ಬೆಂಗಳೂರು, (ಜನವರಿ 14): ಬೆಂಗಳೂರಿಗೆ ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂಬ ಬಿರುದುಗಳಿವೆ. ಇದನ್ನು ಕಟ್ಟಿ ಬೆಳೆಸಿದ್ದು ಕೆಂಪೇಗೌಡರು. ಹೌದು..ಜನವರಿ ಸಂಕ್ರಾಂತಿಯಂದೇ ಕೆಂಪೇಗೌಡರು ಬೆಂಗಳೂರು ಕಟ್ಟಲು ಶುರುಮಾಡಿದ ಪುಣ್ಯ ದಿನ. ಅವಿನ್ಯೂ ರಸ್ತೆಯಲ್ಲೇ ಭೂಮಿ ಪೂಜೆ ಮಾಡಿದರು. ಬಳಿಕ ಬೆಂಗಳೂರಿನ ಬೆಳವಣಿಗೆಗೆ ಅವರು ನೀಡಿದ ಕೊಡುಗೆಗಳು ಬಹಳ ಮಹತ್ವದ್ದಾಗಿವೆ. ಅಂದಿನ ವಿಜಯನಗರದ ವಾಸ್ತುಶಿಲ್ಪ ಶೈಲಿಯನ್ನು ಅನುಸರಿಸಿ, ಅಚ್ಚುಕಟ್ಟಾದ ಯೋಜನೆಯು ಬೆಂಗಳೂರನ್ನು ನಿರ್ಮಿಸಿದರು. ಮುಖ್ಯ ರಸ್ತೆಗಳು, ವ್ಯಾಪಾರಿ ಕೇಂದ್ರಗಳು, ದೇವಾಲಯಗಳು ಮತ್ತು ಕೆರೆಗಳನ್ನು ನಿರ್ಮಿಸಿ, ನಗರಕ್ಕೆ ಒಂದು ವ್ಯವಸ್ಥಿತ ಸ್ವರೂಪವನ್ನು ನೀಡಲಾಯಿತು. ಇನ್ನು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ್ದು ಹೇಗೆ? ಸಂಕ್ರಾಂತಿಗೂ ಕೆಂಪೇಗೌಡ್ರಿಗೂ ಇರೋ ನಂಟನ್ನು ಧರ್ಮೇಂದ್ರ ಕುಮಾರ್ ಬಿಚ್ಚಿಟ್ಟಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ