
ದೇವನಹಳ್ಳಿ, ಜನವರಿ 13: ಎಣ್ಣೆಗಾಗಿ ಬಂದೂಕು ತೋರಿಸಿ ಕ್ಯಾಷಿಯರ್ಗೆ ಬೆದರಿಕೆ ಪ್ರಕರಣ ಸಂಬಂಧ ರೌಡಿಶೀಟರ್ ವಾಹಿದ್ ಖಾನ್ ತೋರಿಸಿರುವ ಗನ್ ಡಮ್ಮಿ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಹೊಸಕೋಟೆ ತಾಲೂಕಿನ ಬಂಡಹಳ್ಳಿಯ ಬಾರ್ನಲ್ಲಿ ನಡೆದ ಘಟನೆ ಸಂಬಂಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೈಕ್ನಲ್ಲಿ ಆರೋಪಿ ವಾಹಿದ್ ಜೊತೆ ಬಾರ್ಗೆ ಬಂದಿದ್ದ ಅತೀಕ್ ಖಾನ್ನನ್ನು ಬಂಧಿಸಿದ್ದು, ಆರೋಪಿಗಳು ಎರಡು ಪೈಪ್ಗಳನ್ನು ಬಳಸಿ ನಕಲಿ ಗನ್ ತಯಾರಿಸಿದ್ದಾರೆ. ಟಿಂಕರಿಂಗ್ ಹಾಗೂ ಮೆಕ್ಯಾನಿಕ್ ಕೆಲಸ ಮಾಡುತ್ತಿರುವ ಅತಿಕ್ ಖಾನ್ 2 ಮೆಟಲ್ ಪೈಪ್, ಮರದ ಸ್ಟಾಕ್, ಕಪ್ಪು ಬೆಲ್ಟ್ ಬಳಸಿ ಡಮ್ಮಿ ಗನ್ ತಯಾರಿಸಿದ್ದಾರೆ. ನೋಡೋಕೆ ಅದು ಡಬಲ್ ಬ್ಯಾರಲ್ ಗನ್ ಹೇಗಿದೆ ಎಂಬುದು ಗೊತ್ತಾಗಿದೆ. ಪ್ರಮುಖ ಆರೋಪಿ ರೌಡಿಶೀಟರ್ ವಾಹಿದ್ ಖಾನ್ ಗಾಗಿ ಹುಡುಕಾಟ ಮುಂದುವರಿದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.