ಕೊಪ್ಪಳ, (ಜನವರಿ 13): ಜೀವ ಪಣಕ್ಕಿಟ್ಟು ಸಾಹಸಗಳ ಪ್ರದರ್ಶನ ಮಾಡುವ ಮಗುವಿನ ವಿಡಿಯೋ ವೈರಲ್ ಆಗಿದ್ದು, ಇದೀಗ ಅದೇ ವೈರಲ್ ವಿಡಿಯೋ ಕುಟುಂಬಕ್ಕೆ ಸಂಕಷ್ಟ ತಂದಿದೆ. ಕಳೆದ ಕೆಲ ದಿನಗಳ ಹಿಂದೆ ಮದ್ಯಪ್ರದೇಶದಿಂದ ಬಂದ ಅಲೆಮಾರಿ ಕುಟುಂಬವೊಂದು ಹೊಟ್ಟೆ ಪಾಡಿಗಾಗಿ ಕೊಪ್ಪಳದ ಗವಿ ಮಠದ ಜಾತ್ರೆಯಲ್ಲಿ (ಕೊಪ್ಪಳ ಗವಿಮಠ ಜಾತ್ರೆ) ಸಾಹಸ ದೃಶ್ಯಗಳನ್ನು ಪ್ರದರ್ಶಿಸಲಾಯಿತು,ಸಾಹಸ ಪ್ರದರ್ಶನಕ್ಕೆ ಪುಟ್ಟ ಬಾಲಕಿಯನ್ನ ಬಳಕೆ ಮಾಡಿಕೊಂಡಿದ್ದರು. ಆ ಬಾಲಕಿ ಮಾಡೋ ಸಾಹಸ ಪ್ರದರ್ಶನ ವೈರಲ್ ಆಗುತ್ತಿದೆ.ಬಾಲ ಕಾರ್ಮಿಕ ಕಾಯ್ದೆಯಡಿ 14 ವರ್ಷದ ಮಗುವಿಗೆ ಯಾವ ಕೆಲಸಕ್ಕೆ ಬಳಸಿಲ್ಲ. ಆದರೆ, ವಿಡಿಯೋ ವೈರಲ್ ಆಗುತ್ತಲೇ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಬಾಲಕಿಯನ್ನ ರಕ್ಷಣೆ ಮಾಡಿದ್ದಾರೆ.ಆದ್ರೆ ಇಡೀ ಕಥೆಗೆ ಟ್ವಿಸ್ಟ್ ಸಿಕ್ಕಿದ್ದು ಇಲ್ಲೆ.ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ರಕ್ಷಣೆ ಬಾಲಕಿ ಬಾಲಕಿ ಅಲ್ಲ,ಬದಲಾಗಿ ಆಕೆ ಬಾಲಕಿ.
ಅವಳಲ್ಲ ಅವನು: ಅಧಿಕಾರಿಗಳು ಶಾಕ್
ಮಕ್ಕಳನ್ನು ಸೆಳೆಯೋ ದೃಷ್ಟಿಯಿಂದ ಬಾಲಕನಿಗೆ ಹೆಣ್ಣಿನ ವೇಷಭೂಷಣ ಹಾಕಿದ್ರಂತೆ. ಖುದ್ದು ಪೋಷಕರೇ ಆ ಮಾತನ್ನ ಅಧಿಕಾರಿಗಳ ಮುಂದೆ ಹೇಳಿದ್ದರು. ಅಧಿಕಾರಿಗಳು ಸಹ ಮೊದಲು ಆ ಮಗುವನ್ನ ಬಾಲಕಿಯರ ಬಾಲ ಮಂದಿರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಫಾರಂ ನಂಬರ್ 17 ತುಂಬುವಾಗ ಬಟ್ಟೆ ಅಸಲಿ ಸತ್ಯ ಬಾಯಿ ಬಿಟ್ಟಿದ್ದಾರೆ.ಒಂದು ಕ್ಷಣ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಗಾಬರಿ ಮಾಡಿದ್ದಾರೆ.ಬಳಿಕ ಬಾಲಕಿಯರ ಬಾಲ ಮಂದಿರದಿಂದ ಬಾಲಕರ ಬಾಲ ಮಂದಿರಕ್ಕೆ ಶಿಫ್ಟ್ ಮಾಡಿದ್ದಾರೆ.
ಇದನ್ನೂ ನೋಡಿ: ಕೊಪ್ಪಳ: ಬಸ್ಸಿಗಾಗಿ ನೂಕುನುಗ್ಗಲು, ಶಕ್ತಿ ಯೋಜನೆ ಎಫೆಕ್ಟ್‌ಗೆ ಮಹಿಳೆಯರಿಗೆ ಸುಸ್ತೋ ಸುಸ್ತು.
ಹೆಣ್ಣಿನ ವೇಷಭೂಷಣ ಹಾಕಿ ಸಾಹಸ ಪ್ರದರ್ಶನ
ಜನರನ್ನು ತಮ್ಮತ್ತ ಸೆಳೆದ ನಾಲ್ಕು ರೂಪಾಯಿ ಹಣ ಬಂದಿದೆ ಎಂದು ಅಲೆಮಾರಿ ಕುಟುಂಬದ ಕಾಯಕ. ಅದೇ ರೀತಿ ಕೊಪ್ಪಳದ ಗವಿಮಠದ ಜಾತ್ರೆಯಲ್ಲಿ ಹತ್ತು ವರ್ಷದ ಬಾಲಕನಿಗೆ ಹೆಣ್ಣಿನ ವೇಷಭೂಷಣ ಹಾಕಿ ಸಾಹಸ ಪ್ರದರ್ಶನ ಮಾಡ್ತಿದ್ರು,ಆದ್ರೆ ಯಾವಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತೋ,ಆಗ ಅಲೆಮಾರಿ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.
ಬಾಲಕನ ರಕ್ಷಣೆ
ಸದ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹತ್ತು ವರ್ಷದ ಮಗುವನ್ನು ರಕ್ಷಿಸಿದ್ದಾರೆ. ಮಕ್ಕಳ ಭವಿಷ್ಯ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಯಾರೂ ಕೂಡ ಮಕ್ಕಳನ್ನ ವಾಣಿಜ್ಯ ಬಳಕೆ ಮಾಡಿಕೊಳ್ಳಲು ಅವಕಾಶವಿಲ್ಲ. ಸಂವಿಧಾನದ ಕಲಂ 1 ಎ ಪ್ರಕಾರ 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿರೋದು ಸರ್ಕಾರದ ಕೆಲಸ. ಹೀಗಾಗಿ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಮಗುವನ್ನು ರಕ್ಷಣೆ ಮಾಡಿದ್ದು, ಇದೀಗ ಮಗುವನ್ನು ಮೂಲ ಸ್ಥಳಕ್ಕೆ ಕಳಿಸುತ್ತಿದ್ದಾರೆ.
ಒಟ್ಟಾರೆ ಹೊಟ್ಟೆಪಾಡಿಗಾಗಿ ಕೊಪ್ಪಳಕ್ಕೆ ಬಂದ ಅಲೆಮಾರಿ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.ಸಾಮಾಜಿಕ ಜಾಲತಾಣದಿಂದ ಆ ಕುಟುಂಬ ಇದೀಗ ಮಗುವನ್ನು ಬಿಟ್ಟಿರಬೇಕಾಯ್ತು,ಅಧಿಕಾರಿಗಳು ಕೂಡ ತಮ್ಮ ಕೆಲಸ ಮಾಡಿದ್ದಾರೆ.ಆದ್ರೆ ಒಂದು ವಿಡಿಯೋ ಏನೆಲ್ಲಾ ಸಮಸ್ಯೆ ಉಂಟು ಮಾಡತ್ತೆ ಎನ್ನುವುದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.