಾನಿಸಿಲ್ಲ ಎಂಬ ಬೇಸರ ಸಿಲಿಕಾನ್ ಸಿಟಿ ಮಂದಿಯನ್ನು ಕಾಡಿತ್ತು. ಈ ನಡುವೆ BMRCL ಶುಭ ಸುದ್ದಿ ನೀಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.