ರಾಜ್ಕೋಟ್: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ಸದ್ಯ ರೆಡ್ ಹಾಟ್ ಫಾರ್ಮ್ನಲ್ಲಿದ್ದು, ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಇದೀಗ ಕೊಹ್ಲಿಯ ಬಗ್ಗೆ ಮಾಜಿ ನಾಯಕ ಅಜಿಂಕ್ಯ ರಹಾನೆ ಮನಬಿಚ್ಚಿ ಮಾತನಾಡಿದ್ದಾರೆ.

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ 93 ರನ್ ಸಿಡಿಸುವ ಮೂಲಕ ಹೊಸ ವರ್ಷದ ಮೊದಲ ಪಂದ್ಯದಲ್ಲೇ ತಮ್ಮ ಮಿಂಚಿನ ಆಟವನ್ನು ಮುಂದುವರೆಸಿದ್ದಾರೆ.

ಇನ್ನು ಮೈದಾನದೊಳಗೆ ಸದಾ ಆಕ್ರಮಣಾಕಾರಿ ಮನೋಭಾವ ಹೊಂದಿರುವ ವಿರಾಟ್ ಕೊಹ್ಲಿಗೆ ವಿಪರೀತ ಸೊಕ್ಕು ಇದೆ ಎನ್ನುವ ಆರೋಪ ಆಗಾಗ ಅವರ ಮೇಲೆ ಕೇಳಿ ಬರುತ್ತಲೇ ಇರುತ್ತದೆ.

ಈ ವಿಚಾರವಾಗಿ ವಿರಾಟ್ ಕೊಹ್ಲಿಯ ಸ್ನೇಹಿತ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಅಜಿಂಕ್ಯ ರಹಾನೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಅಂದಹಾಗೆ ಅಜಿಂಕ್ಯ ರಹಾನೆ ತಮ್ಮ ಬಹುತೇಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ವಿರಾಟ್ ಕೊಹ್ಲಿ ಜತೆಗೆ ಆಡಿದ್ದಾರೆ.

ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ಚರ್ಚೆಯಾಗುವ ಕೊಹ್ಲಿಯ ಅಹಂಕಾರದ ಕುರಿತಂತೆ ಮುಂಬೈ ಮೂಲದ ರಹಾನೆ ಮೊದಲ ಬಾರಿಗೆ ಬಹಿರಂಗವಾಗಿಯೇ ಸ್ಪಷ್ಟನೆ ನೀಡಿದ್ದಾರೆ.

ಕ್ರಿಕ್ಬಜ್ ಜತೆಗಿನ ಮಾತುಕತೆಯ ವೇಳೆ ರಹಾನೆ, ‘ವಿರಾಟ್ ಕೊಹ್ಲಿಯ ಬಗ್ಗೆ ನಾವು ಎಷ್ಟು ಮಾತನಾಡಿದರೂ ಕಡಿಮೆಯೇ. ಯಾಕೆಂದರೆ ನಾನು ವಿರಾಟ್ ಕೊಹ್ಲಿಯನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ’ ಎಂದಿದ್ದಾರೆ.

’ಅವರು ಬ್ಯಾಟಿಂಗ್ ಮಾಡಲು ಇಳಿದಾಗ ನಾವು ಅವರ ಕ್ರಿಕೆಟ್ ಫ್ಯಾಷನ್ ಹಾಗೂ ಪಂದ್ಯ ಗೆಲ್ಲಿಸಬೇಕೆಂಬ ತುಡಿತವನ್ನು ಪ್ರತಿ ಬಾರಿಯು ನೋಡುತ್ತೇವೆ. ಆದರೆ ನನಗೆ ಅವರ ಆ್ಯಟಿಟ್ಯೂಡ್ ಇವೆಲ್ಲದಕ್ಕಿಂತ ಅದ್ಭುತ ಎಂದೆನಿಸುತ್ತದೆ’ ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

’ಕಲಿಯಬೇಕೆಂಬ ಆ್ಯಟಿಟ್ಯೂಡ್, ಕೊನೆಯ ಕ್ಷಣದವರೆಗೂ ಹೋರಾಡಬೇಕು ಎನ್ನುವ ಆ್ಯಟಿಟ್ಯೂಡ್ಗೆ ಸಾಟಿಯೇ ಇಲ್ಲ. ಜನರು ಕೊಹ್ಲಿಯನ್ನು ಅಹಂಕಾರಿ ಎನ್ನಬಹುದು. ಆದರೆ ಆತ ಹಾಗಿಲ್ಲ’ ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

ಅವರು ಮಹತ್ವದ ಪಂದ್ಯಕ್ಕೂ ಎರಡು ದಿನಗಳ ಮೊದಲಿನಿಂದಲೇ ಜನರ ಜತೆ ಹಾಗೂ ಸಹ ಆಟಗಾರರ ಜತೆ ಹೆಚ್ಚು ಮಾತನಾಡುವುದಿಲ್ಲ. ಇದಕ್ಕೇ ಅಹಂ ಅಂದುಕೊಂಡರೆ ಅದು ತಪ್ಪಾಗುತ್ತದೆ. ಅದು ಅವರ ಸಿದ್ದತೆಯ ಭಾಗ ಎಂದು ಅಜಿಂಕ್ಯ ರಹಾನೆ ಸ್ಪಷ್ಟನೆ ನೀಡಿದ್ದಾರೆ.

2008ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟಾರೆ 28,068 ರನ್ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ.

Source link
ವಿರಾಟ್ ಕೊಹ್ಲಿ ನಿಜಕ್ಕೂ ಅಹಂಕಾರಿನಾ? ಕೊನೆಗೂ ಸತ್ಯ ಬಾಯ್ಬಿಟ್ಟ ಟೀಂ ಇಂಡಿಯಾ ಮಾಜಿ ನಾಯಕ!