ದರ್ಶನ್​ ಇಲ್ಲದ ಸಂಕ್ರಾಂತಿ: ಕುದುರೆ ಜೊತೆ ವಿಜಯಲಕ್ಷ್ಮಿ ಕುತೂಹಲದ ಪೋಸ್ಟ್​- ಅಭಿಮಾನಿಗಳು ಭಾವುಕ

ದರ್ಶನ್​ ಇಲ್ಲದ ಸಂಕ್ರಾಂತಿ: ಕುದುರೆ ಜೊತೆ ವಿಜಯಲಕ್ಷ್ಮಿ ಕುತೂಹಲದ ಪೋಸ್ಟ್​- ಅಭಿಮಾನಿಗಳು ಭಾವುಕ

ದರ್ಶನ್​ ಇಲ್ಲದ ಸಂಕ್ರಾಂತಿ: ಕುದುರೆ ಜೊತೆ ವಿಜಯಲಕ್ಷ್ಮಿ ಕುತೂಹಲದ ಪೋಸ್ಟ್​- ಅಭಿಮಾನಿಗಳು ಭಾವುಕ

ನಟ ದರ್ಶನ್ ಜೈಲಿನಲ್ಲಿರುವ ಕಾರಣ, ಅವರ ಪತ್ನಿ ವಿಜಯಲಕ್ಷ್ಮಿ ಪತಿಯ ಅನುಪಸ್ಥಿತಿಯಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಫಾರಂಹೌಸ್​​ನ ಕುದುರೆಯೊಂದಿಗೆ ಸಮಯ ಕಳೆದ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಕಳೆದ ವರ್ಷದ ದರ್ಶನ್ ಜೊತೆಗಿನ ಸಂಭ್ರಮದ ಆಚರಣೆಯನ್ನು ನೆನಪಿಸಿದೆ.

ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್​ ಅವರು ಜೈಲಿನಲ್ಲಿ ಇದ್ದಾರೆ. ಹೊರಗಡೆ ಇದ್ದಾಗ ಅವರು ಸಂಕ್ರಾಂತಿ ಹಬ್ಬವನ್ನೂ ಅದ್ದೂರಿಯಾಗಿ ಆಚರಿಸುತ್ತಿದ್ದರು. ಅವರ ಆಚರಣೆಗಳಲ್ಲಿ ಒಂದಾಗಿದ್ದುದು ತಮ್ಮ ಫಾರಂಹೌಸ್​​ನಲ್ಲಿರುವ ಎಲ್ಲ ಪ್ರಾಣಿಗಳಿಗೂ ಸ್ನಾನ ಮಾಡಿಸಿ, ಹೂವುಗಳಿಂದ ಸಿಂಗರಿಸುತ್ತಿದ್ದುದು. ಆ ಬಳಿಕ ಕಿಚ್ಚು ಹಾಯಿಸುವ ಪ್ರಕ್ರಿಯೆಯೂ ನಡೆಯುತ್ತಿತ್ತು.

ಆದರೆ ಈ ಬಾರಿ ಅವರ ಪತ್ನಿ ವಿಜಯಲಕ್ಷ್ಮಿ ಅವರು, ಪತಿಯ ಅನುಪಸ್ಥಿತಿಯಲ್ಲಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಇದೀಗ ಅವರು ಕುದುರೆಯೊಂದನ್ನು ಮುದ್ದಿಸುವ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಬಿಳಿಯ ಕುದುರೆ ಕೂಡ ವಿಜಯಲಕ್ಷ್ಮಿ ಅವರಿಗೆ ಅಷ್ಟೇ ಪ್ರೀತಿಯನ್ನು ಕೊಡುವುದನ್ನು ನೋಡಬಹುದಾಗಿದೆ.

ಈ ವಿಡಿಯೋ ಶೇರ್​ ಮಾಡಿರುವ ವಿಜಯಲಕ್ಷ್ಮಿ (Vijayalakshmi Darshan) ಅವರು, ಕುತೂಹಲದ ಶೀರ್ಷಿಕೆ ಕೊಟ್ಟಿದ್ದಾರೆ. ಪ್ರಾಣಿಯ ಕಣ್ಣು ನೀವು ಯಾರೆಂಬುದರ ನಿಜವಾದ ಆವೃತ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದು ದರ್ಶನ್​ ಅವರ ಪ್ರೀತಿಯ ಕುದುರೆ ಎನ್ನಲಾಗಿದೆ.

ಆದರೆ, ಕಳೆದ ವರ್ಷ ಇದೇ ಸಂದರ್ಭದಲ್ಲಿ ಇಡೀ ಕುಟುಂಬ ಸಂಕ್ರಾಂತಿ ಆಚರಿಸುತ್ತಿದ್ದುದನ್ನು ದರ್ಶನ್​ ಅವರ ಅಭಿಮಾನಿಗಳು ಶೇರ್​ ಮಾಡಿಕೊಂಡಿದ್ದಾರೆ. ದರ್ಶನ್ ಅವರು ಹಳದಿ ಬಣ್ಣದ ಕುರ್ತಾವನ್ನು ಧರಿಸಿಕೊಂಡು ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೊತೆ ಸಂಭ್ರಮದಿಂದ ಹಬ್ಬವನ್ನು ಆಚರಿಸಿರುವುದನ್ನು ಇದರಲ್ಲಿ ನೋಡಬಹುದಾಗಿದೆ.

ಆದರೆ, ಈ ವರ್ಷ ಎಲ್ಲವೂ ಅಯೋಮಯ. ಇದಾಗಲೇ ಕೆಲವು ಹಬ್ಬಗಳನ್ನು ವಿಜಯಲಕ್ಷ್ಮಿ ಅವರು ಪತಿಯ ಅನುಪಸ್ಥಿತಿಯಲ್ಲಿ ಆಚರಿಸಿಕೊಂಡು, ಅದರ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

Source link

Leave a Reply

Your email address will not be published. Required fields are marked *