Headlines

ನಾವು ಹೇಳೊ ಕಲೆಕ್ಷನ್ ಎಲ್ಲ ಸುಳ್ಳು: ನಿರ್ಮಾಪಕ ಬಿಚ್ಚಿಟ್ಟ ಸತ್ಯ

ನಾವು ಹೇಳೊ ಕಲೆಕ್ಷನ್ ಎಲ್ಲ ಸುಳ್ಳು: ನಿರ್ಮಾಪಕ ಬಿಚ್ಚಿಟ್ಟ ಸತ್ಯ


ಮೊದಲೆಲ್ಲ ಸಿನಿಮಾಗಳು (ಸಿನಿಮಾ) ಬಿಡುಗಡೆ ಆದ ಮರು ದಿನ, ಕತೆ ಹೇಗಿದೆ? ಹಾಡುಗಳು ಹೇಗಿವೆ, ಕಾಮಿಡಿ ಚೆನ್ನಾಗಿದೆಯಾ? ಫೈಟ್ ಎಷ್ಟು ಇವೆ? ಐಟಂ ಹಾಡು ಇದೆಯಾ? ಕುಟುಂಬ ನೋಡಬಹುದಾ? ಹೀಗೆಲ್ಲ ಚರ್ಚೆ ಆಗುತ್ತಿತ್ತು. ಆದರೆ ಈಗ ಸಿನಿಮಾ ಬಿಡುಗಡೆ ಆದ ಮರು ದಿನ ಕಲೆಕ್ಷನ್ ವಿಚಾರ ಹೆಚ್ಚು ಚರ್ಚೆಯಾಗುತ್ತದೆ. ಕತೆ, ನಟನೆ, ಸಂಗೀತದ ಬಗ್ಗೆ ಮಾತನಾಡಬೇಕಾದ ಸಾಮಾನ್ಯ ಪ್ರೇಕ್ಷಕ ಸಹ ಸಿನಿಮಾಗಳ ಕಲೆಕ್ಷನ್ ಬಗ್ಗೆ ಚರ್ಚೆ ಶುರು ಮಾಡಿದ್ದಾನೆ. ಈ ಬಗ್ಗೆ ಕೆಲವು ಸಿನಿಮಾ ಮಂದಿಯೇ ಕಳವಳ ವ್ಯಕ್ತಪಡಿಸಿದ್ದೂ ಸಹ ಇದೆ. ಆದರೆ ಸಿನಿಮಾ ತಂಡಗಳು ಹೇಳುವ ಕಲೆಕ್ಷನ್ ವಿಚಾರ ಸುಳ್ಳಾಗುತ್ತೆ. ಈ ಬಗ್ಗೆ ನಿರ್ಮಾಪಕರೇ ಹೇಳಿದ್ದಾರೆ.

ಇತ್ತೀಚೆಗೆ ಸಿನಿಮಾ ತಂಡಗಳೇ ತಮ್ಮ ಮೊದಲ ದಿನದ ಕಲೆಕ್ಷನ್ ಅನ್ನು ಪ್ರಕಟಿಸಲು ಆರಂಭಿಸಿವೆ. ಸಿನಿಮಾ ಒಂದು ಮೊದಲ ದಿನ ಹೆಚ್ಚು ಗಳಿಕೆ ಮಾಡಿದೆಯೆಂದರೆ ಅದು ಸಾಧನೆಯ ವಿಷಯವಾಗಿ ಪ್ರಚಾರ ಮಾಡುತ್ತದೆ. ಆದರೆ ಹೀಗೆ ಪ್ರಕಟಿಸುವ ಅಂಕಿ-ಅಂಶಗಳು ಸುಳ್ಳು ಎಂದು ಇದೀಗ ಹಿರಿಯ ಮತ್ತು ಸಕ್ರಿಯ ಸಿನಿಮಾ ನಿರ್ಮಾಪಕರೇ ಹೇಳಿದ್ದಾರೆ. ಜೊತೆಗೆ, ಒಂದು 100 ಕೋಟಿ ಸಿನಿಮಾ ಮಾಡಿದರೆ ಅರ್ಧದಷ್ಟು ಸಹ ನಿರ್ಮಾಪಕನಿಗೆ ಬರುವುದಿಲ್ಲ ಎಂದು ಊಹಿಸಲಾಗಿದೆ.

ಅನಿಲ್ ಸುಂಕರ, ತೆಲುಗು ಚಿತ್ರರಂಗದ ಯಶಸ್ವಿ ಮತ್ತು ಸಕ್ರಿಯ ಸಿನಿಮಾ ನಿರ್ಮಾಪಕ. ಮಹೇಶ್ ಬಾಬುಗಾಗಿ ನಾಲ್ಕು ಸಿನಿಮಾಗಳು ಸೇರಿದಂತೆ, ನಂದಮೂರಿ ಬಾಲಕೃಷ್ಣ, ಮೆಗಾಸ್ಟಾರ್ ಚಿರಂಜೀವಿ ಇನ್ನೂ ಹಲವು ತೆಲುಗು ಸ್ಟಾರ್ ನಟರುಗಳ ಸಿನಿಮಾಗಳನ್ನು ನಿರ್ಮಿಸಿರುವ ಅನಿಲ್ ಸುಂಕರ ಅವರು, ಇದೀಗ ಸಿನಿಮಾಗಳ ಕಲೆಕ್ಷನ್ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ಎರಡೇ ದಿನಕ್ಕೆ 100 ಕೋಟಿ ಗಳಿಸಿದ ಚಿರಂಜೀವಿ ಸಿನಿಮಾ; ದೊಡ್ಡ ಕಂಬ್ಯಾಕ್

ಮಹೇಶ್ ಬಾಬು ನಟನೆಯ ಸೂಪರ್ ಹಿಟ್ ‘ದೂಕುಡು’ ಸಿನಿಮಾವನ್ನು ಅನಿಲ್ ನಿರ್ಮಾಣ ಮಾಡಿದ್ದರು. ಅದೇ ಸಿನಿಮಾದ ಉದಾಹರಣೆ ನೀಡಿದ ಅನಿಲ್ ಅವರು, ‘ನಾವು ‘ದೂಕುಡು’ ಸಿನಿಮಾದ ಸಕ್ಸಸ್ ಮೀಟ್ ಸಮಯದಲ್ಲಿ 100 ಕೋಟಿ ಕಲೆಕ್ಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಆದರೆ ಅಸಲಿಗೆ ಆ ಸಿನಿಮಾ ಅಷ್ಟು ಗಳಿಕೆ ಮಾಡಿರಲಿಲ್ಲ. ಆ ನೂರು ಕೋಟಿ ಮೊತ್ತದಲ್ಲಿ ನಿರ್ಮಾಪಕರಿಗೆ ಸೇರಿದ್ದು 40 ಕೋಟಿ ಅಷ್ಟೆ ಅದೂ ತೆರಿಗೆಗೆ ಮುಂಚೆ’ ಎಂದು ಅನಿಲ್.

‘ಹಲವು ನಿರ್ಮಾಪಕರ ಕಲೆಕ್ಷನ್ ಪೋಸ್ಟರ್‌ಗಳನ್ನು ಕೇವಲ ಪ್ರಚಾರಕ್ಕಾಗಿ ಬಳಸುತ್ತಾರೆ. ಅಸಲಿ ಕಲೆಕ್ಷನ್‌ಗೂ ಪೋಸ್ಟರ್‌ಗೂ ಬಹಳ ದೊಡ್ಡ ಅಂತರ ಇರುತ್ತದೆ. ಈ ರೀತಿ ಕಲೆಕ್ಷನ್ ಪೋಸ್ಟರ್ ಬಿಡುಗಡೆ ಮಾಡುವುದು ಸಿನಿಮಾಗಳಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ ಆದರೆ ಸಿನಿಮಾವನ್ನು ನಿಲ್ಲಿಸುವುದರಲ್ಲಿ ಯಾವುದೇ ಪಾತ್ರವಹಿಸುವುದಿಲ್ಲ. ಬದಲಾಗಿ ಕೆಲವೊಮ್ಮೆ ಸಿನಿಮಾ ನಿರ್ಮಾಪಕರಿಗೆ ಸಮಸ್ಯೆ ಕೂಡ ಆಗುತ್ತದೆ. ಇಂಥಹ ಪೋಸ್ಟರ್‌ಗಳಿಂದ ನಿರ್ಮಾಪಕರಿಗೆ ಸಮಸ್ಯೆ ಆದ ಉದಾಹರಣೆ ಇದೆ’ ಎಂದಿರುವ ಅನಿಲ್, ‘ಇದೇ ಕಾರಣಕ್ಕೆ ನನ್ನ ಯಾವುದೇ ಸಿನಿಮಾಕ್ಕೂ ಇಂಥಹ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುವುದನ್ನೇ ನಿಲ್ಲಿಸಿದ್ದೇನೆ’ ಎಂದು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *