ಸಿನಿಮಾ ಮಾಡಿದ ಕೇಂದ್ರ ಸಚಿವನಿಗೆ ಸಂಕಷ್ಟ; ಸೆನ್ಸಾರ್ ಮಂಡಳಿಯಲ್ಲಿ ಅರ್ಧಕ್ಕೆ ನಿಂತ ಚಿತ್ರ

ಸಿನಿಮಾ ಮಾಡಿದ ಕೇಂದ್ರ ಸಚಿವನಿಗೆ ಸಂಕಷ್ಟ; ಸೆನ್ಸಾರ್ ಮಂಡಳಿಯಲ್ಲಿ ಅರ್ಧಕ್ಕೆ ನಿಂತ ಚಿತ್ರ


ಮಲಯಾಳಂ ನಟ, ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಈಗ ಸುದ್ದಿಯಲ್ಲಿ ಇದ್ದಾರೆ. ಅವರ ನಟನೆಯ ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ (Sensor Board) ತಡೆ ಒಡ್ಡಿದೆ. ಸಿನಿಮಾದ ಟೈಟಲ್ ಬದಲಿಸುವಂತೆ ಸೂಚಿಸುತ್ತಿದೆ. ಆದರೆ, ಇದಕ್ಕೆ ಅವರು ಸಿದ್ಧರಿಲ್ಲ. ಜೂನ್ 27ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಸಿನಿಮಾ ಇನ್ನೂ ಹಾಗೆಯೇ ಇದೆ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಹಾಯಕ ಸಚಿವ ಸುರೇಶ್ ಗೋಪಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅನುಪಮಾ ಪರಮೇಶ್ವರನ್ ಅವರು ಜಾನಕಿ ಹೆಸರಿನ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಟೈಟಲ್ ಬದಲಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. ಜಾನಕಿ ಎಂದರೆ ಹಿಂದೂ ದೇವತೆ ಜಾನಕಿ ಎಂದರ್ಥ. ಹೀಗಾಗಿ, ಟೈಟಲ್ ಬದಲಿಸಲು ಸೂಚಿಸಲಾಗಿದೆ.

ಕೇರಳ ಕಾನೂನು ವ್ಯವಸ್ಥೆಯ ಬಗ್ಗೆ ಸಿನಿಮಾ ಇದೆ. ಜಾನಕಿ (ಅನುಪಮಾ) ಬಾಳಲ್ಲಿ ಒಂದು ಆಘಾತಕಾರಿ ಘಟನೆ ನಡೆಯುತ್ತದೆ. ಈ ವೇಳೆ ಆಕೆ ನ್ಯಾಯಕ್ಕಾಗಿ ಹೋರಾಡುತ್ತಾಳೆ. ಈ ಸಿನಿಮಾದಲ್ಲಿ ಅನುಪಮಾ ಸಂತ್ರಸ್ತೆ ಆದರೆ, ಸುರೇಶ್ ಗೋಪಿ ಅವರದ್ದು ವಕೀಲನ ಪಾತ್ರ.  ಸದ್ಯ ಈಗ ಶೀರ್ಷಿಕೆ ಬದಲಾವಣೆ ಕಾರಣಕ್ಕೆ ಸಿನಿಮಾ ಸುದ್ದಿಯಲ್ಲಿದೆ.

ಇದನ್ನೂ ಓದಿ

ಕೇರಳ ಸಿನಿಮಾ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಕ್ಲಿನ್ ಚಿಟ್ ಕೊಟ್ಟಿತ್ತು. ಆದರೆ, ಮುಂಬೈನಲ್ಲಿರೋ ಸೆನ್ಸಾರ್ ಮಂಡಳಿಯವರು ಈ ಟೈಟಲ್​ಗೆ ತಕರಾರರು ಎತ್ತಿದ್ದಾರೆ. ಒಂದೊಮ್ಮೆ ಸಿನಿಮಾದ ಟೈಟಲ್ ಬದಲಿಸಿದರೆ ಸಿನಿಮಾದ ಸಂಭಾಷಣೆಯಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಬರುತ್ತದೆ.  ಹೀಗಾಗಿ, ತಂಡದವರು ಇದಕ್ಕೆ ಸಿದ್ಧರಿಲ್ಲ.

ಇದನ್ನೂ ಓದಿ: ಮೋದಿ ಮಾತು ಸೇರಿಸಿ: ‘ಸಿತಾರೆ ಜಮೀನ್ ಪರ್’ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ಸೂಚನೆ

ಧರ್ಮದ ವಿಚಾರದ ಬಗ್ಗೆ, ಧರ್ಮಕ್ಕೆ ಸಂಬಂಧಿಸಿದ ಶಬ್ದ ಬಳಕೆ ಮಾಡುವಾಗ ಸಾಕಷ್ಟು ಎಚ್ಚರಿಕೆ ಬೇಕು. ಇಲ್ಲವಾದಲ್ಲಿ ವಿವಾದ ಆಗುವ ಎಲ್ಲಾ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.



Source link

Leave a Reply

Your email address will not be published. Required fields are marked *