BBK 12: ಅಶ್ವಿನಿ ಗೌಡಗೆ ಕಿಚ್ಚನ ಚಪ್ಪಾಳೆ ವಿವಾದ: ಬಿಗ್​ಬಾಸ್​ ವಿನಯ್​ ಗೌಡ ಹೇಳಿದ್ದೇನು?

BBK 12: ಅಶ್ವಿನಿ ಗೌಡಗೆ ಕಿಚ್ಚನ ಚಪ್ಪಾಳೆ ವಿವಾದ: ಬಿಗ್​ಬಾಸ್​ ವಿನಯ್​ ಗೌಡ ಹೇಳಿದ್ದೇನು?

BBK 12: ಅಶ್ವಿನಿ ಗೌಡಗೆ ಕಿಚ್ಚನ ಚಪ್ಪಾಳೆ ವಿವಾದ: ಬಿಗ್​ಬಾಸ್​ ವಿನಯ್​ ಗೌಡ ಹೇಳಿದ್ದೇನು?

ಬಿಗ್​ಬಾಸ್​​ 12ರಲ್ಲಿ ಗಿಲ್ಲಿ ನಟನ ಬದಲು ಅಶ್ವಿನಿ ಗೌಡ ಮತ್ತು ಧ್ರುವಂತ್​ಗೆ ಸೀಸನ್‌ ಚಪ್ಪಾಳೆ ನೀಡಿದ ಸುದೀಪ್​ ನಿರ್ಧಾರಕ್ಕೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಅಶ್ವಿನಿಯನ್ನು ಗೆಲ್ಲಿಸುವ ತಂತ್ರ ಎಂದು ಆರೋಪಿಸಲಾಗುತ್ತಿದ್ದು, ಈ ಬಗ್ಗೆ   ನಟ ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್​ಬಾಸ್​​ 12ರ ವಿನ್ನರ್​ ಗಿಲ್ಲಿ ನಟನೇ ಆಗಬೇಕು ಎನ್ನುವ ಕೂಗು ಜೋರಾಗಿ ಕೇಳಿಬರುತ್ತಿದೆ. ಗಿಲ್ಲಿ ನಟನನ್ನು ಬಿಟ್ಟು ಬೇರೆ ಯಾರಿಗೇ ಈ ಹಂತದಲ್ಲಿ ಕಿಚ್ಚನ ಚಪ್ಪಾಳೆ ಸಿಕ್ಕರೆ ಅದನ್ನು ಅವರ ಅಭಿಮಾನಿಗಳು ಸಹಿಸುವುದಿಲ್ಲ. ಅದೇ ರೀತಿ ಮೊನ್ನೆ ಬಿಗ್​ಬಾಸ್​​ನಲ್ಲಿ ಸುದೀಪ್​ ಅವರು ವಾರದ ಮಾತ್ರವಲ್ಲದೇ ಹಾಗೂ ಸೀಸನ್‌ ಚಪ್ಪಾಳೆಯನ್ನು ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರಿಗೆ ನೀಡಿರುವುದಕ್ಕೆ ಭಾರಿ ಟೀಕೆಗಳು ಕೇಳಿಬರುತ್ತಿವೆ.

ಇದಕ್ಕಾಗಿಯೇ ಸೋಷಿಯಲ್​ ಮೀಡಿಯಾದಲ್ಲಿ ಸುದೀಪ್​ ವಿರುದ್ಧ ಅಸಮಾಧಾನದ ಹೊಗೆಯಾಡುತ್ತಿದೆ. ಅಶ್ವಿನಿ ಗೌಡ (Ashwini Gowda) ಅವರನ್ನು ಗೆಲ್ಲಿಸುವ ಉದ್ದೇಶದಿಂದಲೇ ಹೀಗೆಲ್ಲಾ ಕಿತಾಪತಿ ಮಾಡಲಾಗುತ್ತಿದೆ ಎನ್ನುವುದು ಕೆಲವರ ಅಭಿಪ್ರಾಯ. ಇಡೀ ಸೀಸನ್‌ನಲ್ಲಿ ಆಟ, ಶಿಸ್ತು ಮತ್ತು ಮನರಂಜನೆಯನ್ನು ಸಮತೋಲನವಾಗಿ ನಡೆಸಿದವರು ಗಿಲ್ಲಿ ನಟ. ಆದರೆ ಸುದೀಪ್​ ಮೋಸ ಮಾಡಿದ್ದಾರೆ ಎನ್ನುವುದು ಆರೋಪ.

ಇದೀಗ ಈ ಬಗ್ಗೆ ಬಿಗ್​ಬಾಸ್​ 10ರ ಸ್ಪರ್ಧಿ, ನಟ ವಿನಯ್​ ಗೌಡ ಅವರು ಮಾತನಾಡಿದ್ದಾರೆ. ಬಿಗ್​ಬಾಸ್​ 12 ಶುರುವಾದಾಗ ಒಬ್ಬರು ವಾಯ್ಸ್​ ರೇಸ್​ ಮಾಡಿದ್ದರು. ಅದನ್ನು ರೈಸ್​ ಮಾಡಿದ್ದು ಅಶ್ವಿನಿ ಮೇಡಂ. ಅವರು ಮಾಡಿರಲಿಲ್ಲ ಎಂದರೆ ಇದು ಆಗುತ್ತಿರಲಿಲ್ಲ ಎಂದಿದ್ದಾರೆ.

ಹಾಗೆಂದ ಮಾತ್ರಕ್ಕೆ ಅವರು ಕಳಪೆ, ಏನೂ ಮಾಡ್ತಿಲ್ಲ ಎನ್ನೋದು ತಪ್ಪು. ಎಲ್ಲರೂ ಅವರವರ ಆಟವನ್ನು ಆಡುತ್ತಿದ್ದಾರೆ. ಗೆಲ್ಲಲೇಬಾರದು ಎಂದು ಹೇಳ್ತಿರೋದು ಬೇರೊಬ್ಬರ ಮತ್ತೊಬ್ಬರ ಫ್ಯಾನ್ಸ್​ ಅಲ್ವಾ? ಅಷ್ಟಕ್ಕೂ ಫ್ಯಾನ್ಸ್​ ಹೇಳೋದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಬಾರದು. ಏಕೆಂದರೆ ಬರೀ ಬಿಗ್​ಬಾಸ್​ ಮಾತ್ರವಲ್ಲ, ಸಿನಿಮಾ, ಸೀರಿಯಲ್​ಗಳಲ್ಲಿಯೂ ಇದು ಇದದ್ದೇ ಎಂದಿದ್ದಾರೆ.

ಕೆಲವು ಪಿಆರ್​ಗಳು ಕೆಟ್ಟದ್ದಾಗಿ ಮಾಡ್ತಿದ್ದಾರೆ. ಬಿಗ್​ಬಾಸ್​​ ಗೆಲ್ಲಲು, ಮನೆಯಲ್ಲಿ ಇರುವವರಿಗೆ ಆಟವಾಡಲು ಬಿಟ್ಟುಬಿಡಬೇಕು. ಇಲ್ಲಿ ಪ್ರಚಾರ ಮಾಡಿ ಗೆಲ್ಲಿಸೋದು, ಸೋಲಿಸೋದು ಸರಿಯಲ್ಲ. ಗೇಮ್​ ಪ್ರಕಾರ ಏನ್​ ನಡೀತಾ ಇದೆ, ಹೇಗೆ ಆಡ್ತಾ ಇದ್ದಾರೆ ಪ್ರತಿಯೊಬ್ಬರೂ ನೋಡ್ತಾ ಇದ್ದಾರೆ. ಜರ್ನಿಯಲ್ಲಿ ಹೇಗೆ, ಯಾರು ಬಂದಿದ್ದಾರೆ ಎಂದು ಎಲ್ಲರೂ ನೋಡ್ತಿದ್ದಾರೆ ಎಂದು ವಿನಯ್​ ಗೌಡ ಹೇಳಿದ್ದಾರೆ.

ಅಷ್ಟಕ್ಕೂ ಅಶ್ವಿನಿ ಮೇಡಂ ಅವರು ಇಲ್ಲದಿದ್ದರೆ ಅಷ್ಟೊಂದು ಬೂಸ್ಟ್​ ಸಿಗುತ್ತಿರಲಿಲ್ಲ. ಗಿಲ್ಲಿ ಅವರು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಅವರಿಗೂ ಒಬ್ಬರು ಆಪನೆಂಟ್​ ಬೇಕಲ್ಲ. ಸೋ ಎಲ್ಲರೂ ಚೆನ್ನಾಗಿ ಆಡ್ತಿದ್ದಾರೆ. ಹೀಗೆ ಹೇಳೋದು ಸರಿಯಲ್ಲ ಎಂದಿದ್ದಾರೆ ವಿನಯ್​ ಗೌಡ.

Source link

Leave a Reply

Your email address will not be published. Required fields are marked *