ಫ್ರಾನ್ಸ್‌ : 350 ಟ್ರಾಕ್ಟರ್‌ ಜತೆ ಸಂಸತ್ತಿಗೆ ರೈತರ ಮುತ್ತಿಗೆ – ಜೀವನ ನಿರ್ವಹಣೆಗೆ ಅಪಾಯವಾಗುತ್ತಿದೆ ಎಂದು ಆರೋಪ | France Farmers Lay Siege To Parliament With 350 Tractors

ವಿದೇಶಿ ಕೃಷಿ ಉತ್ಪನ್ನಗಳ ಆಮದಿನಿಂದ ತಮಗೆ ಬೆಲೆಯೇ ಸಿಗುತ್ತಿಲ್ಲ ಎಂದು ಆರೋಪಿಸಿ ಫ್ರಾನ್ಸ್‌ನಲ್ಲಿ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಮಂಗಳವಾರ ಅನ್ನದಾತರು ಸುಮಾರು 350 ಟ್ರ್ಯಾಕ್ಟರ್‌ಗಳನ್ನು ಸಂಸತ್‌ ಕಡೆಗೆ ಚಲಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ಯಾರಿಸ್‌: ವಿದೇಶಿ ಕೃಷಿ ಉತ್ಪನ್ನಗಳ ಆಮದಿನಿಂದ ತಮಗೆ ಬೆಲೆಯೇ ಸಿಗುತ್ತಿಲ್ಲ ಎಂದು ಆರೋಪಿಸಿ ಫ್ರಾನ್ಸ್‌ನಲ್ಲಿ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಮಂಗಳವಾರ ಅನ್ನದಾತರು ಸುಮಾರು 350 ಟ್ರ್ಯಾಕ್ಟರ್‌ಗಳನ್ನು ಸಂಸತ್‌ ಕಡೆಗೆ ಚಲಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದು 5 ವರ್ಷಗಳ ಹಿಂದೆ ಭಾರತದಲ್ಲಿ ನಡೆದ ರೈತ ಚಳವಳಿ ನೆನಪಿಸುವಂತಿದೆ.

ತಮಗೆ ಆರ್ಥಿಕ ನಷ್ಟ, ಜೀವನ ನಿರ್ವಹಣೆಗೆ ಅಪಾಯ

ಫ್ರಾನ್ಸ್‌ ವಿದೇಶಗಳಿಂಧ ಅಗ್ಗದ ಆಮದನ್ನು ಮಾಡಿಕೊಳ್ಳುತ್ತಿದೆ. ಇದರಿಂದ ತಮಗೆ ಆರ್ಥಿಕ ನಷ್ಟ ವಾಗುತ್ತಿದೆ. ಜೀವನ ನಿರ್ವಹಣೆಗೆ ಅಪಾಯವಾಗುತ್ತಿದೆ ಎಂದು ಆರೋಪಿಸಿ ರೈತರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಬಗ್ಗೆ ಫ್ರಾನ್ಸ್ ಸರ್ಕಾರ ಕೂಡ ಪ್ರತಿಕ್ರಿಯಿಸಿದ್ದು, ರೈತರ ಸಮಸ್ಯೆ ಪರಿಹರಿಸಲು ಶೀಘ್ರದಲ್ಲೇ ಹೊಸ ಘೋಷಣೆಗಳನ್ನು ಮಾಡಲಿದ್ದೇವೆ ಎಂದಿದ್ದಾರೆ.

2021ರ ಗಣರಾಜ್ಯೋತ್ಸವ ದಿನದಂದು ಭಾರತದಲ್ಲಿಯೂ ಚಳುವಳಿ

2021ರ ಗಣರಾಜ್ಯೋತ್ಸವ ದಿನದಂದು ಭಾರತದಲ್ಲಿಯೂ ಇದೇ ರೀತಿ ಟ್ರ್ಯಾಕ್ಟರ್‌ ಚಳುವಳಿ ನಡೆದಿತ್ತು. ಕೃಷಿ ಕಾಯ್ದೆ ವಿರೋಧಿಸಿ ಪಂಜಾಬ್‌ನ ಸಾವಿರಾರು ರೈತರು ಕೆಂಪುಕೋಟೆಗೆ ಟ್ಯಾಕ್ಟರ್‌ ನುಗ್ಗಿಸಲು ಯತ್ನಿಸಿದ್ದರು.

Source link

Leave a Reply

Your email address will not be published. Required fields are marked *