ಎರುಮಲೈ(ಕೇರಳ), ಜನವರಿ 13): ಹಲವು ದಿನಗಳ ಕಾಲ ಅಯ್ಯಪ್ಪನ ಮಾಲೆ ಧರಿಸಿ (ಅಯ್ಯಪ್ಪ ಭಕ್ತರು)ವ್ರತ ಮಾಡಿ ಇದೀಗ ಮಕರ ಜ್ಯೋತಿ ನೋಡಲು ದೇಶದ ಮೂಲೆ ಮೂಲೆಗಳಿಂದ ಶಬರಿಮಲೆಯತ್ತ ಹೊರಟ್ಟಿದ್ದಾರೆ. ಆದರೆ, ಕರ್ನಾಟಕದ ಶಬರಿಮಲೆ (ಶಬರಿಮಲೆ) ಯಾತ್ರಿಗಳಿಗೆ ಕೇರಳದಲ್ಲಿ ನಿರ್ಬಂಧಿಸಲಾಗಿದೆ. ಕರ್ನಾಟಕದ ಅಯ್ಯಪ್ಪ ಭಕ್ತ ವಾಹನಗಳನ್ನು ಶಬರಿಮಲೆಯಿಂದ 60 ಕಿಮೀ ದೂರದಲ್ಲೇ ಅಂದರೆ ಎರುಮಲೈಯಲ್ಲಿ ಕೇರಳ ಪೊಲೀಸರು ತಡೆಯುತ್ತಿದ್ದಾರೆ, ವಾಹನಗಳನ್ನು ಇಲ್ಲೇ ನಿಲ್ಲಿಸಿ ಶಬರಿಮಲೆಗೆ ಕೇರಳ ಬಸ್ ನಲ್ಲೇ ತೆರಳುವಂತೆ ತಾಕೀತು ಮಾಡಿದ್ದಾರೆ. ಚಿಕ್ಕಮಗಳೂರು, ಬಾಗಲಕೋಟೆ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ತೆರಳಿದ ಅಯ್ಯಪ್ಪ ಮಾಲಾಧಾರಿಗಳು ಕಂಗಾಲಾಗಿ, ಟಿಪಿ ಕಟ್ಟಿ ಬಂದರೂ ಸಹ ನಮ್ಮ ವಾಹನಗಳನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಕೇರಳ ಪೊಲೀಸರ ವಿರುದ್ಧ ಅಯ್ಯಪ್ಪ ಭಕ್ತರು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದ್ದು, ಕೇರಳ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ವಾಹನ ಬಾಡಿಗೆಗೆ ಬಂದಿದ್ದೇವೆ. ಮತ್ತೆ ಕೇರಳ ಬಸ್ ಗಳಿಗೆ ಹಣ ಕೊಟ್ಟು ಹೋಗಬೇಕು ಅಂತಿದ್ದಾರೆ. ಇದು ಕೇರಳ ಸರ್ಕಾರದಿಂದ ನಮ್ಮ ಮೇಲಾಗುತ್ತಿರುವ ದೌರ್ಜನ್ಯ. ಇದರಿಂದ ಕೂಡಲೇ ಸಿದ್ದರಾಮಯ್ಯನವರು ಕೇರಳ ಸರಕಾರದ ಜೊತೆ ಮಾತಾಡಿ ನಮ್ಮ ವಾಹನ ಬಿಡಲು ಅವಕಾಶ ಮಾಡಿಕೊಡಲು ಅವಕಾಶ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.