Headlines

1 ಲಕ್ಷ ರೂನಿಂದ 2.71 ಕೋಟಿ ರೂ; ಭಾರತದ ಅತ್ಯಂತ ಹಳೆಯ ಫಂಡ್​ನಿಂದ ಭರ್ಜರಿ ಆದಾಯ

1 ಲಕ್ಷ ರೂನಿಂದ 2.71 ಕೋಟಿ ರೂ; ಭಾರತದ ಅತ್ಯಂತ ಹಳೆಯ ಫಂಡ್​ನಿಂದ ಭರ್ಜರಿ ಆದಾಯ


ಜನವರಿ 16: ದೀರ್ಘಾವಧಿಗೆ ಹೂಡಿಕೆಗಳು ಸಾಮಾನ್ಯವಾಗಿ ಸೋಲು ತರುವುದಿಲ್ಲ. ಹೂಡಿಕೆ ಗಣನೀಯವಾಗಿ ಬೆಳೆಯಬೇಕಾದರೆ ದೀರ್ಘಾವಧಿಯೇ ಬೇಕು. ಭಾರತದಲ್ಲಿ ಸದ್ಯ ಜೀವಂತ ಇರುವ ಅತ್ಯಂತ ಹಳೆಯ ಮ್ಯೂಚುವಲ್ ಫಂಡ್ ವೊಂದರ (ಮ್ಯೂಚುಯಲ್ ಫಂಡ್) ನಿದರ್ಶನ ಕಣ್ಮುಂದೆ ಇದೆ. ಯುಟಿಐ ಲಾರ್ಜ್ ಕ್ಯಾಪ್ ಫಂಡ್ (UTI ಲಾರ್ಜ್ ಕ್ಯಾಪ್ ಫಂಡ್) ಆರಂಭವಾಗಿ ಇಲ್ಲಿಯವರೆಗೆ ವರ್ಷಕ್ಕೆ ಶೇ. 15.35 ಸಿಎಜಿಆರ್‌ನಲ್ಲಿ ಬೆಳೆದಿದೆ. ಮಾರುಕಟ್ಟೆಯನ್ನು ತಲ್ಲಣಗೊಳಿಸಿದ ಹಲವು ಅವಘಡಗಳ ನಡುವೆ ಈ ಫಂಡ್ ಅದ್ಭುತವಾಗಿ ಸಾಗಿದೆ.

ಯುಟಿಐ ಮ್ಯೂಚುವಲ್ ಫಂಡ್ ಸಂಸ್ಥೆ 1964 ರಲ್ಲಿ ಪ್ರಾರಂಭವಾಯಿತು. ಇದರ ಲಾರ್ಜ್ ಕ್ಯಾಪ್ ಫಂಡ್ 1986ರ ಅಕ್ಟೋಬರ್ 16ರಂದು ಶುರುವಾಗಿದೆ. ಯುಟಿಐ ಮಾಸ್ಟರ್‌ಶೇರ್ ಯುನಿಟ್ ಸ್ಕೀಮ್ ಆಗಿ ಆರಂಭವಾದ ಈ ಫಂಡ್ 39 ವರ್ಷದ ಶೇ. 15.35 ಸಿಎಜಿಆರ್‌ನಲ್ಲಿ ಬೆಳೆದಿರುವುದು ನಿಜಕ್ಕೂ ದೀರ್ಘಾವಧಿ ಹೂಡಿಕೆಯ ಮಹತ್ವವನ್ನು ಸಾರಿದೆ.

ಇದನ್ನೂ ಓದಿ: 2010 ರಿಂದ ತಿಂಗಳಿಗೆ 15,000 ರೂ ಹೂಡಿಕೆ; ಇವತ್ತು ನೀವು ಕೋಟ್ಯಾಧಿಪತಿ; ಸಿಂಪಲ್ 15x15x15 ಫಾರ್ಮುಲಾದಿಂದ ಸಾಧ್ಯ

ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಎಷ್ಟಾಗುತ್ತಿತ್ತು ಗೊತ್ತಾ?

ಯುಟಿಐ ಲಾರ್ಜ್ ಕ್ಯಾಪ್ ಫಂಡ್‌ನಲ್ಲಿ 1986ರಲ್ಲೇ ಯಾರಾದರೂ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದಾರೆ, ಇವತ್ತು ಆ ಹೂಡಿಕೆ ಮೌಲ್ಯ 2.71 ಕೋಟಿ ರೂ ಆಗಿರುತ್ತದೆ.

5,000 ಎಸ್‌ಐಪಿಯಿಂದ 15 ಕೋಟಿ ರೂ?

ಒಂದು ವೇಳೆ 39 ವರ್ಷಗಳ ಹಿಂದೆ ಯುಟಿಐ ಲಾರ್ಜ್ ಕ್ಯಾಪ್ ಫಂಡ್‌ನಲ್ಲಿ ಮಾಸಿಕ 5,000 ರೂಗಳು ಎಸ್‌ಐಪಿ ಶುರು ಮಾಡಿದ್ದರೆ ಇವತ್ತು ಆ ಹೂಡಿಕೆ ಮೌಲ್ಯ 15 ಕೋಟಿ ರೂ ಮೀರಿ ಹೋಗುತ್ತಿದೆ. ಹೂಡಿಕೆಯಲ್ಲಿ ಶಿಸ್ತು, ಸಂಯಮ ಇದ್ದರೆ ನಿಜಕ್ಕೂ ದೊಡ್ಡ ಸಂಪತ್ತು ಸೃಷ್ಟಿಸಬಹುದು ಎನ್ನುವುದಕ್ಕೆ ಸಾಕ್ಷಿ.

ಇದನ್ನೂ ಓದಿ: ಷೇರು, ಚಿನ್ನ, ಎಫ್ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವು?

ಉದಾಹರಣೆಗೆ, ನೀವು ಬ್ಯಾಂಕಲ್ಲಿ 30 ವರ್ಷದ ಹಿಂದೆ 20 ಲಕ್ಷ ರೂ ಹೋಮ್ ಲೋನ್ ಪಡೆದಿದ್ದರೆ (ಶೇ. 9 ಬಡ್ಡಿ) ಇವತ್ತಿನವರೆಗೂ ಕಟ್ಟಿರುವ ಇಎಂಐಗಳ ಒಟ್ಟು ಮೊತ್ತ ಸುಮಾರು 60 ಲಕ್ಷ ರೂ. ನೀವು ಪ್ರತೀ ತಿಂಗಳು 5,000 ರೂನಂತೆ 39 ವರ್ಷ ಎಸ್‌ಐಪಿ ಮಾಡಿದರೆ ನೀವು ಕಟ್ಟುವ ಒಟ್ಟು ಮೊತ್ತ 23 ಲಕ್ಷ ರೂ. ಇದರ ಮೌಲ್ಯ ಇವತ್ತು 2.71 ಕೋಟಿ ರೂ. ಇದು ಹೂಡಿಕೆ ಎಷ್ಟು ಮಹತ್ವದ್ದು, ದೀರ್ಘಾವಧಿ ಹೂಡಿಕೆ ಎಂಥ ಲಾಭ ತರಬಹುದು ಎನ್ನುವುದಕ್ಕೆ ಉದಾಹರಣೆಯಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *