‘ಕಾಂತಾರ’ ಮತ್ತು ‘ಕಾಂತಾರ: ಅಧ್ಯಾಯ 1’ (ಕಾಂತಾರ) ಸಿನಿಮಾದಲ್ಲಿ ಕರಾವಳಿಯ ದೈವ ಆರಾಧನೆ ಅದರ ಮಹಿಮೆ ಇನ್ನಿತರ ವಿಚಾರಗಳನ್ನು ತೋರಿಸಲಾಗಿದೆ. ಸಿನಿಮಾ ಮಾಡುವಾಗ ತಾವು ದೈವಗಳಿಗೆ ಅಪಚಾರ ಆಗದಂತೆ ಬಲು ನೇಮ-ನಿಷ್ಠೆಯಿಂದ ಸಿನಿಮಾ ಮಾಡುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಜೊತೆಗೆ ಯಾರೂ ಸಹ ದೈವವನ್ನು ಅನುಕರಣೆ ಮಾಡುವುದು ಬೇಡ, ದೈವವನ್ನು ಹಾಸ್ಯಕ್ಕೆ ಬಳಸಿಕೊಳ್ಳುವುದು ಅಕ್ಷಮ್ಯ ಎಂದು ಸಹ ಹೇಳಿದ್ದರು. ಆದರೂ ಸಹ ಅದನ್ನು ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ ನ ಸ್ಟಾರ್ ನಟ ರಣ್ವೀರ್ ಸಿಂಗ್, ವೇದಿಕೆಯ ಮೇಲೆ ಕೆಟ್ಟದಾಗಿ ದೈವನ ಅನುಕರಣೆಯನ್ನು ಮಾಡಿ ಕನ್ನಡಿಗರ ಸಿಟ್ಟಿಗೆ ಕಾರಣವಾಗಿದ್ದರು. ಆದರೆ ಇದೀಗ ಮತ್ತೊಂದು ತಂಡ ಇದೇ ಯತ್ನ ಮಾಡಿದೆ.
ಬಾಲಿವುಡ್ ನ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ಅತಿರೇಕಕ್ಕೆ ಹೋಗಿ ಹಾಸ್ಯ ಮಾಡುವುದು ಮಾಮೂಲು, ಬಾಲಿವುಡ್ ನಲ್ಲಿ ನಡೆಯುವುದು ಮೈಂಡ್ ಲೆಸ್ ಕಾಮಿಡಿ ಮತ್ತು ಬಾಡಿ ಶೇಮಿಂಗ್ ಕಾಮಿಡಿ. ಗೋಲ್ಮಾಲ್, ವೆಲ್ಹಮ್, ‘ಹೌಸ್ಫಯಲ್’ ಇಂಥಹುಗಳಿಗೆ ಉದಾಹರಣೆ. ಇದೀಗ ಬಾಲಿವುಡ್‌ನ ಇಂಥಹುದೇ ಒಂದು ಹಾಸ್ಯ ಪ್ರಧಾನ ಸಿನಿಮಾದಲ್ಲಿ ‘ಕಾಂತಾರ’ ಸಿನಿಮಾವನ್ನು ಹಾಸ್ಯಕ್ಕೆ ಬಳಸಿಕೊಳ್ಳಲಾಗಿದೆ.
ಇದನ್ನೂ ಓದಿ:ಆಸ್ಕರ್ ರೇಸ್‌ನಲ್ಲಿ ಸ್ಥಾನ ಪಡೆದ ‘ಕಾಂತಾರ: ಅಧ್ಯಾಯ 1’ ಸಿನಿಮಾ
‘ರಾಹು-ಕೇತು’ ಹೆಸರಿನ ಹಿಂದಿ ಹಾಸ್ಯ ಪ್ರಧಾನ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ, ಸಿನಿಮಾದಲ್ಲಿ ‘ಕಾಂತಾರ’ ಸಿನಿಮಾದ ಕೂಗು ಮತ್ತು ಸಿನಿಮಾದ ರೆಫರೆನ್ಸ್ ಸಹ ಬಳಸಲಾಗಿದೆ. ಆದರೆ ಸೆನ್ಸಾರ್ ಮಂಡಳಿ ಆ ಎರಡಕ್ಕೂ ಕತ್ತರಿ ಹಾಕಿದೆ. ಇಬ್ಬರು ಪೆದ್ದ ಯುವಕರ ಕತೆ ‘ರಾಹು-ಕೇತು’ ಆಗಿದ್ದು, ಸಿನಿಮಾದಲ್ಲಿ ಹಾಸ್ಯಕ್ಕಾಗಿ ‘ಕಾಂತಾರ’ ಸಿನಿಮಾದ ರೆಫೆರನ್ಸ್ ಹಾಗೂ ದೈವದ ಕೂಗನ್ನು ಬಳಸುತ್ತಿದ್ದಾರೆ. ಆದರೆ ಅದರಿಂದ ಭಕ್ತರ ಭಾವನೆಗೆ ಧಕ್ಕೆ ಎಂದು ಆ ದೃಶ್ಯವನ್ನು ತೆಗೆದಿದೆ.
ರಿಷಬ್ ಶೆಟ್ಟಿ, ಹೊಂಬಾಳೆ ಫಿಲಮ್ಸ್ ಮತ್ತು ‘ಕಾಂತಾರ’ ಸಿನಿಮಾ ತಂಡಕ್ಕೆ ಸೇರಿದ ಹಲವು ಬಾರಿ ಈ ಬಗ್ಗೆ ಹೇಳಿದ್ದಾರೆ. ದೈವದ ಅನುಕರಣೆ ಮಾಡುವುದು, ದೈವವನ್ನು ಹಾಸ್ಯಕ್ಕೆ ಬಳಸಿಕೊಳ್ಳುವುದು ಬೇಡ ಎಂದರೂ ಸಹ ಪದೇ ಪದೇ ಕಮರ್ಷಿಯಲ್ ಕಾರಣಗಳಿಗಾಗಿ, ಹಾಸ್ಯಕ್ಕೆ ದೈವದ ಅನುಕರಣೆಯನ್ನು ಮಾಡುತ್ತಲೇ ಇದ್ದಾರೆ. ಇದೀಗ ಸೆಂಟ್ರಲ್ ಮಂಡಳಿ ಸಮಯೋಚಿತವಾಗಿ ಬಾಲಿವುಡ್ ಸಿನಿಮಾದಿಂದ ತೆಗೆದು ‘ಕಾಂತಾರ’ ಸಿನಿಮಾದ ರೆಫೆರೆನ್ಸ್ ಹಾಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ