ಅಸ್ಸಾಂ ಮೂಲದ ಕಾರ್ಮಿಕನ ಸಾವಿಗೆ ಸಿನಿಮೀಯ ಟ್ವಿಸ್ಟ್​​: ಮಗನಿಂದಲೇ ತಂದೆಯ ಹತ್ಯೆ!

ಅಸ್ಸಾಂ ಮೂಲದ ಕಾರ್ಮಿಕನ ಸಾವಿಗೆ ಸಿನಿಮೀಯ ಟ್ವಿಸ್ಟ್​​: ಮಗನಿಂದಲೇ ತಂದೆಯ ಹತ್ಯೆ!


ಮಡಿಕೇರಿ, ಜನವರಿ 15: ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಹೊಸೇರಿ ಗ್ರಾಮದಲ್ಲಿ ಭಾನುವಾರ ಅಸಹಜ ಸಾವಿನ ಪ್ರಕರಣವೊಂದು ನಡೆದಿದೆ. ಅಸ್ಸಾಂ ಮೂಲದ ಕಾರ್ಮಿಕ ಬೂನೋ ಎಂಬಾತ ಕಾಣಿಸಿಕೊಂಡಿದ್ದು, ಬಿದ್ದು ಕಾರಣ ಆತ ಇಹಲೋಕ ತ್ಯಜಿಸಿರೋದಾಗಿ ಹೇಳಲಾಗಿದೆ. ಹೀಗಾಗಿ ಆತನ ಅಂತ್ಯ ಸಂಸ್ಕಾರವನ್ನೂ ಮಕ್ಕಳು ಮತ್ತು ಆತ ಕೆಲಸಕ್ಕಿದ್ದ ಎಸ್ಟೇಟ್ ಮಾಲೀಕ ಸೇರಿ ನಡೆಸಿದ್ದರು. ಆದರೆ ಕಾರ್ಮಿಕನ ಸಾವಿನ ಬಗ್ಗೆ ಇಲ್ಲದವರಿಗೆ ಮೂಡಿದ್ದ ಅನುಮಾನವೀಗ ಇಡೀ ಪ್ರಕರಣದ ದಿಕ್ಕನ್ನೇ ಬದಲಾಯಿಸಿದೆ. ಬೂನೋದು ಅಸಹಜ ಸಾವಲ್ಲ ಬದಲಾಗಿ ಮರ್ಡರ್ ಎಂಬ ಸತ್ಯ ಬಯಲಾಗಿದೆ.

ಬೂನೋ ಪುತ್ರ ಪ್ರಶಾಂತ್ ಪ್ರಕರಣದ ಪ್ರಮುಖ ಆರೋಪಿ ಎಂಬ ಆರೋಪಿ, ತಂದೆಯನ್ನು ಕೊಂದಿದ್ದ ಘಟನೆಯನ್ನು ಅಸಹಜ ಸಾವು ಎಂಬಂತೆ ಬಿಂಬಿಸಿ ಎಲ್ಲರನ್ನು ನಂಬಿದ್ದರು. ಎಸ್ಟೇಟ್ ಹಿಂದೂ ಜೊತೆ ಸೇರಿ ಮಡಿಕೇರಿ ನಗರದ ರುದ್ರ ಭೂಮಿಯಲ್ಲಿ ತಂದೆಯ ಅಂತ್ಯ ಸಂಸ್ಕಾರವನ್ನೂ ನಡೆಸಿದ್ದರು. ಇದಕ್ಕೆ ಆತನ ಸಹೋದರ ಕೂಡ ಸಹಾಯ ಮಾಡಿದ್ದಾನೆ. ಆದರೆ ಬೂನೋ ಸಾವಿನ ಸುತ್ತ ಹಲವು ಅನುಮಾನಗಳಿದ್ದವು. ಹೀಗಾಗಿ ಈ ಕುರಿತು ಕೆಲವರು ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಂಕಿತರನ್ನ ವಶಕ್ಕೆ ಪಡೆದು ವಿಚಾರಣೆ ಕುಡಿದ ಮತ್ತಿನಲ್ಲಿ ತಾನೇ ತಂದೆಯನ್ನು ಕೊಲೆ ಮಾಡಿರೋದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಸೀನಿಯರ್ ನನ್ನೇ ಕೊಂದ ಜೂನಿಯರ್; ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಹತ್ಯೆಗೆ ಕಾರಣವೇನು?

ಜನವರಿ 11 ರ ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ತೋಟದ ಮನೆಯಲ್ಲಿ ತಂದೆ ಮತ್ತು ಮಗನ ಮಧ್ಯೆ ಗಲಾಟೆಯಾಗಿದೆ. ಈ ಸಂದರ್ಭ ಗಲಾಟೆ ತಾರಕಕ್ಕೇರಿ ಮಗ ಪ್ರಶಾಂತ್ ದೊಣ್ಣೆಯಿಂದ ತಂದೆ ಬೂನೋನ ತಲೆಗೆ ಹೊಡೆದಿದ್ದಾನೆ. ಘಟನೆಯಲ್ಲಿ ಗಂಭೀರವಾಗಿದೆ ಬೂನೋ ಅಲ್ಲೇ ಸಾವನ್ನಪ್ಪಿದ್ದಾನೆ. ನಂತರ ಉಳಿದ ಕಾರ್ಮಿಕರು ವಿಷಯವನ್ನು ಎಸ್ಟೇಟ್ ಮಾಲೀಕ ದೇವಯ್ಯನಿಗೆ ತಿಳಿಸಿದ್ದು, ಬಳಿಕ ದೇಹವನ್ನು ಹಿಂದೂ ರುದ್ರಭೂಮಿಗೆ ಕರೆದುಕೊಂಡು ಹೋಗಿ ಸುಟ್ಟು ಆರೋಪಿಗಳು ಸಾಕ್ಷ್ಯ ನಾಶ ಮಾಡಿರೋದು ತನಿಖೆ ವೇಳೆ ಬಯಲಾಗಿದೆ. ಈ ಕೊಲೆ ಆರೋಪಿ ಪ್ರಶಾಂತ್, ಎಸ್ಟೇ ಮಾಲಿಕಾ ದೇವಯ್ಯನನ್ನ ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 5:13 pm, ಗುರುವಾರ, 15 ಜನವರಿ 26



Source link

Leave a Reply

Your email address will not be published. Required fields are marked *