ಜಪ್ತಿ ಮಾಡಿದ ಡ್ರಗ್ಸ್ ಜೊತೆ ಬಂಧಿತ ಆರೋಪಿಗಳು
ಬೆಂಗಳೂರು/ಆನೇಕಲ್, ಜನವರಿ 14: ಮಂಗಳೂರು ಸಿಸಿಬಿ ಡ್ರಗ್ ಕೇಸ್ ನಲ್ಲಿ ಮಹಿಳೆಯನ್ನು ಬಂಧಿಸಿ ಆಕೆ ಬಳಿ 4 ಕೋಟಿ ರೂ. ಮೌಲ್ಯದ ಎಂಡಿಎಂಎ ಜಪ್ತಿ ಮಾಡಿರುವ ಘಟನೆ ಬೆನ್ನಲ್ಲೇ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಪೊಲೀಸರು ಕೂಡ ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡ್ರಗ್ ಡಿಲೀನಲ್ಲಿ ತೊಡಗಿದ್ದ ಓರ್ವ ವಿದೇಶಿ ಪ್ರಜೆ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ 1 ಕೋಟಿ ಮೌಲ್ಯದ 101 ಗ್ರಾಂ ಕೊಕೇನ್ ಮತ್ತು 481 ಗ್ರಾಂ ಹೈಡ್ರೋ ಗಾಂಜಾ ಸೀಜ್ ಮಾಡಲಾಗಿದೆ. ಬೇಗೂರು ವಾಸವಿದ್ದ ಆಕಾಶ್ ಮತ್ತು ಉಚ್ಚೆ ನಡುರಿ ಬಂಧಿತರಾಗಿದ್ದರೆ, ಪರಿಚಯಸ್ಥರು, ವಿದ್ಯಾರ್ಥಿಗಳು ಮತ್ತು ಐಟಿಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಇವರು ಡ್ರಗ್ ಮಾರಾಟ ಮಾಡುವುದರಿಂದ ಗೊತ್ತಾಗುತ್ತದೆ.
ಆನೆ ದಂತದಿಂದ ಮಾಡಿದ ವಿಗ್ರಹ ಮಾರಾಟ ಜಾಲ ಪತ್ತೆ
ಜಪ್ತಿ ಮಾಡಲಾದ ವಿಗ್ರಹಗಳ ಜೊತೆ ಬಂಧಿತ ಆರೋಪಿಗಳು
ಆನೆ ದಂತದಿಂದ ವಿಗ್ರಹ ಮಾರಾಟ ಜಾಲ ಪತ್ತೆ ಮಾಡಿರುವ ಜಿಗಣಿ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಶಬೀರ್ ಅಹಮದ್(50), ನರೇಂದ್ರ ಶರ್ಮಾ(45) ಆರೋಪಿಗಳಾಗಿದ್ದು, ರಾಧೆ ಮತ್ತು ಕೃಷ್ಣಗ್ರಹವನ್ನು ಇವರು ಮಾರಾಟ ಮಾಡುತ್ತಿದ್ದರು. ಮೊಹಮ್ಮದ್ ಶಬೀರ್ ಅಹ್ಮದ್ ಬೆಂಗಳೂರಿನ ಬನಶಂಕರಿ ನಿವಾಸಿಯಾಗಿದ್ದರೆ, ನರೇಂದ್ರ ಶರ್ಮಾ ಸುಧಾಮನಗರದವನು ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ಖತರ್ನಾಕ್ ಡ್ರಗ್ ಜಾಲ ಭೇದಿಸಿದ ಮಂಗಳೂರು ಸಿಸಿಬಿ; ಮಹಿಳೆ ಅರೆಸ್ಟ್, 4 ಕೋಟಿ ಮೌಲ್ಯದ MDMA ಸೀಜ್
20 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಿಗ್ರಹಗಳನ್ನು ಕೊಪ್ಪ ಗೇಟ್ ಸಮೀಪ ಮಾರಾಟ ಮಾಡಲು ಆರೋಪಿಗಳು ಬಂದಿರುವ ಖಚಿತ ಮಾಹಿತಿ ಮೇರೆ ಜಿಗಣಿ ಪೊಲೀಸರು ದಾಳಿ ನಡೆಸಿದ್ದಾರೆ. ವಿಗ್ರಹ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ, ಬೈಕ್ ಕೂಡ ಬಂಧಿಸಿದ್ದಾರೆ. ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿಯನ್ನ ಪಡೆಯದೆ ಇವರು ಆನೆ ದಂತದ ವಿಗ್ರಹ ಇಟ್ಟುಕೊಂಡಿದ್ದಲ್ಲದೆ, ಕಾನೂನು ಬಾಹಿರ ಮಾರಾಟಕ್ಕೂ ಯತ್ನಿಸಿದ್ದರು. ಈ ಜಪ್ತಿ ಮಾಡಿರುವ ಆನೆದಂತದ ವಿಗ್ರಹಗಳನ್ನು ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನಕ್ಕೆ ರವಾನಿಸಲಾಗಿದೆ, ಇವು ಎಷ್ಟು ವರ್ಷದ ಹಳೆಯದಾದ ಆನೆ ದಂತದಿಂದ ಮಾಡಿರುವ ವಿಗ್ರಹ ಎಂಬ ಬಗ್ಗೆ ತಜ್ಞರು ವರದಿ ನೀಡಲಿದ್ದಾರೆ. ಘಟನೆ ಬಗ್ಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 6:23 pm, ಬುಧವಾರ, 14 ಜನವರಿ 26