ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ
ಒಗಟಿನ ಪ್ರಶ್ನೆಗಳನ್ನು ಬಿಡಿಸುವುದು ಖುಷಿಕೊಟ್ಟರೂ ಇದು ನೂರಕ್ಕೆ ನೂರರಷ್ಟು ನಿಮ್ಮ ಮೆದುಳಿಗೆ ಕೆಲಸ ನೀಡುತ್ತವೆ. ಕೆಲವೊಮ್ಮೆ ಎಷ್ಟು ತಾಳ್ಮೆಯಿಂದ ಗಮನ ಹರಿಸಿದ್ರೂ ಉತ್ತರ ಸಾಧ್ಯವಾಗಲಿಲ್ಲ. ಇದೀಗ ವೈರಲ್ ಆಗಿರುವ ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಭ್ರಮೆ) ಚಿತ್ರದಲ್ಲಿ ಅಡಗಿರುವ ಜಿಂಕೆಯನ್ನು ಕಂಡು ಹಿಡಿಯುವ ಸವಾಲು ನಿಮ್ಮ ಮುಂದಿದೆ. ಆದರೆ ನೀವು ಈ ಒಗಟನ್ನು 5 ಸೆಕೆಂಡುಗಳಲ್ಲಿ ಬಿಡಿಸಲು ಸಾಧ್ಯವೇ ಎಂದು ನೋಡಿ.
ಈ ಚಿತ್ರವನ್ನು ನೋಡಿದಾಗ ಏನು ಕಾಣಿಸಿತು?

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸುಲಭವಾಗಿ ಕಂಡರೂ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರವನ್ನು ನೋಡಿದಾಗ ನಿಮ್ಮ ಕಣ್ಣಿಗೆ ಕಾಣುವುದೇ ಹಿಮಭರಿತ ಪ್ರದೇಶ. ಈ ಪ್ರದೇಶದ ಮೂವರು ಮಕ್ಕಳು ಮರಗಳ ನಡುವೆ ಆಟವಾಡುತ್ತಿದ್ದಾರೆ. ಇಲ್ಲಿ ಜಿಂಕೆಯೊಂದು ಅಡಗಿ ಕುಳಿತಿದೆ. ನೀವು ಎಚ್ಚರಿಕೆಯಿಂದ ನೋಡಿದ್ರೆ ಮಾತ್ರ ಈ ಜಿಂಕೆ ನಿಮ್ಮ ಕಣ್ಣಿಗೆ ಕಾಣಿಸುತ್ತದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಈ ಚಿತ್ರ ನೋಡಿ ಒಗಟು ಬಿಡಿಸಲು ಪ್ರಯತ್ನಿಸಿ. ನೀವು ಈ ಸವಾಲನ್ನು ಸ್ವೀಕರಿಸಿದ್ದೀರಿ ಎಂದು ನಾವು ಭಾವಿಸುತ್ತೇವೆ.
ಇದನ್ನೂ ಓದಿ: ಕಾಡಿನಲ್ಲಿ ಮರೆ ಮಾಡಲ್ಪಟ್ಟಿದೆ ಈ ಛಾಯಾಗ್ರಹಣ ಹುಡುಕಬಲ್ಲಿರಾ
ಜಿಂಕೆ ನಿಮ್ಮ ಕಣ್ಣಿಗೆ ಕಾಣಿಸಿತೇ?
ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಅಥವಾ ಮರೆ ಮಾಡಲಾದ ಗುಪ್ತ ವಸ್ತುಗಳನ್ನು ಹುಡುಕುವುದು ಹೇಳಿದ್ದು ಸುಲಭ. ಹಿಮಭರಿತ ಪ್ರದೇಶದಲ್ಲಿ ಅಡಗಿ ಕುಳಿತಿರುವ ಜಿಂಕೆಯನ್ನು ಕಂಡು ಹಿಡಿಯುವುದು ಕಷ್ಟ ಎಂದು ನಿಮಗೆ ಅನಿಸಿರಬಹುದು. ನಿಮ್ಮ ಕಣ್ಣಿಗೆ ಜಿಂಕೆ ಕಾಣಿಸುವುದಿಲ್ಲ ಎಂದಾದರೆ ತಲೆ ಕೆಡಿಸಿಕೊಳ್ಳಬೇಡಿ. 5 ಸೆಕೆಂಡುಗಳಲ್ಲಿ ಉತ್ತರವು ಎಲ್ಲರಿಗೂ ಸಾಧ್ಯವಿಲ್ಲ. ಈ ಕೆಳಗಿನ ಚಿತ್ರದಲ್ಲಿ ಜಿಂಕೆ ಎಲ್ಲಿದೆ ಎಂದು ನಾವು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ