ಕೆಲ ಪುಟಾಣಿಗಳೇ (ಚಿಕ್ಕ ಮಕ್ಕಳು) ಹಲ್ಲಿ ಜಿರಳೆಗಳನ್ನು ನೋಡಿದರೆ ಸಾಕು, ಅವರ ಕೈಯಲ್ಲಿ ಹಿಡಿಯುವ ಧೈರ್ಯ ಮಾಡ್ತಾರೆ. ಇನ್ನು ಕೆಲ ಮಕ್ಕಳು ಹಲ್ಲಿಯನ್ನು (ಹಲ್ಲಿ) ಕಂಡು ಭಯ ಪಡುವುದಿದೆ. ಆದರೆ ಈ ಪುಟಾಣಿಗೆ ಭಯ ಅನ್ನೋದು ಹೇಗಿರುತ್ತದೆ ಎಂದು ತಿಳಿದರೆ ಇಲ್ಲ ಎಂದೆನಿಸುತ್ತದೆ. ಹೌದು, ಈ ಪುಟ್ಟ ಬಾಲಕ ಹಲ್ಲಿಯನ್ನು ಕೈಯಲ್ಲಿ ಹಿಡಿದು ಮುತ್ತು ನೀಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ನೆಟ್ಟಿಗರು ಪುಟಾಣಿಯ ಧೈರ್ಯವನ್ನು ಮೆಚ್ಚಿದ್ದಾರೆ.
@mithirasmalaii ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟ್ಟ ಹುಡುಗನು ಬಾಗಿಲ ಸಂದಿಯಲ್ಲಿರುವ ಹಲ್ಲಿಯನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ಪುಟಾಣಿಯೂ ಹಲ್ಲಿಯನ್ನು ಮೆಲ್ಲನೆ ಕೈಯಲ್ಲಿ ಹಿಡಿದು ಮುತ್ತು ನೀಡುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ಬ್ರೋ ಲಕ್ಷಾಂತರ ಹುಡುಗಿಯರ ಭಯದಿಂದ ಆಟವಾಡುತ್ತಿದ್ದಾನೆ 💀🗿 pic.twitter.com/6vQizXEPfy
– ಎಸ್ (@ಮೀತಿರಸ್ಮಲೈ) ಜನವರಿ 10, 2026
ಇದನ್ನೂ ಓದಿ:ಪುಟ್ಟ ಹುಡುಗನ ಮಡಿಲಲ್ಲಿ ಹಾಯಾಗಿ ಮಲಗಿದ ನಾಯಿ ಮರಿ
ಈ ವಿಡಿಯೋ ಎಪ್ಪತ್ತಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ಏನು ಧೈರ್ಯ ಗುರು ಎಂದು ಹೇಳಿದರೆ, ಮತ್ತೂಬ್ಬರು, ಈ ಪುಟಾಣಿ ತಾಯಿ ಕೋಣೆಯ ಕುರ್ಚಿಯ ಮೇಲೆ ನಿಂತಿರಬಹುದು ಎಂದು ಹೇಳಿದರು. ಮತ್ತೊಬ್ಬರು, ಬುದ್ಧಿವಂತ ಹುಡುಗ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ