ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ಕೇಸ್​: ರಾಜೀವ್​​ ಗೌಡಗೆ ಶಾಕ್​​ ಮೇಲೆ ಶಾಕ್​​

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ಕೇಸ್​: ರಾಜೀವ್​​ ಗೌಡಗೆ ಶಾಕ್​​ ಮೇಲೆ ಶಾಕ್​​


ಚಿಕ್ಕಬಳ್ಳಾಪುರ, ಜನವರಿ 15: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ಪ್ರಕರಣದ ಆರೋಪಿ, ಕಾಂಗ್ರೆಸ್ಮುಖಂಡ ರಾಜೀವ್ ಗೌಡಗೆ ಶಾಕ್ ಆದ ಮೇಲೆ ಶಾಕ್ ಸಿಗ್ತಿದೆ. ತಲೆ ಮರೆಸಿಕೊಂಡಿರುವ ಆರೋಪಿ ವಿರುದ್ಧ ಒಂದೊಂದಾಗಿ ಆರೋಪಗಳು ಕೇಳಿಬರುತ್ತಿದ್ದವು, ಶಿಡ್ಲಘಟ್ಟ ತಹಶೀಲ್ದಾರ್ ಗಗನಸಿಂಧು ಅವರಿಗೂ ಏಕವಚನದಲ್ಲಿ ಈತ ನಿಂದಿಸಿರುವ ಬಗ್ಗೆ ವರದಿಯಾಗಿದೆ. ಆ ಬೆನ್ನಲ್ಲೇ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿರುವ ಮಹಿಳಾ ಪಿಡಿಒ ಒಬ್ಬರು ಕೂಡ ‘ಕೈ’ ಮುಖಂಡನ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ. ಮಹಿಳಾ ಅಧಿಕಾರಿಗಳ ಮೇಲೆ ಡಬ್ಬಾಳಿಕೆ ಮಾಡೋದು ರಾಜೀವ್ ಗೌಡಗೆ ಪ್ರವೃತ್ತಿ ಎಂದು ಟಿವಿ9ಗೆ ಕರೆ ಮಾಡಿ ತಮ್ಮ ಅಳಲುತೋಡಿಕೊಂಡಿದ್ದಾರೆ.

ಪಿಡಿಯೋ ಆರೋಪವೇನು?

ರಾಜೀವ್ ಗೌಡ ತನಗೂ ಕೂಡ ಧಮ್ಕಿ ಹಾಕಿ ಕಿರುಕುಳ ನೀಡುತ್ತಿದ್ದರು. ಶಿಡ್ಲಘಟ್ಟದಲ್ಲಿ ಶಾಸಕರ ಬದಲಿಗೆ ತಮ್ಮ ಮಾತು ನಡೆಯಬೇಕು. ರಾಜೀವ್ ಗೌಡ ಹೇಳಿದಂತೆ ಕೇಳದಿದ್ದರೆ ವರ್ಗಾವಣೆ ಮಾಡುತ್ತಾರೆ. ಸರಿ ಅಥವಾ ತಪ್ಪು ಎಂದು ನೋಡುವುದಿಲ್ಲ, ಅವರು ಹೇಳಿದಂತೆ ಮಾಡಬೇಕು. ಹಾಲಿನ ಡೇರಿಗೆ ನಾಮನಿರ್ದೇಶನ, ಚೆಕ್ ಹಾಕುವ ವಿಚಾರದಲ್ಲಿ ಕಿರುಕುಳ ನೀಡಲಾಯಿತು, ಕೆಪಿಸಿ ಕೋ-ಆರ್ಡಿನೇಟರ್ ಅನ್ನೋ ಲೆಟರ್ ಹೆಡ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಶಾಸಕರಿಗಿಂತ ಕೆಪಿಸಿಸಿ ಕೋ-ಆರ್ಡಿನೇಟರ್ ಹುದ್ದೆ ದೊಡ್ಡದು ಎಂದು ಹೇಳಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗಳ ಮೇಲೆ ಡಬ್ಬಾಳಿಕೆ ಮಾಡ್ತಾರೆ.

ಇದನ್ನೂ ಓದಿ: ರಾಜೀವ್ ಗೌಡ ವಿರುದ್ಧ ಮತ್ತೊಂದು ಆರೋಪ; ತಹಶೀಲ್ದಾರ್‌ಗೂ ನಿಂದಿಸಿದ್ದನಾ ‘ಕೈ’ ಮುಖಂಡ?

ಸ್ಥಳೀಯ ಜೆಡಿಎಸ್ ಶಾಸಕರ ಮಾತು ಕೇಳ್ತಾರೆಂಬ ಭ್ರಮೆಯಲ್ಲಿ ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಇದ್ದಾರೆ. ಪೌರಾಯುಕ್ತೆ ಅಮೃತಾಗೌಡಗೆ ಬೈಯ್ದಂತೆ ನನಗೂ ಬೈಯ್ಯಲು ಯತ್ನಿಸಿದ್ದರು. ಆದರೆ ನಾನು ತಿರುಗಿಸಿ ಬೈಯ್ದರಿಂದ ರಾಜೀವ್ ಗೌಡ ಸುಮ್ಮನಾಗಿದ್ದರು. ಹೇಳಿದಂತೆಲ್ಲ ಮಾಡಲಾಗಲ್ಲ, ಅದೇನ್ ಮಾಡ್ಕೋತಿರೋ ಮಾಡ್ಕೊಳ್ಳಿ ಎಂದಿದ್ದೆ. ಅವರು ಹೇಳಿದಂತೆ ಕೇಳಲಿಲ್ಲವೆಂಬ ಕಾರಣಕ್ಕೆ ವರ್ಗಾವಣೆ ಮಾಡಿದರು. ಶಿಡ್ಲಘಟ್ಟ ಕ್ಷೇತ್ರದ ಮಹಿಳಾ ಅಧಿಕಾರಿಗಳು ಅವರಿಂದ ಕಿರುಕುಳ ಅನುಭವಿಸಿದ್ದಾರೆ ಎಂದು ಪಿಡಿಒ ಹೇಳಿದ್ದಾರೆ.

ರಾಜೀವ್ ಗೌಡಗೆ ಕೆಪಿಸಿಸಿ ನೋಟಿಸ್

ಪಕ್ಷದ ಮುಖಂಡ ರಾಜೀವ್ ಗೌಡ ಮಹಿಳಾ ಅಧಿಕಾರಿಗಳಿಗೆ ಕಿರುಕುಳ ನೀಡಿರುವ ವಿಚಾರ ದೊಡ್ಡದಾಗುತ್ತಿದ್ದಂತೆ ಕಾಂಗ್ರೆಸ್ ಡ್ಯಾಮೇಜ್ ನಿಯಂತ್ರಣಕ್ಕೆ ಮುಂದಾಗಿದೆ. ಪೌರಾಯುಕ್ತರೊಂದಿಗೆ ತಾವು ಆಡಿದ ಮಾತುಗಳಿಂದ ಪಕ್ಷಕ್ಕೆ ಮುಜುಗರ ಆಗಿದೆ. ಒಂದು ವಾರದೊಳಗೆ ಸೂಕ್ತ ಸಮಾಜಾಯಿಷಿ ನೀಡಿ. ಇಲ್ಲವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ನೋಟಿಸ್ ಜಾರಿಯಲ್ಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *