ತುಮಕೂರು, (ಜನವರಿ 16): ಸಿಎಂ ಸಿದ್ದರಾಮಯ್ಯನವರು ಇಂದು (ಜನವರಿ 16) ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದಲ್ಲಿ ಭಾಗವಹಿಸಿ ಉದ್ಘಾಟಿಸಿದರು. ಬಳಿಕ
ಸಿದ್ದರಾಮಯ್ಯನವರು ನೇರವಾಗಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಶಾಸಕ ಕೆಎನ್ ರಾಜಣ್ಣ ನಿವಾಸಕ್ಕೆ ಭೇಟಿ ನೀಡಿ ಭರ್ಜರಿ ಊಟ ಸವಿದರು. ಸಿದ್ದರಾಮಯ್ಯನವರಿಗಂತಲೇ ಅವರಿಗೆ ಇಷ್ಟವಾದ ನಾಟಿ ಕೋಳಿ ಬಾಡೂಟ ತಯಾರಿಸಲಾಗಿದೆ. ರಾಗಿ ಮುದ್ದೆ, ನಾಟಿಕೋಳಿ ಸಾರು, ಕಾಲ್ ಸೂಪ್ ಸೇರಿದಂತೆ ವಿವಿಧ ಖಾದ್ಯ ಸಿದ್ಧಪಡಿಸಿದರು, ಸಿದ್ದರಾಮಯ್ಯನವರು ಸಹ ರಾಜಣ್ಣನವರ ನಿವಾಸಕ್ಕೆ ತೆರಳಿ ಬಾಡೂಟ ಸವಿದಿದ್ದಾರೆ.
ಊಟದ ಬಳಿಕ ಮಾಧ್ಯಮಗಳಿಗೆ ಸಿಎಂ ಹೇಳಿಕೆ, ಕೆ.ಎನ್.ರಾಜಣ್ಣ ನಿವಾಸದಲ್ಲಿ ಸಿದ್ಧಪಡಿಸಿದ್ದ ಊಟ ಚೆನ್ನಾಗಿತ್ತು. ಕಾಲ್ ಸೂಪ್, ನಾಟಿ ಕೋಳಿ ತಂದು ಅಡುಗೆ ಮಾಡಿದರು. ನನಗೆ ಹುಷಾರಿರಲಿಲ್ಲ. ಜ್ವರ ಇದ್ದುದರಿಂದ ಬಾಯಿ ಕೆಟ್ಟೋಗಿತ್ತು. ನಾನ್ ವೆಜ್ ಇತ್ತಲ್ಲ ಚೆನ್ನಾಗಿತ್ತು ಊಟ ಮಾಡುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ