Weekly Love Horoscope: ಈ 4 ರಾಶಿಯವರ ಪ್ರೇಮ ಜೀವನದಲ್ಲಿ ಬಹುದೊಡ್ಡ ಬದಲಾವಣೆ

Weekly Love Horoscope: ಈ 4 ರಾಶಿಯವರ ಪ್ರೇಮ ಜೀವನದಲ್ಲಿ ಬಹುದೊಡ್ಡ ಬದಲಾವಣೆ


ಜನವರಿ 18 ರಿಂದ ಜನವರಿ 24 ರ ವರೆಗೆ ಮೂರನೇ ವಾರದಲ್ಲಿ ಶುಕ್ರನು ಶನಿಯ ರಾಶಿಯಲ್ಲಿ ಬುಧ, ರವಿ, ಕುಜ, ಬುಧ ಈ ನಾಲ್ಕು ಗ್ರಹರ ಜೊತೆ ಇರುತ್ತದೆ. ಪ್ರೇಮ ಕೆಲವರಿಗೆ ಸವಾಲು, ಸಾಹಸ, ಸಂತೋಷ, ಸಿಹಿ, ಸಂಕಟ ಎಲ್ಲವೂ ಆಗಲಿದೆ. ಯಾವ ಸನ್ನಿವೇಶವನ್ನೂ ಅತಿಯಾದ ಹಂತಕ್ಕೆ ಕೊಂಡೊಯ್ಯದೇ ಮನೋ ಬುದ್ಧಿಗಳನ್ನು ನಿಮ್ಮ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಿ.

ಮೇಷ:

ಮೂರನೇ ವಾರದಲ್ಲಿ ಹೃದಯ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ. ಪ್ರೇಮದಲ್ಲಿ ವೇಗ ಜಾಸ್ತಿ. ತಾಳ್ಮೆ ಕಳೆದುಕೊಂಡರೆ ಮಾತುಗಳು ನೋವು ನೀಡಬಹುದು. ಮೃದುತನವೇ ಪರಿಹಾರವಾಗುವುದು ಈ ವಾರ.

ವೃಷಭ:

ಜನವರಿಯ ಈ ವಾರ ಪ್ರೇಮಕ್ಕೆ ಸ್ಥಿರತೆಯ ಬಯಕೆ ಹೆಚ್ಚುತ್ತದೆ. ಸಂಗಾತಿಯಿಂದ ಭರವಸೆ ನಿರೀಕ್ಷೆ. ಸಣ್ಣ ಅಸಮಾಧಾನಗಳು ಮಾತುಕತೆಯಿಂದ ನಿವಾರಣೆಯಾಗುತ್ತವೆ. ಭಾವನಾತ್ಮಕ ಬಂಧನ ಗಟ್ಟಿಯಾಗಿದೆ.

ಮಿಥುನ:

ವರ್ತನೆಯಿಂದ ಈ ವಾರ ಪ್ರೇಮದಲ್ಲಿ ಚಂಚಲತೆ. ಮಾತುಗಳು ಹತ್ತಿರ ತರುತ್ತವೆ. ಆದರೆ ನಿರ್ಧಾರ ಬದಲಾವಣೆ ಗೊಂದಲ ಸೃಷ್ಟಿಸಬಹುದು. ಸ್ಪಷ್ಟತೆ ಇದ್ದರೆ ಹೊಸ ಸಂಬಂಧ ಶುಭಾರಂಭವಾಗುತ್ತದೆ.

ಕರ್ಕಾಟಕ:

ಮನಸ್ಸು ಪ್ರೇಮದ ಆಳಕ್ಕೆ ಇಳಿಯಲು ಪ್ರಯತ್ನಿಸುವುದು. ಈ ವಾರ ಭದ್ರತೆಯ ಭಾವನೆ ಹೆಚ್ಚುತ್ತದೆ. ಅನುಮಾನ ಕಡಿಮೆ ಮಾಡಿದರೆ ಸಂಬಂಧದಲ್ಲಿ ನಂಬಿಕೆ ಮತ್ತು ನೆಮ್ಮದಿ ಸಿಗುತ್ತದೆ.

ಸಿಂಹ:

ನಿಮಗೆ ಈ ವಾರ ಪ್ರೇಮದಲ್ಲಿ ಗಮನ, ಗೌರವ ಸಿಗುತ್ತದೆ. ಆಕರ್ಷಣೆ ನಿಮ್ಮತ್ತ. ಆದರೆ ಅತಿಯಾದ ಸ್ವಾಭಿಮಾನದ ಸಂಘರ್ಷ ತರಬಹುದು. ಪ್ರೀತಿಯನ್ನು ಸೂಚನೆಯಾಗಿ ಅಲ್ಲ, ಭಾವನೆಯಾಗಿ ಬಳಸಿ.

ಕನ್ಯಾ:

ಈ ವಾರ ನಿಮ್ಮ ಹೃದಯಕ್ಕಿಂತ ಬುದ್ಧಿ ಹೆಚ್ಚು ಕೆಲಸ ಮಾಡುತ್ತದೆ. ಪ್ರೇಮದಲ್ಲಿ ಲೆಕ್ಕಾಚಾರ. ಭಾವನೆಗಳನ್ನು ಮುಚ್ಚಿಡದೆ ಹೇಳಿದರೆ ಸಂಬಂಧದಲ್ಲಿ ಸಮಾಧಾನ ತರುವ ಬದಲಾವಣೆ ಕಾಣಿಸುತ್ತದೆ.

ತುಲಾ:

ಎಷ್ಟು ಪ್ರಯತ್ನಿಸಿದರೂ ಪ್ರೇಮ ಜೀವನದಲ್ಲಿ ಅಸಮತೋಲನ ಎಂದು ಅನಿಸುತ್ತದೆ. ಅರಿರೇಕ ಮಾಡದೇ ಇದ್ದರೆ ಅಸಮಾಧಾನಗಳು ನಿಧಾನವಾಗಿ ಕರಗುತ್ತವೆ. ಸಂಗಾತಿಯೊಂದಿಗೆ ಸಮಯ ಕಳೆಯುವುದು ಸಂಬಂಧಕ್ಕೆ ಹೊಸ ಉಸಿರು.

ವೃಶ್ಚಿಕ:

ಅತಿಯಾಗಿ ಇಳಿದರೆ ತೀವ್ರತೆ, ಆಕರ್ಷಣೆ ಪ್ರವಾದ ಅನುಭವ. ರಹಸ್ಯ ಭಾವನೆಗಳು ಮನಸ್ಸಿನಲ್ಲಿ ಚಲನೆಯನ್ನು ಉಂಟುಮಾಡುತ್ತವೆ. ಕಪಿಮುಷ್ಟಿಯಂತಿರುವ ಹಿಡಿತ ತಪ್ಪಿಸಿದರೆ ಪ್ರೀತಿ ಸುಂದರವಾಗುತ್ತದೆ.

ಧನು:

ಸಂಗಾತಿಯ ನಡವಳಿಮೆಯಿಂದ ಪ್ರೇಮಕ್ಕಿಂತ ಸ್ವಾತಂತ್ರ್ಯವನ್ನು ಮುಖ್ಯವೆನಿಸುತ್ತದೆ. ಈ ವಾರ ಸಂಗಾತಿಗೆ ನಿಮಗೆ ಸಮಯ ಕಡಿಮೆಯಾಗಬಹುದು. ಮನದಾಳದ ಭಾವನೆ ಹಂಚಿಕೊಂಡರೆ ದೂರದ ಭಯ ನಿವಾರಣೆಯಾಗುತ್ತದೆ ಈ ವಾರ.

ಮಕರ:

ಕೆಲವು ಮಾತುಗಳಿಂದ ಪ್ರೇಮ ಗಂಭೀರ ದಿಕ್ಕಿಗೆ ಸಾಗುತ್ತದೆ. ಭವಿಷ್ಯದ ಚಿಂತನೆಗಳು ಹೆಚ್ಚಾಗುತ್ತವೆ. ಆದರೆ ಕೆಲಸದ ಒತ್ತಡವನ್ನು ಕಠಿಣಗೊಳಿಸಬಹುದು. ಪೂರ್ವನಿರ್ಧಾರದಲ್ಲಿ ವ್ಯತ್ಯಾಸ, ಸಮತೋಲನ ಕಾಪಾಡುವಲ್ಲಿ ಅಲ್ಪ ವಿಫಲವಾಗಿದೆ.

ಕುಂಭ:

ಅನ್ಯರ ಮೇಲೆ ಅನಿರೀಕ್ಷಿತ ಭಾವನೆಗಳು ಮೂಡುತ್ತವೆ. ಈ ವಾರ ಸಹವಾಸ ಅತಿಯಾಗಿ ಸ್ನೇಹವೇ ಪ್ರೇಮದ ರೂಪ ಪಡೆಯಬಹುದು. ಬಂಧನಕ್ಕಿಂತ ಸಹಭಾಗಿತ್ವವನ್ನು ಬಯಸುತ್ತದೆ. ಸ್ಪಷ್ಟತೆ ಇದ್ದರೆ ಸಂಬಂಧ ಸುಗಮವಾಗುತ್ತದೆ.

ಮೀನ:

ಹಠದಿಂದ ಪಡೆಯಲಾಗದ್ದನ್ನು ಪ್ರೀತಿಯಲ್ಲಿ ತ್ಯಾಗ, ಮೃದುತ್ವದಿಂದ ಸಾಧ್ಯ. ಹಳೆಯ ನೋವುಗಳು ಕರಗುತ್ತವೆ. ಸಂಗಾತಿಯ ಆತ್ಮೀಯ ಕ್ಷಣಗಳು ಮನಸ್ಸಿಗೆ ಆಳವಾದ ತೃಪ್ತಿ ನೀಡುತ್ತವೆ. ಸಮಯವಿದೆ ಎಂದು ಕಿರಿಕಿರಿ ಮಾಡಲು ಹೋಗುವಿರಿ.

– ಲೋಹಿತ ಹೆಬ್ಬಾರ್ – 8762924271 (What’s app only)



Source link

Leave a Reply

Your email address will not be published. Required fields are marked *