ಭಾರಿ ನಿರೀಕ್ಷೆಯಿಂದ ಬಿಡುಗಡೆಯಾದ ‘ಪರಾಶಕ್ತಿ’ (Parasakthi) ಸಿನಿಮಾ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಈಗಾಗಲೇ ಆಗಿದೆ. ‘ಜನ ನಾಯಕನ್’ ಸಿನಿಮಾದ ಎದುರು ಉದ್ದೇಶಪೂರ್ವಕವಾಗಿ ಸ್ಪರ್ಧೆಗೆ ಬಿದ್ದ ‘ಪರಾಶಕ್ತಿ’ ಸಿನಿಮಾ ಇದೇ ಕಾರಣಕ್ಕೆ ಹೆಚ್ಚು ಸುದ್ದಿಯಾಗಿತ್ತು. ಹಿಂದಿ ಹೇರಿಕೆ ವಿರುದ್ಧ ವಿಷಯವಿದ್ದ ಈ ಸಿನಿಮಾ ರಾಜಕೀಯ ಕಾರಣಗಳಿಗಾಗಿ ಕುತೂಹಲ ಹುಟ್ಟಿಸಿತ್ತು. ‘ಪರಾಶಕ್ತಿ’ ಸಿನಿಮಾ ತಮಿಳುನಾಡಿನ ಡಿಎಂಕೆ ಪಕ್ಷದ ಅಜೆಂಡ ಪ್ರಚಾರಕ್ಕಾಗಿ ಮಾಡಲಾದ ಸಿನಿಮಾ ಎಂಬ ಚರ್ಚೆ ಟ್ರೈಲರ್ ಬಿಡುಗಡೆ ಆದ ಮೇಲೆ ಇತ್ತು. ಇದೀಗ ‘ಪರಾಶಕ್ತಿ’ ಸಿನಿಮಾ ಬಿಡುಗಡೆ ಆಗಿದ್ದು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ಕಾಣುತ್ತಿಲ್ಲ. ಬಿಗಿಯಲ್ಲದ ಚಿತ್ರಕತೆ ಸೇರಿದಂತೆ ವಿಜಯ್ ಅಭಿಮಾನಿಗಳ ವಿರೋಧದ ಕಾರಣಗಳಿಗಾಗಿ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಇದೀಗ ಸಿನಿಮಾದ ನಿರ್ದೇಶಕಿ ಮತ್ತು ನಾಯಕ ನಟ ಬಹಿರಂಗವಾಗಿಯೇ ಪರಸ್ಪರ ಆರೋಪಗಳನ್ನು ಮಾಡಿಕೊಂಡಿದ್ದು, ಚಿತ್ರತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ.
‘ಪರಾಶಕ್ತಿ’ ಸಿನಿಮಾವನ್ನು ಸುಧಾ ಕೊಂಗರ ನಿರ್ದೇಶನ ಮಾಡಿದ್ದು, ಶಿವಕಾರ್ತಿಕೇಯನ್ ನಾಯಕನಾಗಿ ನಟಿಸಿದ್ದಾರೆ. ಸಿನಿಮಾದ ನಾಯಕಿ ಶ್ರೀಲೀಲಾ. ನಿನ್ನೆಯಷ್ಟೇ ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ನಿರ್ದೇಶಕಿ ಸುಧಾ ಕೊಂಗರ, ಶಿವಕಾರ್ತಿಕೇಯನ್ ಅವರನ್ನು ಗುರಿಯಾಗಿಸಿಕೊಂಡು ಕೆಲವು ಆರೋಪಗಳನ್ನು ಮಾಡಿದರು.
ಚಿತ್ರೀಕರಣದ ವೇಳೆ ನನ್ನ ಶಿಸ್ತಿನಿಂದಾಗಿ ನಟರಿಗೆ ಇಕ್ಕಟ್ಟಾಗಿತ್ತು. ಬೆಳಿಗ್ಗೆ 3 ಗಂಟೆಗೆ ಶಿವಕಾರ್ತಿಕೇಯನ್ ಮತ್ತು ಇತರ ನಟರು ಏಳಬೇಕಿತ್ತು. ಅದೆಲ್ಲ ಅವರಿಗೆ ಕಷ್ಟವಾಗಿತ್ತು. ಎಲ್ಲರೂ ಬೇಗನೆ ಎದ್ದು ರೆಡಿಯಾಗಿ ಸೆಟ್‌ಗೆ ಬರಲು, ತಡವಾಗಿ ಬಂದರೆ ಏನು ನಡೆಯುತ್ತಿದೆ ಎಂದು ಅವರಿಗೆ ಮನದಟ್ಟು ಮಾಡಿಸಿದ್ದೆ’ ಎಂದರು. ಮುಂದುವರೆದು, ‘ಶಿವಕಾರ್ತಿಕೇಯನ್ ಜೊತೆಗೆ ಆರಂಭದಲ್ಲಿ ನನಗೆ ಆಗಲಿಲ್ಲ. ಕೊನೆಗೆ ಖುದ್ದು ಮಾತನಾಡಲು ಕರೆದೆ, ಇಬ್ಬರೂ ಸುಮಾರು ನಾಲ್ಕೈದು ಗಂಟೆ ಮಾತನಾಡಿ ಎಲ್ಲ ಗೊಂದಲ ಪರಿಹಾರ ಮಾಡಿಕೊಂಡೆವು’ ಎಂದರು.
ಇದನ್ನೂ ಓದಿ:’ಪರಾಶಕ್ತಿ’ ಕಳಪೆ ಪ್ರದರ್ಶನ, ವಿಜಯ್ ಅಭಿಮಾನಿಗಳ ಮೇಲೆ ನಿರ್ದೇಶಕಿ ಆರೋಪ
‘ಶಿವಕಾರ್ತಿಯನ್ ಮಾನಿಟರ್ ಅನ್ನೇ ನೋಡಬೇಕು, ಅದು ಬಹಳ ತಪ್ಪು ಕೆಲಸ. ಒಮ್ಮೆ ಹಾಡೊಂದರ ಚಿತ್ರೀಕರಣ ಮಾಡುವಾಗ ಅವರು ಮಾನಿಟರ್ ಪಕ್ಕದಲ್ಲೇ ಇಬ್ಬರು ಮಾನಿಟರ್ ನೋಡಲಿಲ್ಲ ನಾನು ಆಗ ಕೇಳಿಯೇ ಬಿಟ್ಟೆ ಯಾಕೆ ನೋಡುವುದಿಲ್ಲ ಎಂದು. ಅದಕ್ಕೆ ಅವರು ನಿಮ್ಮ ಕಣ್ಣು ನೋಡಿದರೆ ಗೊತ್ತಾಗುತ್ತದೆ, ಶಾಟ್ ಓಕೆ ಆಗಿದೆಯೋ ಇಲ್ಲವೋ’ ಎಂದರು. ಹಾಗೆ ನಮ್ಮ ಬಾಂಡ್ ಬೆಳೆಯುತ್ತಾ ಹೋಯ್ತು’ ಎಂದರು.
ಬಳಿಕ ಮಾತಿಗೆ ಆಗಮಿಸಿದ ಶಿವಕಾರ್ತಿಕೇಯನ್, ‘ನನಗೆ ಸೆಟ್‌ಗೆ ಬೆಳಗ್ಗೆ ಬೇಗ ಹೋಗುವುದು ಕಷ್ಟವೇನೂ ಅಲ್ಲ. ನಟ ಆದಾಗಿನಿಂದಲೂ ನಾನು ಅದನ್ನೇ ಮಾಡಿಕೊಂಡಿದ್ದೇನೆ. ಬೆಳಿಗ್ಗೆ ಬೇಗ ಶೂಟ್ ಗೆ ಹೋಗುವುದು ಕಷ್ಟ ಅಲ್ಲ ನನಗೆ. ಇನ್ನು ಮಾನಿಟರ್ ಅನ್ನು ನಾನು ನೋಡುವುದಿಲ್ಲ. ನನಗೆ ಅದು ಇಷ್ಟ ಆಗುವುದಿಲ್ಲ. ನನಗೆ ಪಾತ್ರದ ಬಗ್ಗೆ ಅನುಮಾನ ಇದ್ದರೆ ಮೊದಲೇ ಕೇಳಿ ಬಿಡುತ್ತೇನೆ. ಶೂಟಿಂಗ್ ಗೆ ಹೋದ ಮೇಲೆ ನಿರ್ದೇಶಕರು ಹೇಳಿದಂತೆ ನಟಿಸುವುದು ಮಾತ್ರ ನನ್ನ ಕೆಲಸ. ಅವರು ಮಾನಿಟರ್ ನೋಡಿ ನನಗೆ ಹೇಳಿದರೆ ನಾನು ಇನ್ನೊಂದು ಶಾಟ್ ಕೊಡುತ್ತೇನೆ. ಇದು ನನಗೆ ಒಳ್ಳೆಯದೇ ಆಗಿದೆ. ನಾನು ಅದನ್ನು ಮುಂದೆಯೂ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ’ ಎಂದು ಅಲ್ಲಿಯೇ ಟಾಂಗ್ ಮಾಡಲಾಗಿದೆ.
ಸಿನಿಮಾ ಬಗ್ಗೆ ಮಾತನಾಡಿ, ‘ಇದು ನಿಜವಾದ ಕತೆ ಅಲ್ಲ. ಇದು ಫಿಕ್ಷನಲ್ ಕತೆ. ಕೆಲವು ಸಿನಿಮ್ಯಾಟಿಕ್ ಲಿಬರ್ಟಿ ತೆಗೆದುಕೊಂಡ ನಾವು ಸಿನಿಮಾ ಮಾಡಿದ್ದೇವೆ. ಎಲ್ಲವೂ ನಡೆದಂತೆ ನಾವು ತೋರಿಸಿಲ್ಲ’ ಎಂದರು. ಅಸಲಿಗೆ ಇದು ಸಹ ಸುಧಾ ಕೊಂಗರ ಅವರಿಗೆ ಟಾಂಗ್ ಆಗಿದೆ, ಏಕೆಂದರೆ ಸುಧಾ ಕೊಂಗರ ಅವರು ತಮ್ಮ ಸಿನಿಮಾವನ್ನು ‘ಇತಿಹಾಸ’ ಎಂದು ಹೇಳಿದ್ದಾರೆ. ಒಟ್ಟಾರೆ ‘ಪರಾಶಕ್ತಿ’ ಚಿತ್ರತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಖಾತ್ರಿ ಆಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ