Headlines

ಬಳ್ಳಾರಿ ಗಲಭೆ: ನಾಳೆ ನಡೆಯಲಿರುವ ಬಿಜೆಪಿ ಬೃಹತ್​ ಪ್ರತಿಭಟನೆ ರ‍್ಯಾಲಿ ಬಗ್ಗೆ ಎಸ್​​ಪಿ ಹೇಳಿದ್ದಿಷ್ಟು

ಬಳ್ಳಾರಿ ಗಲಭೆ: ನಾಳೆ ನಡೆಯಲಿರುವ ಬಿಜೆಪಿ ಬೃಹತ್​ ಪ್ರತಿಭಟನೆ ರ‍್ಯಾಲಿ ಬಗ್ಗೆ ಎಸ್​​ಪಿ ಹೇಳಿದ್ದಿಷ್ಟು


ಬಳ್ಳಾರಿ, ಜನವರಿ 16: ಬ್ಯಾನರ್ ವಿಚಾರಕ್ಕೆ ಗಲಭೆ ಮತ್ತು ಫೈರಿಂಗ್ ಘಟನೆ ಖಂಡಿಸಿ ಜ 17ರಂದು ಬಳ್ಳಾರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಈ ಬಗ್ಗೆ ಎಸ್ ಪಿ ಸುಮನ್ ಡಿ.ಪನ್ನೇಕರ್ ಅವರು ಹೇಳಿಕೆ ನೀಡಿದ್ದು, ಸಮಾವೇಶದಲ್ಲಿ 15-20 ಸಾವಿರ ಜನ ಭಾಗವಹಿಸುವ ಸಾಧ್ಯತೆ ಇದೆ. ಭದ್ರತೆಗಾಗಿ ಬೇರೆ ಜಿಲ್ಲೆಗಳಿಂದ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇಬ್ಬರು ಎಸ್‌ಪಿ, 7 ಹೆಚ್ಚವರಿ ಎಸ್‌ಪಿ, 15 ಡಿವೈಎಸ್‌ಪಿ, 55 ಸಿಪಿಐ, 122 ಎಸ್‌ಪಿಐ, 81 ಎಸ್‌ಎಸ್‌ಐ, 1233 ಪೊಲೀಸ್ ಕಾನ್ಸ್‌ಟೇಬಲ್, 171 ಮಹಿಳಾ ಪೊಲೀಸ್ ಸಿಬ್ಬಂದಿ, 500 ಹೋಮ್‌ಗಾರ್ಡ್ ಸಿಬ್ಬಂದಿ, 12 ಡಿಆರ್ ತುಕಡಿ, 17 ಕೆಎಸ್‌ಪಿ ಎನ್‌ಆರ್‌ಪಿ. ಸಮಾವೇಶದ ಆಯೋಜಕರಿಂದ ಮಾಹಿತಿ ಪಡೆದಿದ್ದೇವೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *