Headlines

ಚಿಕ್ಕಮಗಳೂರಿನ ಹಲವೆಡೆ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ

ಚಿಕ್ಕಮಗಳೂರಿನ ಹಲವೆಡೆ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ


ಚಿಕ್ಕಮಗಳೂರು, ಜನವರಿ 13: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈ ವರ್ಷದ ಮೊದಲಮಳೆಯ ಸಿಂಚನವಾಗಿದೆ. ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ, ಎನ್.ಆರ್.ಪುರ ಭಾಗದಲ್ಲಿ ವರುಣ ಅಬ್ಬರಿಸಿದ್ದು, ದಿಢೀರ್ ಸುರಿದ ಮಳೆಯಿಂದ ಜನರು ಕಂಗಾಲಾದ ಪ್ರಸಂಗ ನಡೆದಿದೆ. ಕಳೆದ ಒಂದು ವಾದದಿಂದ ಕೊರೆಯುವ ಚಳಿ, ಶೀತ ಗಾಳಿಗೆ ಜನರು ಹೈರಾಣಾಗಿರುವ ನಡುವೆ ಧಾರಾಕಾರವಾಗಿ ಸುರಿದ ಮಳೆ ಕಾಫಿ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ. ಇಡೀ ಕಾಫಿ ಫಸಲಿನ ಕೊಯ್ಲು ನಡೆಯುತ್ತಿದ್ದು, ಒಣ ಹಾಕಿದ ಕಾಫಿ ಮಳೆಯಿಂದ ಸಂಪೂರ್ಣ ನೆನೆದು ಹಾಳಾಗಿದೆ. ಕೆಲವೆಡೆ ಬೆಳೆ ನೀರಲ್ಲಿ ಕೊಚ್ಚಿ ಹೋಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *