ಬೆಂಗಳೂರಿಗರೆ ಎಚ್ಚರ! ಅತಿಯಾದ ಚಳಿಯಿಂದ ಬರುತ್ತಿವೆ ಸಾಂಕ್ರಾಮಿಕ ರೋಗಗಳು

ಬೆಂಗಳೂರಿಗರೆ ಎಚ್ಚರ! ಅತಿಯಾದ ಚಳಿಯಿಂದ ಬರುತ್ತಿವೆ ಸಾಂಕ್ರಾಮಿಕ ರೋಗಗಳು


ಬೆಂಗಳೂರಿಗರೆ ಎಚ್ಚರ! ಅತಿಯಾದ ಚಳಿಯಿಂದ ಬರುತ್ತಿವೆ ವೈರಲ್ ಫ್ಲೂ

ಬೆಂಗಳೂರು, ಜನವರಿ 14: ಕಳೆದ ಎರಡು ವಾರದಿಂದ ಚಳಿ ಪ್ರಮಾಣ ಹೆಚ್ಚಾಗಿದ್ದು, ಅತಿಯಾದ ಚಳಿ ಜನರಲ್ಲಿ ಸಾಂಕ್ರಾಮಿಕ ರೋಗಗಳ ಜೊತೆ ಐಎಲ್ಐ ಸಾರಿ ವೈರಲ್ ಫ್ಲೂ ಕೇಸಗಳ ಸಂಖ್ಯೆ ಹೆಚ್ಚಾಗಿವೆ. ಅತಿಯಾದ ಚಳಿಯಿಂದ ರಾಜ್ಯದಲ್ಲಿ ಕಳೆದೊಂದು ವಾರದಿಂದ ನಿರಂತರ ಕೆಮ್ಮು, ನೆಗಡಿ, ಜ್ವರ ಹಾಗೂ ಸಾರಿ ಐಎಲ್ಐ (SARI-ILI) ಪ್ರಕರಣಗಳು ಹೆಚ್ಚಾಗಿವೆ. ಕಳೆದ ಒಂದು ವಾರದಲ್ಲಿ ಜನರಲ್ಲಿ 135 SARI , 35 ILI ಮತ್ತು 3327 ಅಕ್ಯೂಟ್ ಡಯಾರಿಯಲ್ ಡಿಸೈಜ್‌ಗಳು ಕಂಡುಬಂದಿವೆ, ಆರೋಗ್ಯ ಇಲಾಖೆಯು ನಿಗಾವಹಿಸಿದೆ.

ಗರ್ಭಿಣಿಯರು, ಹೈ ರಿಸ್ಕ್ ರೋಗಿಗಳ ಹುಷಾರ್!

ರಾಜ್ಯದಲ್ಲಿ ಹವಮಾನ ಸಮಸ್ಯೆಯಿಂದ ಸೀಸನಲ್ ಫ್ಲೂ ಭೀತಿ ಇದ್ದು, ನಗರವಾಸಿಗಳಲ್ಲಿ ಜ್ವರ, ಕೆಮ್ಮು, ನೆಗಡಿ, ಮೈಕೈ ನೋವು, ಶೀತ, ಹಸಿ ಕೆಮ್ಮಿ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಈ ಗುಣಲಕ್ಷಣಗಳು ಕಂಡುಬಂದಲ್ಲಿ ಗರ್ಭಿಣಿಯರು, ಹೈ ರಿಸ್ಕ್ ರೋಗಿಗಳಿಗೆ ಸೂಕ್ತ ಲಸಿಕೆ ಪಡೆಯುವಂತೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಚಳಿಯ ಜೊತೆಗೆ ಬದಲಾಗುತ್ತಿರುವ ಹವಮಾನ ಹಿನ್ನಲೆ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಕೆಸಿ ಜನರಲ್ ಆಸ್ಪತ್ರೆಯ ಡಾ ಮುರಳೀಧರ್ ವೈದ್ಯ ಎಚ್ಚರಿಕೆ ನೀಡಿದ್ದಾರೆ. ಚಳಿಗಾಲ ಮುಗಿಯುವವರೆಗೂ ಹೊರಗಡೆಯ ಆಹಾರ ಎಣ್ಣೆಯುಕ್ತ ತಿಂಡಿ ಹಾಗೂ ಅತಿಯಾದ ಸಿಹಿ ತಿನಿಸು ತಿನ್ನದೆ, ಮನೆಯ ಊಟವನ್ನೇ ಹೆಚ್ಚಾಗಿ ಸೇವಿಸುವಂತೆ.

ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ರೋಗಿಗಳ ಸಂಖ್ಯೆ

ಕಳೆದ ವರ್ಷ 1,79,028 ADD (ತೀವ್ರವಾದ ಅತಿಸಾರ ಕಾಯಿಲೆ) ಪ್ರಕರಣಗಳು ಕಂಡುಬಂದಿವೆ. ಆದರೆ ಈ ವರ್ಷ ಕಳೆದ ಐದು ದಿನದಲ್ಲಿ 3327 ಪ್ರಕರಣಗಳು ಕಂಡುಬಂದಿವೆ. ಕಳೆದ ವರ್ಷ 9400 ಐಎಲ್ಐ (ಇನ್ಫ್ಲುಯೆನ್ಸ ತರಹದ ಅನಾರೋಗ್ಯ) ಕೇಸ್ಗಳಿದ್ದರೆ, ಈ ಬಾರಿ ಕೇವಲ 5 ದಿನಗಳಲ್ಲಿ 135 ಪ್ರಕರಣಗಳು ಕಂಡುಬಂದಿವೆ. ಕಳೆದ ಐದು ದಿನದಲ್ಲಿ 25 ಸಾರಿ (ತೀವ್ರವಾದ ಉಸಿರಾಟದ ಸೋಂಕುಗಳು) ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಳೆದ ವರ್ಷ 4479 ಪ್ರಕರಣಗಳು ಇದ್ದವು. ಹೀಗಾಗಿ ಜನರು ಚಳಿಗಾಲ ಮುಗಿಯುವವರೆಗೂ ಸೇವಿಸದಂತೆ ಕಾಪಾಡುವುದು, ಬಿಸಿ ನೀರು ಕುಡಿಯುವುದರೊಂದಿಗೆ ಆರೋಗ್ಯಕರ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *