Headlines

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೀದರ್‌ ATM ದರೋಡೆ ಕೇಸ್‌ಗೆ 1 ವರ್ಷ: ಆರೋಪಿಗಳ ಸುಳಿವೇ ಇಲ್ಲ

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೀದರ್‌ ATM ದರೋಡೆ ಕೇಸ್‌ಗೆ 1 ವರ್ಷ: ಆರೋಪಿಗಳ ಸುಳಿವೇ ಇಲ್ಲ


ಬೀದರ್, ಜನವರಿ 16: ಎರಡೂ ನಡೆದಿದ್ದ ಸಿಎಂ (CMC) ವಾಹನ ದರೋಡೆ ಪ್ರಕರಣ (ದರೋಡೆ ಪ್ರಕರಣ) ಇಡೀ ರಾಜ್ಯವನ್ನ ಬೆಚ್ಚಿಬೀಳಿಸಿತು. ಬರೋಬ್ಬರಿ 83 ಲಕ್ಷ ರೂ ಹಣ ದರೋಡೆ ಮಾಡಿದವರು ಇನ್ನೂ ಇನ್ನೂ ಇಲ್ಲ. ಮೂರು ರಾಜ್ಯದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹಣ ಕದ್ದು ಹಂತಕರು ಪರಾರಿಯಾಗಿ ಇಂದಿಗೆ ಒಂದು ವರ್ಷವಾದರೂ ದರೋಡೆಕೋರರ ಗ್ಯಾಂಗ್ ಇನ್ನೂ ಇಲ್ಲ. ಇತ್ತ ಗುಂಡಿನ ದಾಳಿಗೆ ಒಳಗಾಗಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವುದೆಂದು ಹೇಳಿದ್ದು ಇದೀಗ ಕೈ ಚೆಲ್ಲಿದೆ, ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಕರಣ ಹಿನ್ನೆಲೆ

ಬೀದರ್‌ನಲ್ಲಿ 2025ರಲ್ಲಿ ಜನವರಿ 16ರ ಮುಂಜಾನೆ 11 ಗಂಟೆಗೆ ನಡೆದಿದ್ದ ದರೋಡೆ ಪ್ರಕರಣಕ್ಕೆ ಇಂದಿಗೆ ಒಂದು ವರ್ಷ. ಒಂದು ವರ್ಷ ಕಳೆದರೂ ಈ ದರೋಡೆಕೋರರನ್ನ ಬಂಧಿಸಲು ಬೀದರ್ ಪೊಲೀಸರಿಗೆ ಸಾಧ್ಯವಾಗಿಲ್ಲ. ಬೀದರ್ ನಗರದ ಶಿವಾಜಿ ವೃತ್ತದ ಬಳಿಯಿರುವ ಎಸ್ ಬಿಐ ಬ್ಯಾಂಕ್ ಎಟಿಎಂಗೆ ಎಸ್ ಎಂಎಸ್ ವಾಹನದಲ್ಲಿ ಎಟಿಎಂಗೆ ಹಣ ತುಂಬಲು ಸಿಬ್ಬಂದಿ ಬಂದಿದ್ದರು. ಇದೇ ವೇಳೆ ಇಬ್ಬರು ದರೋಡೆಕೋರರು ತಮ್ಮ ಕೈಯಲ್ಲಿದ್ದ ಪಿಸ್ತೂಲ್ ಸಿಬ್ಬಂದಿ ಇಬ್ಬರನ್ನ ಶೂಟ್ ಮಾಡಿ ಹಣ ಕದ್ದು ಪರಾರಿಯಾಗಿದ್ದರು. ಹಾಡುಹಗಲೇ ನಡೆದಿದ್ದ ಘಟನೆಗೆ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು.

ಇದನ್ನೂ ಓದಿ: ಬೆನ್ನಟ್ಟಿದ್ದ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿ ಬೀದರ್ ದರೋಡೆಕೋರರು ಎಸ್ಕೇಪ್

ದರೋಡೆಕೋರರು ಶೂಟ್ ಮಾಡಿದಾಗ ಬೀದರ್ನ ನಿವಾಸಿ ಗಿರಿ ವೆಂಕಟೇಶ್ ಸ್ಥಳದಲ್ಲಿಯೇ ಇದ್ದರು. ಈ ಸಂದರ್ಭದಲ್ಲಿ ಶಿವಕುಮಾರ್ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಆದರೆ ಅವರಿಗೆ ಆರ್ಥಿಕ ಸಹಾಯ ಮಾಡುತ್ತೇನೆಂದು ಹೇಳಿದ್ದಕ್ಕೆ ಕೈಚೆಲ್ಲಿದ್ದು ಕುಟುಂಬಸ್ಥರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.

ಪ್ಲ್ಯಾನ್ ಪ್ರಕಾರವೇ ದರೋಡೆ

ಇನ್ನೂ ದರೋಡೆಯಲ್ಲಿ ಭಾಗವಹಿಸಿದ್ದ ಗ್ಯಾಂಗ್ ದರೋಡೆಗೂ ಮುನ್ನ ಪಕ್ಕಾಪ್ಲ್ಯಾನ್ ಮಾಡಿತ್ತು. ದರೋಡೆ ಮಾಡುವ ಎರಡು ದಿನದ ಮುಂಚೆ ಬೀದರ್‌ನಲ್ಲಿ ದರೋಡೆಕೋರರು ಉಳಿದುಕೊಂಡಿದ್ದರು. ದರೋಡೆ ಮಾಡಿಕೊಂಡು ಯಾವ ಮಾರ್ಗದಲ್ಲಿ ಹೋಗಬೇಕು ಅನ್ನೋದನ್ನ ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ಗ್ಯಾಂಗ್, ತಾವು ಮಾಡಿದ ಪ್ಲ್ಯಾನ್ ಪ್ರಕಾರವೇ ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.

ಬೀದರ್ನ ಅಂಬೇಡ್ಕರ್ ವೃತ್ತದಿಂದ ಹರಳಯ್ಯ ಚೌಕ್, ಅಬಕಾರಿ ಕಚೇರಿ ರಸ್ತೆ, ಬೀದರ್ ಕೋರ್ಟ್, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ, ನೂರು ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಉಗ್ರನರಸಿಂಹ ದೇವಸ್ಥಾನ, ಮಲ್ಕಾಪುರ, ಸುಲ್ತಾನಪುರ ಮಾರ್ಗವಾಗಿ ಹೈದರಾಬಾದ್‌ಗೆ ಬೈಕ್ ಮೂಲಕ ಪ್ರಯಾಣಿಸಬೇಕಾಗಿತ್ತು.

ಬೀದರ್‌ನಲ್ಲಿ ಮುಂಜಾನೆ 11 ಗಂಟೆಗೆ ದರೋಡೆ ಮಾಡಿಕೊಂಡು ಇಲ್ಲಿಂದ 18 ನಿಮಿಷದಲ್ಲಿ ತೆಲಂಗಾಣ ರಾಜ್ಯಕ್ಕೆ ಎಂಟ್ರಿಕೊಟ್ಟಿದ್ದರು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಹೈದರಾಬಾದ್ ತಲುಪಿ ಅಲ್ಲಿಂದ ಸಿಕಂದ್ರಾಬಾದ್ ತಲುಪಿದ್ದಾರೆ. ಸಿಕಂದ್ರಬಾದ್‌ನಿಂದ ರೈಲು ಮೂಲಕ ಜಾರ್ಖಂಡ್‌ಗೆ ಹೋಗಿದ್ದರು. ಉತ್ತರ ಪ್ರದೇಶದ ವಾರಣಾಸಿ, ಬಿಹಾರ್, ಜಾರ್ಖಂಡ್‌ನಲ್ಲಿ ಬೀದರ್ ಪೊಲೀಸರು ಬೀಡುಬಿಟ್ಟು ದರೋಡೆಕೋರರ ಹೆಡೆಮುರಿಕಟ್ಟು ತಯಾರಿ ನಡೆಸಿದ್ದರು. ಆದರೆ ದರೋಡೆಕೋರರು ಪೊಲೀಸರಿಗೆ ಕಳೆದೊಂದು ವರ್ಷದಿಂದ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ.

ಗಾಯಾಳು ಶಿವಕುಮಾರ್ ಹೇಳಿದ್ದಿಷ್ಟು

ಇತ್ತ ಗಾಯಾಳುವಿಗೆ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡುವುದಾಗಿ ಹೇಳಿದ್ದ ಹೆಸರು ಇವರೆಗೆ ಕೊಟ್ಟಿಲ್ಲ. ನೀಡಿದ್ದ ನೌಕರಿ ಕೂಡ ಬೀದರ್ ನಿಂದ 12 ಕಿ.ಮೀ ದೂರವಿತ್ತು. ಹೀಗಾಗಿ ನಾನು ಆ ಕೆಲಸಕ್ಕೆ ಹೋಗಿಲ್ಲ, ನನಗೆ ಬೀದರ್ ನಲ್ಲಿಯೇ ಗುತ್ತಿಗೆ ಆಧಾರದಲ್ಲಿ ನೌಕರಿ ಕೊಡಿ ಎಂದು ಗಾಯಾಳು ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಬೀದರ್: ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಇಬ್ಬರು ಸಾವು

ಬೀದರ್ ಸೇರಿದಂತೆ ರಾಜ್ಯವನ್ನು ಬೆಚ್ಚಿಬೀಳಿಸಿದ ಪ್ರಕರಣದ ದರೋಡೆಕಾರರನ್ನು ಹೆಡೆಮುರಿ ಕಟ್ಟಿ ಜನರು ಖಾಕಿ ಪಡೆಯ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 4:39 pm, ಶುಕ್ರ, 16 ಜನವರಿ 26



Source link

Leave a Reply

Your email address will not be published. Required fields are marked *