ಕಳ್ಳರನ್ನು ಬಂಧಿಸಿ ಠಾಣೆಗೆ ಕರೆತಂದ ಪೊಲೀಸರಿಗೆ ಕಾದಿತ್ತು ಶಾಕ್!
ಬೆಂಗಳೂರು, ಜನವರಿ 16: ಅವರು ನೋಡಲು ಹುಡುಗರಂತೆ ಕಾಣುವಂತೆ. ಶರ್ಟ್, ಪ್ಯಾಂಟ್ ಹಾಕಿ, ಸ್ಟೈಲಿಶ್ ಆಗಿ ಆಯ್ಕೆ ಮಾಡಿಕೊಂಡು ಹಾಡುಹಗಲೇ ಮನೆಗಳಿಗೆ ಕನ್ನ ಹಾಕಲು. ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಾಗಲೇ ಗೊತ್ತಾಗಿದ್ದು ಅವರು ಹುಡುಗಿಯರು! ಈ ರೀತಿ ವೇಷ ಬದಲಿಸಿ ನಗರದ ಹೊರವಲಯದ ಸಂಪಿಗೆಹಳ್ಳಿಯಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಯುವತಿಯರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಯಾರೂ ಇಲ್ಲದ ಮನೆಯೇ ಟಾರ್ಗೆಟ್
ಟ್ಯಾನರಿ ರಸ್ತೆಯ ನಿವಾಸಿಗಳಾದ ಶಾಲು–ನೀಲು ಎಂಬ ಯುವತಿಯರು ಹುಡುಗರ ವೇಷದಲ್ಲಿ ಬೈಕ್ನಲ್ಲಿ ಕಾಣಿಸಿಕೊಂಡು, ಮನೆಯಿಂದ ಹೊರಗೆ ಹೋದ ಸಮಯವನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಇದೇ ರೀತಿ ಜನವರಿ 13ರಂದು ಯಲಹಂಕ ಸಮೀಪದ ಅಗ್ರಹಾರ ಲೇಔಟ್ನಲ್ಲಿರುವ ಆಟೋ ಚಾಲಕ ಸಂಗಮೇಶ್ ಮನೆಗೆ ನುಗ್ಗಿದ್ದ ಕಳ್ಳರು, ಹಾಡಹಗಲೇ ಕನ್ನ ಹಾಕಿದ್ದರು. ಮನೆಯವರು ಹೊರಗೆ ಹೋಗಿದ್ದನ್ನೇ ಕಾದು, ನಂತರ ಮನೆಯಲ್ಲಿದ್ದ ನಗದು ಹಾಗೂ ಮೌಲ್ಯಗಳನ್ನು ದೋಚಿದ್ದರು.
ಇದನ್ನೂ ಓದಿ ಪ್ರೀತಿಸಿ ಮದ್ವೆಯಾಗಿದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿಗೆ ಚಟ್ಟ ಕಟ್ಟಿದ
ಹುಡುಗರ ವೇಷದಲ್ಲಿದ್ದಿದ್ದು ಹುಡುಗಿಯರು!
ಮನೆಗೆ ವಾಪಸ್ ಬಂದ ಸಂಗಮೇಶ್, ಕಳ್ಳತನವಾಗಿರುವುದು ತಿಳಿದು ದಂಗಾಗಿದ್ದರು. ಬಳಿಕ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಳ್ಳತನದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆ ಬಿದ್ದ, ಕಳ್ಳರು ಬಳಸಿದ್ದ ಸ್ಕೂಟಿಯ ನಂಬರ್ ಪೊಲೀಸರ ಕಣ್ಣಿಗೆ ಬಿದ್ದಿದ್ದರು. ಸಿಸಿಟಿವಿ ಹಾಗೂ ವಾಹನ ನೋಂದಣಿ ಸಂಖ್ಯೆ ಆಧಾರವಾಗಿ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಠಾಣೆಗೆ ಕರೆತಂದಾಗ ಶಾಕ್ ಆಗಿದ್ದರು. ಹುಡುಗರಂತೆ ಕಾಣುತ್ತಿದ್ದ ಕಳ್ಳರು ಶಾಲು ಮತ್ತು ನೀಲು ಎಂಬ ಯುವತಿಯರು ಬೆಳಕಿಗೆ ಬಂದಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.