ಭಾರತದಲ್ಲಿನ ಜನರೊಂದಿಗೆ ಎಚ್ಚರಿಕೆಯಿಂದಿರಿ: ರೀಲ್ಸ್ ಮಾಡಿದ ಪ್ರವಾಸಿ ವಿದೇಶಿ ಮಹಿಳೆ | Be Careful With The People In India Foreign Tourist Woman Shares Video Mrq

ಭಾರತದಲ್ಲಿನ ಜನರೊಂದಿಗೆ ಎಚ್ಚರಿಕೆಯಿಂದಿರಿ: ರೀಲ್ಸ್ ಮಾಡಿದ ಪ್ರವಾಸಿ ವಿದೇಶಿ ಮಹಿಳೆ | Be Careful With The People In India Foreign Tourist Woman Shares Video Mrq


ಭಾರತಕ್ಕೆ ಭೇಟಿ ನೀಡಿದ ಜೆನ್ನಿ ಆಡಂ ಎಂಬ ವಿದೇಶಿ ಪ್ರವಾಸಿ ಮಹಿಳೆ, ಭಾರತೀಯರೊಂದಿಗೆ ಎಚ್ಚರಿಕೆಯಿಂದಿರಿ ಎಂದು ಸಲಹೆ ನೀಡಿದ ರೀಲ್ಸ್ ಮಾಡಿದ್ದಾರೆ. ಈ ವೈರಲ್ ವಿಡಿಯೋ ಭಾರತೀಯರ ಅತಿಥಿ ಸತ್ಕಾರವನ್ನು ಜಗತ್ತಿಗೆ ಸಾರಿದೆ.

ನವದೆಹಲಿ: ಭಾರತಕ್ಕೆ ಪ್ರತಿನಿತ್ಯ ಲಕ್ಷಾಂತರ ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಭಾರತದಲ್ಲಿ ನಿಸರ್ಗ ಸೌಂದರ್ಯ, ಪುರಾತನ ಕಟ್ಟಡ, ಐತಿಹಾಸಿಕ ಸ್ಥಳ ಮತ್ತು ದೇವಸ್ಥಾನಗಳಿಗೂ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಕಳೆದ ಒಂದು ದಶಕದಿಂದ ಪ್ರವಾಸಿಗರು ತಾವು ಭೇಟಿ ನೀಡುವ ಸ್ಥಳಗಳ ಸೌಂದರ್ಯವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡರ ಮಾಡಿಕೊಳ್ಳುತ್ತಿರುತ್ತಾರೆ. ಇಂದು ಎಷ್ಟೋ ಜನರು ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಭಾರತಕ್ಕೆ ಭೇಟಿ ನೀಡಿದ್ದ ವಿದೇಶಿ ಮಹಿಳೆಯರು, ಇಲ್ಲಿಯ ಜನರೊಂದಿಗೆ ಎಚ್ಚರಿಕೆಯಿಂದಿರುವ ಸಲಹೆ ನೀಡಿದ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಭಾರತೀಯರು ಅತಿಥಿ ದೇವೋ ಭವ ಎಂಬ ಕಲ್ಪನೆಯಲ್ಲಿ ನಮ್ಮ ದೇಶಕ್ಕೆ ಬರುವ ಪ್ರವಾಸಿಗರನ್ನು ಅತ್ಯಂತ ಗೌರವದಿಂದ ಆದರಿಸುತ್ತಾರೆ. ಭಾಷೆ ಬರದಿದ್ರೂ ಪ್ರವಾಸಿಗರೊಂದಿಗೆ ಮೃದುವಾಗಿ ಸಂವಹನ ನಡೆಸುತ್ತಾರೆ. ಈ ಕಾರಣದಿಂದಲೂ ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಭಾರತದ ಆತಿಥ್ಯವನ್ನು ಅನುಭವಿಸಿದ ವಿದೇಶಿಗರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುತ್ತಾರೆ.

13 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದ ಪ್ರವಾಸಿ ಜೆನ್ನಿ ವಿಡಿಯೋ

ಇದೀಗ ಜೆನ್ನಿ ಆಡಂ (Jenny Adam) ಎಂಬವರು ಸುಂದರವಾದ ರೀಲ್ಸ್ ಶೇರ್ ಮಾಡಿಕೊಂಡಿದ್ದು, ಭಾರತೀಯರೊಂದಿಗೆ ಕೇರ್‌ಫುಲ್ ಆಗಿರಿ ಎಂದು ಬರೆದುಕೊಂಡಿದ್ದಾರೆ. ಈ ರೀಲ್ಸ್‌ಗೆ 13 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು ನೂರಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ. ಈ ರೀಲ್ಸ್ ನೋಡಿದ ನೆಟ್ಟಿಗರು, ಭಾರತ ಕೇವಲ ಒಂದು ದೇಶವಲ್ಲ, ಅದು ಜಗತ್ತಿನೊಳಗಿರುವ ಸುಂದರವಾದ ಪ್ರಪಂಚ. ಭಾರತದಲ್ಲಿ ನಿಮಗೆ 100 ಪರ್ಸೆಂಟ್ ಉತ್ತಮವಾದ ಆತಿಥ್ಯ ಸಿಗುತ್ತದೆ. ಭಾರತೀಯರು ತುಂಬಾ ವಿನಮ್ರರು ಮತ್ತು ರಕ್ಷಣಾತ್ಮಕರು. ಭಾರತದ ದಕ್ಷಿಣ ಭಾಗದಲ್ಲಿನ ಜನರು ಪ್ರವಾಸಿಗರು ತಾಯಿಯಂತೆ ನೋಡಿಕೊಳ್ಳುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಭಾರತದಲ್ಲಿನ ಜನರೊಂದಿಗೆ ಎಚ್ಚರಿಕೆಯಿಂದಿರಿ ಎಂಬ ಸಾಲುಗಳೊಂದಿಗೆ ಜೆನ್ನಿ ಅವರ ವಿಡಿಯೋ ಆರಂಭವಾಗುತ್ತದೆ. ಭಾರತೀಯರು ಪ್ರವಾಸಿಗರ ಹೃದಯವನ್ನು ಕದಿಯುತ್ತಾರೆ. ಹಾಗಾಗಿ ಭಾರತೀಯರೊಂದಿಗೆ ಕೇರ್‌ಫುಲ್ ಆಗಿರ ಎಂದು ಜೆನ್ನಿ ಸಲಹೆ ನೀಡಿದ್ದಾರೆ. ಈ ವಿಡಿಯೋದಲ್ಲಿ ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರು ಇವರತ್ತ ನಗುಮೊಗದಿಂದ ಕೈ ಬೀಸುವುದನ್ನು ಗಮನಿಸಬಹುದು.

ಇದನ್ನೂ ಓದಿ: ರೈಲು ಹಳಿಗೆ ತಲೆ ಇಟ್ಟು ಗಡದ್ ನಿದ್ದೆಗೆ ಜಾರಿದ ಭೂಪ, ಟ್ರೈನ್ ಬಂದರೂ ಏಳಲೇ ಇಲ್ಲ!

ಇದೇ ರೀತಿ ಜೆನ್ನಿ ಅವರು ಭೇಟಿ ನೀಡಿದ ಎಲ್ಲಾ ಪ್ರದೇಶಗಳ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಹೋಟೆಲ್‌ನಲ್ಲಿ ಇವರಿಗೆ ಸಿಕ್ಕ ಆತಿಥ್ಯ, ಕಡಲತಡಿಯಲ್ಲಿ ಜನರು ಇವರನ್ನು ನಮಸ್ಕರಿಸಿ ಸ್ವಾಗತ ಮಾಡಿಕೊಂಡಿದ್ದು, ಆಟೋ ಚಾಲಕರು, ಸಹ ಪ್ರವಾಸಿಗರೊಂದಿಗೆ ನಡುವಿನ ಸಂಭಾಷಣೆ ಸೇರಿದಂತೆ ಬಹುತೇಕ ಸುಂದರ ಕ್ಷಣಗಳನ್ನು ಜೆನ್ನಿ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಈ ಹಿಂದೆ ವಿದೇಶಿ ಯುವತಿ, ಆಗ್ರಾದ ತಾಜ್‌ಮಹಲ್ ಮುಂದೆ ಭಾರತೀಯ ವಧುವಿನಂತೆ ಕೆಂಪು ಲೆಹೆಂಗಾ ಧರಿಸಿ ರೀಲ್ಸ್ ಮಾಡಿದ್ದರು. ಈ ವಿಡಿಯೋಗೆ ಭಾರತಕ್ಕೆ ಬರಬೇಡಿ ಎಂಬ ಶೀರ್ಷಿಕೆಯನ್ನು ನೀಡಿದ್ದರು. ಒಮ್ಮೆ ಭಾರತಕ್ಕೆ ಬಂದ್ರೆ ಇಲ್ಲಿನ ಸಾಂಸ್ಕೃತಿ, ಸುಂದರ ಸ್ಥಳಗಳಿಗೆ ಮಾರು ಹೋಗಿ ಹಿಂದಿರುಗಲು ಮನಸ್ಸು ಬರಲ್ಲ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ರೈಲು-ಫ್ಲಾಟ್‌ಫಾರ್ಮ್‌ ನಡುವೆ ಸಿಲುಕಿಕೊಂಡ ಯುವತಿ, ಫ್ಲಾಟ್‌ಫಾರ್ಮ್‌ ಒಡೆದು ರಕ್ಷಣೆ ಮಾಡಿದ ಸಿಬ್ಬಂದಿ!



Source link

Leave a Reply

Your email address will not be published. Required fields are marked *