
ಬಿಗ್ ಬಾಸ್ ಅತ್ಯುತ್ತಮ ವ್ಯಕ್ತಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮವಲ್ಲ. ಇದೊಂದು ಪಕ್ಕಾ ಮನರಂಜನಾ ಶೋ. ಇಲ್ಲಿ ಹೆಚ್ಚು ರಂಜಿಸಿದವರು ಮತ್ತು ಜನರ ಹೆಚ್ಚು ಮತ ಪಡೆದವರು ವಿನ್ನರ್ ಆಗುತ್ತಾರೆ. ಅವರು ‘ದ ಬೆಸ್ಟ್’ ಎಂಬ ಕಾರಣಕ್ಕಲ್ಲ, ಬದಲಾಗಿ ‘Liked by the most’ (ಹೆಚ್ಚು ಜನರು ಇಷ್ಟಪಟ್ಟವರು) ಎಂಬ ಕಾರಣಕ್ಕೆ ಜಯಶಾಲಿಯಾಗುತ್ತಾರೆ.
ಅಂತಿಮವಾಗಿ ವಿನ್ನರ್ ಆಯ್ಕೆ ಮಾಡುವ ಜವಾಬ್ದಾರಿ ಈಗ ಜನರ ಕೈಯಲ್ಲಿದೆ. ಇದೀಗ ರಾಜ್ಯದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಗಿಲ್ಲಿ ನಟನದ್ದೇ ಅತ್ಯಧಿಕವಾಗಿ ಚರ್ಚೆ ಆಗುತ್ತಿದೆ. ಇದರ ನಡುವೆ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕ್ಯಾಪ್ಟನ್ ರಘು ಅವರ ಹೆಸರುಗಳೂ ಕೇಳಿಬರುತ್ತಿವೆ. ಆದರೆ, ಕಾವ್ಯಾ ಮತ್ತು ಧನುಷ್ ಗೌಡ ಅವರ ಕುರಿತಾಗಿ ಹೆಚ್ಚಿನ ಚರ್ಚೆಗಳು ಕಂಡುಬರುತ್ತಿಲ್ಲ.
ಮಂಡ್ಯ ಜನ ಗಿಲ್ಲಿ ಗೆಲುವಿನ ಬಗ್ಗೆ ಎಸ್ಟ್ ಸೀರಿಯಸ್ ಆಗಿ ತಗೊಂಡ್ ಅವ್ರೆ ಅಂದ್ರೆ ಬಿಗ್ ಬಾಸ್ ಅವರು ಜಾಸ್ತಿ ನಿಗರಾಡ್ ಬಾರದು 💀 ಕಪ್ ಕೊಟ್ಟಿ ಕಲ್ಸ್ಬೇಕು ಅಷ್ಟೇ 🫡🤌 #VoteForGilliNata#Gilli#Gillinata#BBK12#BBKSeason12pic.twitter.com/FFNCyyFodJ
— ᴀʙʜɪʟᴀꜱʜᴋᴀɴᴀᴋᴀ (@Abhilashkanaka_) January 15, 2026