‘ಟಾಕ್ಸಿಕ್’ (ಟಾಕ್ಸಿಕ್) ಸಿನಿಮಾದ ಟೀಸರ್ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ಚರ್ಚೆಯಲ್ಲಿರುವ ವಿಷಯ. ಜನವರಿ 08 ರಂದು ಬಿಡುಗಡೆ ಆಗಿರುವ ಟೀಸರ್ ಈಗಾಗಲೆ 300 ಮಿಲಿಯನ್ಗೂ ಹೆಚ್ಚು ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಟೀಸರ್ನಲ್ಲಿರುವ ಆಕ್ಷನ್ ಜೊತೆಗೆ ಕಾರಿನಲ್ಲಿ ನಡೆಯುತ್ತಿರುವ ದೃಶ್ಯದ ಬಗ್ಗೆಯೂ ಜೋರಾಗಿ ಚರ್ಚೆ ನಡೆದಿದೆ. ಕಾರಿನೊಳಗೆ ಯಶ್ ಪಾತ್ರ ಕ್ರಿಯೆಯಲ್ಲಿ ತೊಡಗಿದೆ. ಆ ಕ್ರಿಯೆಯಿಂದ ಉತ್ಪತ್ತಿಯಾಗುವ ಶಕ್ತಿಯಿಂದ ಡೆಟೊನೇಟರ್ ಆನ್ ಆಗಿ ವಿಲನ್ ಗಳಿದ್ದ ಕಡೆ ಬಾಂಬ್ ಬ್ಲಾಸ್ಟ್ ಆಗುವಂತೆ ತೋರಿಸಲಾಗಿದೆ. ಆದರೆ ಪ್ರಾಕ್ಟಿಕಲ್ ಆಗಿ ಇದು ಅಸಾಧ್ಯವಾದುದಾಗಿದೆ. ಹಾಗಿದ್ದರೆ ಟೀಸರ್ ನಲ್ಲಿ ಆಗಿರುವ ತಪ್ಪೇನು?
ರಾಘವೇಂದ್ರ ಎಂ ಸುಬ್ರಹ್ಮಣ್ಯ ಎಂಬವರು ಹಂಚಿಕೊಂಡಿರುವ ಪೋಸ್ಟ್ನಲ್ಲಿ ಈ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ, ತಮ್ಮ ವಿಜ್ಞಾನದ ವಿಧ್ಯಾರ್ಥಿ ಎಂದು ಹೇಳಿರುವ ರಾಘವೇಂದ್ರ ಅವರು, ‘ಟಾಕ್ಸಿಕ್’ ಟೀಸರ್ನಲ್ಲಿ ತೋರಿಸಿರುವ ದೃಶ್ಯ, ಅಸಾಧ್ಯವಾಗಿ ಎಂದಿದ್ದು, ಅದಕ್ಕೆ ಕೆಲವು ಮೌಲಿಕ ಕಾರಣಗಳನ್ನು ಸಹ ನೀಡಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ರಾಘವೇಂದ್ರ ಅವರು ನೀಡಿರುವ ಕಾರಣಗಳು ಇಂತಿವೆ…
ಟೀಸರ್ನಲ್ಲಿ ತೋರಿಸಿರುವಂತೆ ಕುಡುಕ ಡ್ರೈವರ್, ಕಾರಿನ ಹಿಂಬದಿಗೆ ಹುಕ್ ರೀತಿಯಲ್ಲಿ ಸೇರಿಸುವ ಯಂತ್ರದ ಹೆಸರು ಪ್ಲಂಜರ್ ಡೆಟೊನೇಟರ್. ಇದನ್ನು ಬ್ಲಾಸ್ಟಿಂಗ್ ಮಷಿನ್, ಶಾಟ್ ಎಕ್ಸ್ಪ್ಲೋಡರ್ ಎಂದೂ ಕರೆಯಲಾಗುತ್ತದೆ. 1878 ರಲ್ಲಿ ಇದನ್ನು ವಿನ್ಯಾಸ ಮಾಡಲಾಯ್ತು. ಯಂತ್ರದ ಮೇಲಿನ ಟಿ ಆಕಾರದ ರಾಡ್ ಅನ್ನು ಒತ್ತುವ ಮೂಲಕ ಉತ್ಪಾದಿಸುವ ವಿದ್ಯುತ್ ವೈಯರ್ಗಳ ಸಹಾಯದಿಂದ ಬಾಂಬ್ ಡೆಟೊನೇಟರ್ಗಳನ್ನು ಆನ್ ಮಾಡಿ ಸ್ಪೋಟಗೊಳಿಸುವುದು ಇದರ ಕಾರ್ಯ. ಟೀಸರ್ನಲ್ಲಿಯೂ ಇದನ್ನು ತೋರಿಸಲಾಗಿದೆ.
ಇದನ್ನೂ ಓದಿ:ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿದ್ರೆ ಗೊತ್ತಾಗುತ್ತೆ: ವಿನಯ್ ಗೌಡ
ಆದರೆ ಆ ಟಿ ಹ್ಯಾಂಡಲ್ ಅನ್ನು ಒತ್ತಲು ನಿಯಮತಿ ಶಕ್ತಿ ಅಥವಾ ಒತ್ತಡದ ಅಗತ್ಯ ಇರುತ್ತದೆ. ಟೀಸರ್ನಲ್ಲಿ ಗಮನಿಸಿದರೆ ಕಾರಿನಲ್ಲಿ ಚಾಲನೆಯಲ್ಲಿರುವ ಕಾರಿನ ಮೂಲಕ ಶಾಕ್ ಅಬ್ಸಾರ್ಬರ್ಗಳ ಮೇಲೆ ಕೆಳಕ್ಕೆ ಆಡುವ ಪ್ಲಂಜರ್ ಡೆಟೊನೇಟರ್ ನ ಟಿ ಆಕೃತಿ ಕೆಳಗೆ ವಿದ್ಯುತ್ ಒತ್ತಿ ಪ್ರವಹಿಸಿ ಬಾಂಬ್ ಬ್ಲಾಸ್ಟ್ ಆಗುತ್ತದೆ. ಆದರೆ ಎಲ್ಲ ಜಾಣ-ಜಾಯರಿಗೆ ಗೊತ್ತಿರುವಂತೆ ಕಾರಿನಲ್ಲಿ ಚಾಲನೆಯಲ್ಲಿರುವ ಕಾರಿನ ಮೇಲೆ ಕೆಳಗೆ ಬೀಳಲು ಬದಲಾಗಿ, ಮುಂದೆ-ಹಿಂದೆ ಬೀಳುತ್ತದೆ. ಟೀಸರ್ ನಲ್ಲಿ ಸಹ ತೋರಿಸುವಂತೆ ಕಾರಿನಲ್ಲಿ ಆ ಮಹಿಳೆ ಮಲಗಲು ಬದಲಾಗಿ ಸೀಟಿನ ಮೇಲೆ ಕುಳಿತಿದ್ದಾಳೆ. ದೃಶ್ಯದಲ್ಲಿ ಯಶ್ ಕಡೆ ಬೆನ್ನು ಹಾಕುತ್ತಾಳೆ. ಈ ಭಂಗಿಗಳಲ್ಲಿ ಒತ್ತಡದ ಮೇಲಿನಿಂದ ಕೆಳಕ್ಕೆ ಬೀಳಲು ಸಾಧ್ಯವೇ ಇಲ್ಲ ಎಂಬ ವಾದವನ್ನು ಸಾಮಾಜಿಕ ಜಾಲತಾಣದಲ್ಲಿ ತೋರಿಸಲಾಗಿದೆ.
ಜೊತೆಗೆ, ಪ್ಲಂಜರ್ ಡೆಟೊನೇಟರ್ಗಳು ಕಡಿಮೆ ದೂರದಲ್ಲಿ ಇರಿಸಲಾದ ಬಾಂಬುಗಳನ್ನು ಡೆಟೊನೇಟ್ ಮಾಡಲಷ್ಟೆ ಶಕ್ತ ಅನಿಲ. ಹೆಚ್ಚು ಶಕ್ತಿಯಿಂದ ಉತ್ಪಾದನೆ ಆಗಬೇಕು ಎಂದಾದರೆ ಟಿ ಆಕಾರವನ್ನು ಹೆಚ್ಚು ಉದ್ದ ಮಾಡಿ ಅದರ ಮೇಲೆ ಕೆಳಗೆ ಒತ್ತಬೇಕು. ಆದರೆ ಟೀಸರ್ ನಲ್ಲಿ ಡೆಟೋನೇಟರ್ ಚಿಕ್ಕದಾಗಿದೆ, ಟಿ ಆಕಾರದ ನೆಕ್ ಸಹ ಬಹಳ ಚಿಕ್ಕದಾದ ಟ್ರಾವೆಲ್ ಅನ್ನು ಹೊಂದಿದೆ. ಹೀಗಿರುವಾಗ ಸ್ಮಶಾನದಲ್ಲಿ ಇರಿಸಲಾಗಿದೆ ಅಷ್ಟು ಬಾಂಬ್ಗಳಿಗೆ, ಅಷ್ಟು ಉದ್ದ ವೈಯರ್ಗಳ ಮೂಲಕ ಪ್ರಹವಿಸುವಷ್ಟು ವಿದ್ಯುತ್ ಉತ್ಪಾದನೆ ಆಗುವುದು ಅಸಾಧ್ಯವೆಂದು ಹೇಳಬಹುದು.
ಏನೇ ಆಗಲಿ ‘ಟಾಕ್ಸಿಕ್’ದ ಟೀಸರ್ನ ಬಾಂಬ್ ಸೀನು ಬೇರೆ ಬೇರೆ ಕಾರಣಗಳಿಗೆ ಹಲವರಿಗೆ ಇಷ್ಟವಾಗಿದೆ. ಈ ಸೀನ್ ಸಿನಿಮಾದಲ್ಲಿ ಇರುವುದಿಲ್ಲ ಎಂದೂ ಸಹ ವಾದಿಸುತ್ತಿದೆ. ಎಲ್ಲವೂ ಮಾರ್ಚ್ 19ಕ್ಕೆ ಗೊತ್ತಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ