
ಬಸಪ್ಪ ಅವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿ 2024ರಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ನಡೆದ ‘ಪ್ರಾಚ್ಯಾವಶೇಷಗಳ ಅನ್ವೇಷಣೆ’ ಕಾರ್ಯಕ್ರಮದಲ್ಲಿ ಇವರು ಸಂಗ್ರಹಿಸಿದ್ದ ವಸ್ತುಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಗಿತ್ತು. ಲಕ್ಕುಂಡಿಯ ಮಣ್ಣಿನ ಅಡಿಯಲ್ಲಿ ಅಪಾರ ಪ್ರಮಾಣದ ಚಿನ್ನ ಮತ್ತು ಐತಿಹಾಸಿಕ ಕುರುಹುಗಳಿವೆ ಎಂಬ ನಂಬಿಕೆಗೆ ಬಸಪ್ಪ ಅವರಿಗೆ ಸಿಗುತ್ತಿರುವ ಈ ವಸ್ತುಗಳೇ ಸಾಕ್ಷಿಯಾಗಿವೆ.
ಯಾವುದೇ ಫಲಾಪೇಕ್ಷೆಯಿಲ್ಲದೆ, ಕೇವಲ ಇತಿಹಾಸದ ಮೇಲಿನ ಪ್ರೀತಿಯಿಂದ ಮಣ್ಣಿನಲ್ಲಿ ಅಡಗಿರುವ ಗತವೈಭವವನ್ನು ಹೊರತೆಗೆಯುತ್ತಿರುವ ಬಸಪ್ಪ ಬಡಿಗೇರ ಅವರ ಕಾರ್ಯಕ್ಕೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.