ಬಿಗ್ ಬಾಸ್ (ಬಿಗ್ ಬಾಸ್) ಮನೆಯಲ್ಲಿರೋ ರಘು ಹಾಗೂ ಅಶ್ವಿನಿ ಗೌಡ ಮಧ್ಯೆ ಒಳ್ಳೆಯ ಫ್ರೆಂಡ್ ಶಿಪ್ ಬೆಳೆದಿದೆ. ಇಬ್ಬರ ವಯಸ್ಸು ಸರಿ ಸುಮಾರು ಒಂದೇ ರೀತಿ ಇದೆ. ಈ ಕಾರಣದಿಂದಲೇ ಬಾಂಡಿಂಗ್ ಬಿಗಿಯಾಗಿದೆ. ಬಿಗ್ ಬಾಸ್ ಮನೆಯ ಇತರ ಸ್ಪರ್ಧಿಗಳು ಇವರ ಕಾಲೆಳೆಯುವ ಕೆಲಸ ಮಾಡುತ್ತಿರುತ್ತಾರೆ. ಈಗ ಅಶ್ವಿನಿ ಗೌಡ ಅವರು ಈ ವಿಷಯದಲ್ಲಿ ಫನ್ ಮಾಡಿದ್ದಾರೆ. ಅವರು ಹೇಳಿದ ವಾಕ್ಯಕ್ಕೆ ಬೇರೆ ಬೇರೆ ರೀತಿಯ ಅರ್ಥ ಕಲ್ಪಿಸುತ್ತಾ ಇದೆ. ಆ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈಗ ನಡೆಯುತ್ತಿರುವುದು ಕೊನೆಯ ವಾರ. ಸ್ಪರ್ಧಿಗಳ ಮಧ್ಯೆ ಸಾಕಷ್ಟು ಟಫ್ ಸ್ಪರ್ಧೆ ಏರ್ಪಡುತ್ತಿದೆ. ಯಾರು ಹೋಗ್ತಾರೆ, ಯಾರು ಕಪ್ ಗೆಲ್ತಾರೆ ಎಂಬ ಕುತೂಹಲ ಮೂಡಿದೆ. ಈ ಮಧ್ಯೆ ಕೊನೆಯ ವಾರದಲ್ಲಿ ವಿವಿಧ ರೀತಿಯ ಆಸೆಗಳನ್ನು ಹೇಳಿಕೊಳ್ಳಲು ಅವಕಾಶವಿತ್ತು. ಅದೇ ರೀತಿ ರಘು ಅವರು ತಮ್ಮ ಮಗನ ಜೊತೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಆಟ ಆಡಬೇಕು ಎಂದು ಆಸೆ ಹೇಳಿದ್ದರು. ಅದೇ ರಘು ಮಗ ರೋನಿತ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಬಿಗ್ ಬಾಸ್ ಮನೆಯ ಈಜುಕೊಳದಲ್ಲಿ ರಘು ಹಾಗೂ ರೋನಿತ್ ಆಟ ಆಡಿದರು. ಈ ವೇಳೆ ಅಶ್ವಿನಿ ಗೌಡ ಮಾತಿಗೆ ಇಳಿದರು. ‘ನಿಮ್ಮ ಅಪ್ಪ ಬಿಗ್ ಬಾಸ್ ಮನೆಯಿಂದ ಹೊರ ಬರುವಾಗ ಒಬ್ಬರೇ ಬರೋದಿಲ್ಲ. ಇತರರು ಅವರ ಜೊತೆ ಇರ್ತಾರೆ. ಓಕೆ ಅಲ್ಲವಾ’ ಎಂದು ಕೇಳಿದರು. ‘ಯಾರು ಇರ್ತಾರೆ’ ಎಂದು ರೋನಿತ್ ಮರು ಪ್ರಶ್ನೆ ಮಾಡಿದರು. ಆಗ, ಅಶ್ವಿನಿ ಗೌಡ ಉತ್ತರಿಸಬೇಕು ಎಂದಾಗ ಬಿಗ್ ಬಾಸ್ ಹಾಡೊಂದನ್ನು ಹಾಕಿದರು. ಹೀಗಾಗಿ ಆ ಸಂಭಾಷಣೆ ಮುಂದುವರಿಯಲೇ ಇಲ್ಲ.
ಇದನ್ನೂ ಓದಿ: ಧ್ರುವಂತ್‌ಗೆ ಸೀಸನ್ ಚಪ್ಪಾಳೆ ಬದಲು ವಾರದ ಚಪ್ಪಾಳೆ; ನಿರ್ಧಾರ ಬದಲಿಸಿದ ಬಿಗ್ ಬಾಸ್
ಅಶ್ವಿನಿ ಗೌಡ ಹೇಳಿದ ಮಾತಿಗೆ ನಾನಾ ಅರ್ಥ ಕಲ್ಪಿಸಲಾಗುತ್ತಿದೆ. ‘ಅವರ ಜೊತೆ ನಾನು ಬರ್ತೀನಿ’ ಎಂಬರ್ಥದಲ್ಲಿ ಅವರು ಹಾಸ್ಯ ಮಾಡಿರಬಹುದು ಎಂದು ಕೆಲವರು ಹೇಳಿದ್ದಾರೆ. ರಘು ಅವರಿಗೆ ಮದುವೆ ಆಗಿ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಅವರದ್ದು ಶುದ್ಧ ಮನಸ್ಸು. ಹೀಗಾಗಿ, ಈ ಬಗ್ಗೆ ಅವರು ಯೋಚಿಸಿಲ್ಲ. ಇದೆಲ್ಲ ಹಾಸ್ಯಕ್ಕೆ ಮಾತ್ರ ಸೀಮಿತವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.