Annayya Serial: ಮತ್ತೊಮ್ಮೆ ನಡೆಯಿತು ಮಾಕಾಳವ್ವನ ಪವಾಡ… ವೀಕ್ಷಕರು ಕಾಯುತ್ತಿದ್ದ ಆ ಗಳಿಗೆ ಬಂದೇ ಬಿಡ್ತು!

Annayya Serial: ಮತ್ತೊಮ್ಮೆ ನಡೆಯಿತು ಮಾಕಾಳವ್ವನ ಪವಾಡ… ವೀಕ್ಷಕರು ಕಾಯುತ್ತಿದ್ದ ಆ ಗಳಿಗೆ ಬಂದೇ ಬಿಡ್ತು!

Annayya Serial: ಮತ್ತೊಮ್ಮೆ ನಡೆಯಿತು ಮಾಕಾಳವ್ವನ ಪವಾಡ… ವೀಕ್ಷಕರು ಕಾಯುತ್ತಿದ್ದ ಆ ಗಳಿಗೆ ಬಂದೇ ಬಿಡ್ತು!

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇಲ್ಲಿವರೆಗೆ ವೀಕ್ಷಕರು ಅಮ್ಮ -ಮಗ ಯಾವಾಗ ಒಂದಾಗೋದು ಎಂದು ಕಾಯುತ್ತಿದ್ದರು. ಇದೀಗ ಆ ಗಳಿಗೆ ಬಂದೇ ಬಿಟ್ಟಿದೆ. ಮಾಕಾಳವ್ವನ ಪವಾಡದಿಂದ ಮಗನೇ ಅಮ್ಮನನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ.

ಜೀ ಕನ್ನಡದಲ್ಲಿ ಪ್ರಸಾರವಾಗುವ ಅಣ್ಣಯ್ಯ ಧಾರಾವಾಹಿ ದಿನಕ್ಕೊಂದು ಟ್ವಿಸ್ಟ್ ಟರ್ನ್ ಗಳನ್ನು ನೀಡುತ್ತಾ ವೀಕ್ಷಕರಿಗೆ ಪ್ರತಿದಿನವೂ ಮನರಂಜನೆಯನ್ನು ಉಣಬಡಿಸುತ್ತಾ ಬರುತ್ತಿದೆ. ಇದೀಗ ವೀಕ್ಷಕರು ಹಲವು ತಿಂಗಳುಗಳಿಂದ ಕಾಯುತ್ತಿದ್ದ ಆ ಅಮೃತ ಗಳಿಗೆ ಬಂದೇ ಬಿಟ್ಟಿದೆ.

ರಶ್ಮಿಗೆ ತೊಂದರೆ ನೀಡುವ ಮಗ ಸೀನಾಗೆ ಪಿಂಕಿ ಜೊತೆ ಮದುವೆ ಮಾಡಲು ತುದಿಗಾಲಲ್ಲಿ ನಿಂತಿರುವ ಲೀಲಾಗೆ, ಪ್ರತಿದಿನ ಶಾರದಮ್ಮ ಸೀರೆಯಲ್ಲಿ ಮುಖ ಮುಚ್ಚಿ ಸರಿಯಾಗಿ ಹೊಡೆಯುತ್ತಿದ್ದರು. ಲೀಲಾ ಇಷ್ಟು ದಿನ ಅದನ್ನ ಕೊಳ್ಳಿ ದೆವ್ವ ಎಂದುಕೊಂಡಿದ್ದಳು. ಇದೀಗ ಅದಕ್ಕೆಲ್ಲಾ ಕಾರಣ ಶಾರದಮ್ಮನೇ ಅನ್ನೋದು ಗೊತ್ತಾಗಿದೆ.

ತನ್ನ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದುಕೊಂಡು, ನನಗೆ ಗೊತ್ತಾಗದೇ ಹೊಡೆಯುತ್ತಿರುವ ಶಾರದಮ್ಮನ ಮೇಲೆ ಕೋಪದಿಂದ ಲೀಲಾ ರಾತ್ರೋ ರಾತ್ರಿ ಆಕೆಯನ್ನು ಮನೆಯಿಂದ ಹೊರಹಾಕಿದ್ದಾಳೆ. ನಡು ರಾತ್ರಿಯಲ್ಲಿ ಎಲ್ಲಿ ಹೋಗಬೇಕೆಂದು ಅರಿಯದ ಶಾರದಮ್ಮ ಮಾಕಾಳವ್ವನೇ ಕಾಪಾಡಬೇಕೆಂದು ಬೇಡಿಕೊಳ್ಳುತ್ತಾಳೆ.

ಕಣ್ಣೀರಿಡುತ್ತಾ ಶಾರದಮ್ಮ ಮಾಕಾಳವ್ವನನ್ನೇ ಪ್ರಶ್ನೆ ಮಾಡಿ ನಗ್ತಿದ್ಯಾ ತಾಯಿ, ನನ್ನ ಗೂಡನ್ನು ನಾನು ಸೇರಿಕೊಳ್ಳಬೇಕು ಎಂದು ಬಂದಾಗ, ನನ್ನನ್ನೇ ಮನೆಯಿಂದ ಹೊರ ಹಾಕ್ತ್ಯಾ ಎನ್ನುತ್ತಾಳೆ. ಅಷ್ಟರಲ್ಲಿ ಮಾಕಾಳವ್ವನ ಸೈನ್ಯ ಶಾರದಮ್ಮನ ಪ್ರಶ್ನೆಗೆ ಉತ್ತರವಾಗಿ ಎದುರು ಬರುತ್ತಾರೆ.

ಕಗ್ಗತ್ತಲ ರಾತ್ರಿಯಲ್ಲಿ ಮಳೆ ಬರುತ್ತಿರುವಾಗ ಹೆಂಗಸೊಬ್ಬಳ ಬಳಿ ನಾಲ್ಕು ಜನ ಮುಸುಕುದಾರಿಗಳನ್ನು ನೋಡಿ ಶಿವು, ಅವರನ್ನು ಹೊಡೆದೋಡಿಸಿ, ಶಾರದಮ್ಮನನ್ನು ರಕ್ಷಿಸಲು ಮುಂದಾಗುತ್ತಾನೆ. ಆದರೆ ಯಾರೂ ಕೂಡ ಅವನ ಕೈಗೆ ಸಿಗೋದೆ ಇಲ್ಲ. ಕೊನೆಗೆ ಜೀವ ಕೊಟ್ಟಾದರೂ ನಿಮ್ಮನ್ನ ರಕ್ಷಿಸುತ್ತೇನೆ ಎನ್ನುತ್ತಾ, ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ.

ತಾನು ಕೈಹಿಡಿದು ತನ್ನ ಮನೆಗೆ ಕರೆದುಕೊಂಡು ಬಂದಿರೋದು ತನ್ನ ಅಮ್ಮ ಅನ್ನೋದು ಗೊತ್ತಿರದ ಶಿವು, ಮನೆಯೊಳಗೆ ಕಾಲಿಟ್ಟ ನಂತರ ಬೆಳಕಲ್ಲಿ ಅಮ್ಮನನ್ನು ನೋಡಿ ಶಾಕ್ ಆಗುತ್ತಾನೆ, ಜೊತೆಗೆ ಮನೆ ಮಂದಿ ಕೂಡ ಈ ದೃಶ್ಯವನ್ನು ನೋಡಿ ಅಚ್ಚರಿಗೊಳ್ಳುತ್ತಾರೆ.

ಇಲ್ಲಿವರೆಗೂ ಅಮ್ಮ ಅಂದರೇನೆ ದ್ವೇಷದ ಕಿಡಿ ಕಾರುತ್ತಿದ್ದ ಶಿವು, ಈವಾಗಲಾದರೂ ಅಮ್ಮನನ್ನು ಒಪ್ಪಿಕೊಳ್ಳುತ್ತಾನ? ವೀರಭದ್ರನ ನಿಜವಾದ ಮುಖವನ್ನು ಅರ್ಥಮಾಡಿಕೊಳ್ಳುತ್ತಾನ? ಅಥವಾ ಮತ್ತೆ ಅಮ್ಮನನ್ನು ಈ ಮನೆಯಿಂದ ಹೊರಹಾಕುತ್ತಾನ? ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.

ಮಾಂಕಾಳವ್ವನ ಪವಾಡದ ಈ ಅಣ್ಣಯ್ಯ ಪ್ರೊಮೊ ನೋಡಿ ವೀಕ್ಷಕರು ಖುಷಿ ಪಟ್ಟಿದ್ದಾರೆ. ಹೀಗೂ ಪವಾಡ ನಡೆಯುವುದನ್ನು ನೋಡಿ ಮೈ ಜುಂ ಅಂತು ಎಂದಿದ್ದಾರೆ ವೀಕ್ಷಕರು. ಅಷ್ಟೇ ಅಲ್ಲದೇ ಕೊನೆಗೂ ತಾವು ಕಾಯುತ್ತಿದ್ದ ಗಳಿಗೆ ಬಂದೇ ಬಿಟ್ಟಿತು ಎಂದು ಖುಷಿ ಪಟ್ಟಿದ್ದಾರೆ.

Source link

Leave a Reply

Your email address will not be published. Required fields are marked *