ಮೂಳೆ ಸೇರಿ Bigg Boss ಎದುರು 3 ವಿಚಿತ್ರ ಬೇಡಿಕೆ ಇಟ್ಟ ಗಿಲ್ಲಿ ನಟ: ಇದ್ಯಾಕೆ ಹೀಗೆ ಮಾಡಿದೆ ಕೇಳ್ತಿರೋ ಫ್ಯಾನ್ಸ್​!

ಮೂಳೆ ಸೇರಿ Bigg Boss ಎದುರು 3 ವಿಚಿತ್ರ ಬೇಡಿಕೆ ಇಟ್ಟ ಗಿಲ್ಲಿ ನಟ: ಇದ್ಯಾಕೆ ಹೀಗೆ ಮಾಡಿದೆ ಕೇಳ್ತಿರೋ ಫ್ಯಾನ್ಸ್​!

ಮೂಳೆ ಸೇರಿ Bigg Boss ಎದುರು 3 ವಿಚಿತ್ರ ಬೇಡಿಕೆ ಇಟ್ಟ ಗಿಲ್ಲಿ ನಟ: ಇದ್ಯಾಕೆ ಹೀಗೆ ಮಾಡಿದೆ ಕೇಳ್ತಿರೋ ಫ್ಯಾನ್ಸ್​!
ಬಿಗ್‌ಬಾಸ್‌ ಮನೆಯಲ್ಲಿ ‘ಗಿಲ್ಲಿ ನಟ’ನ ಹವಾ ಜೋರಾಗಿದ್ದು, ಅವರೇ ವಿನ್ನರ್ ಎನ್ನಲಾಗುತ್ತಿದೆ. ಈ ನಡುವೆ, ಬಿಗ್‌ಬಾಸ್‌ ನೀಡಿದ ಮೂರು ಕೋರಿಕೆಗಳ ಅವಕಾಶದಲ್ಲಿ, ಗಿಲ್ಲಿ ನಟ ಸಿನಿಮಾ ನೋಡುವ, ಆನೆಯ ಮೇಲೆ ಕೂರುವ ಮತ್ತು ನಲ್ಲಿ ಮೂಳೆ ತಿನ್ನುವಂತಹ ವಿಚಿತ್ರ ಆಸೆಗಳನ್ನು ವ್ಯಕ್ತಪಡಿಸಿದ್ದಾರೆ.
ಸದ್ಯ ಗಿಲ್ಲಿ ನಟನ ಹವಾ ಅಂತೂ ಮುಗಿಯುವ ಹಾಗೆಯೇ ಕಾಣಿಸ್ತಿಲ್ಲ. ಎಲ್ಲಿ ನೋಡಿದರೂ ಗಿಲ್ಲಿ- ಗೆಲ್ಲಿ ಎನ್ನುವ ಮಾತುಗಳೇ. ಅವರ ಅಭಿಮಾನಿಗಳಿಂದ ಹಿಡಿದು, ಬಿಗ್​ಬಾಸ್​ನಿಂದ ಹೊರಕ್ಕೆ ಬಂದಿರುವ ಸ್ಪರ್ಧಿಗಳ ಬಾಯಲ್ಲಿಯೂ ಇವರದ್ದೇ ಹೆಸರು.

ತಮಗೆ ಇವರು ವಿನ್​ ಆಗೋದು ಇಷ್ಟವಿಲ್ಲ ಎಂದು ಕೆಲವು ಸ್ಪರ್ಧಿಗಳು ಇದಾಗಲೇ ಓಪನ್​ ಆಗಿಯೇ ಹೇಳಿಕೊಂಡದ್ದೂ ಆಗಿದೆ, ಇದರ ಹೊರತಾಗಿಯೂ ಇವರೇ ವಿನ್​ ಆಗೋದು ಎಂದೂ ಹೇಳಿದ್ದಾರೆ. ಆ ರೀತಿಯಲ್ಲಿ ಗಿಲ್ಲಿಯ ಹವಾ ಸೃಷ್ಟಿಯಾಗಿದೆ.

ಇದೀಗ ಗಿಲ್ಲಿ ನಟನಿಗೆ ಬಿಗ್​ಬಾಸ್​ನಿಂದ ಮೂರು ವಿಷ್​ ಕೇಳಲಾಗಿದೆ. ಮೂರು ಕೋರಿಕೆಗಳನ್ನು ಇಡುವಂತೆ ಹೇಳಲಾಗಿದೆ. ಗಿಲ್ಲಿ ನಟನ ಅಭಿಮಾನಿಗಳು ತಾವೇ ಬಿಗ್​ಬಾಸ್​ ವಿನ್​ ಆಗಬೇಕು ಎನ್ನುವ ಕೋರಿಕೆಯನ್ನು ಇಡುತ್ತಾರೆಯೋ ಎಂದು ಆಸೆಯಿಂದ ಕಾದಿದ್ದರು. ಆದರೆ ಹಾಗೆ ಆಗಲಿಲ್ಲ. ಅಷ್ಟಕ್ಕೂ ಅಂಥ ಕೋರಿಕೆಯನ್ನು ಇಡುವ ಹಾಗೆಯೂ ಇಲ್ಲ ಎನ್ನಿ. ಇದಕ್ಕಾಗಿಯೇ ಗಿಲ್ಲಿ ನಟ ಮೂರು ವಿಚಿತ್ರ ಎನ್ನುವಂಥ ಆಸೆಯನ್ನು ಇಟ್ಟಿದ್ದಾರೆ.

ಅದರಲ್ಲಿ ಮೊದಲನೆಯದಾಗಿ, ಬಿಗ್‌ಬಾಸ್‌ ಮನೆಯಲ್ಲಿರುವ ಟಿವಿಯಲ್ಲಿ ಒಂದು ಒಳ್ಳೆಯ ಸಿನಿಮಾ ನೋಡಬೇಕು ಎನ್ನುವ ಕೋರಿಕೆಯನ್ನು ಬರೆದು ಬಿಗ್​ಬಾಸ್​​ ಕ್ಯಾಮೆರಾ ಮುಂದೆ ತೋರಿಸಿದ್ದಾರೆ ಗಿಲ್ಲಿ ನಟ.

ಇವರ ಎರಡನೆಯ ಆಸೆ, ಬಿಗ್​ಬಾಸ್​ ಮನೆಯಲ್ಲಿ ಇರುವ ಆನೆಯ ಮೇಲೆ ಕುಳಿತುಕೊಳ್ಳುವುದಂತೆ! ಅಬ್ಬಬ್ಬಾ ಇದೆಂಥ ಆಸೆನಪ್ಪಾ ಎನ್ನುತ್ತಿದ್ದಾರೆ ಗಿಲ್ಲಿ ಫ್ಯಾನ್ಸ್​.

ಇನ್ನು 3ನೆಯ ಆಸೆ ನಲ್ಲಿ ಮೂಳೆಯನ್ನು ತಿನ್ನಬೇಕು ಎನ್ನುವುದಾಗಿ ಹೇಳಿದ್ದಾರೆ. ಮಧ್ಯಾಹ್ನದ ಟೈಮ್​ನಲ್ಲಿ ಬರೀ ನಲ್ಲಿ ಮೂಳೆಯನ್ನೇ ಡೈನಿಂಗ್‌ ಟೇಬಲ್‌ ಮೇಲೆ ಕುಳಿತುಕೊಂಡು ಚೆನ್ನಾಗಿ ತಿನ್ನಬೇಕು. ಬೆಳಿಗ್ಗೆ ಒಂದು ಗಂಟೆ ಹೆಚ್ಚಿಗೆ ನಿದ್ದೆ ಮಾಡಬೇಕು. ಈ ಸಮಯದಲ್ಲಿ ನನಗೆ ನಾಯಿ ಬೊಗಳುವ ಸೌಂಡ್‌ ಬರಬಾರದು ಎಂದಿದ್ದಾರೆ ಗಿಲ್ಲಿ. ಅಷ್ಟಕ್ಕೂ ಗಿಲ್ಲಿ ನಟ ಫೇಮಸ್​ ಆಗಿದ್ದೇ ನಲ್ಲಿ ಮೂಳೆ ಎನ್ನುವ ಅವರ ಯುಟ್ಯೂಬ್​ ವಿಡಿಯೋದಿಂದ. ಇದೊಂದೇ ವಿಡಿಯೋ 20 ಮಿಲಿಯನ್​ಗಟ್ಟಲೆ ವ್ಯೂವ್ಸ್​ ತಂದುಕೊಟ್ಟಿತ್ತು.

Source link

Leave a Reply

Your email address will not be published. Required fields are marked *