ಯೂಟ್ಯೂಬರ್ ಚಿತ್ರೀಕರಿಸಿದ ದೃಶ್ಯ
ಉತ್ತರ ಕನ್ನಡ, ಜನವರಿ 16: ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡದೆ ಅನುಮತಿ ಇಲ್ಲದೆ ತಂಗಿದ ಹಾಗೂ ವೀಡಿಯೊಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಯೂಟ್ಯೂಬರ್ ವಿರುದ್ಧ ಅರಣ್ಯ ಇಲಾಖೆ ಎಫ್ಐಆರ್ ದಾಖಲಿಸಿದೆ. ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ಇಲಾಖೆ ನೋಟಿಸ್ ನೀಡಿದರೂ, ಆತ ಸಂಪರ್ಕಕ್ಕೆ ಸಿಗದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಇನ್ಸ್ಟಾಗ್ರಾಂನಲ್ಲಿ @sg_malenadu ಎಂಬ ಹೆಸರಿನಿಂದ ಪರಿಚಿತವಾಗಿರುವ ಯೂಟ್ಯೂಬರ್, ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಂಗಿದ್ದು ಡ್ರೋನ್ ಹಾಗೂ ವಿಡಿಯೋ ಬಳಸಿ ಫೋಟೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಒಳಗಿನ ಕುಂಬಾರವಾಡದ ಪಥೆಗುಡಿ ಪ್ರದೇಶವು ಹುಲಿಗಳ ನಿರಂತರ ಸಂಚಾರವಿರುವ ಕೋರ್ ಟೈಗರ್ ರಿಸರ್ವ್ ಆಗಿದ್ದು, ನಿಯಮಾನುಸಾರ ಇದು ಪ್ರವಾಸೋದ್ಯಮಕ್ಕೆ ಸಂಪೂರ್ಣ ನಿಷೇಧಿತ ಪ್ರದೇಶವಾಗಿದೆ. ಆದರೆ ಕಳೆದ ನವೆಂಬರ್ನಲ್ಲಿ ಗಂಭೀರ ನಿಯಮ ಉಲ್ಲಂಘನೆಯಾಗಿದೆ. 2025ರ ನವೆಂಬರ್ 5 ರಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಯೂಟ್ಯೂ, ಬೈಕ್ ಅನ್ನು ಆ ಪ್ರದೇಶದಲ್ಲಿ ಓಡಿಸಿದ್ದಾನೆ. ಚಿತ್ರೀಕರಣ ಮಾಡಿದ ವಿಡಿಯೋವನ್ನು 2025ರ ನವೆಂಬರ್ 21ರಂದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿತ್ತು.
ಇದನ್ನೂ ಓದಿ: ಕಳ್ಳರನ್ನು ಬಂಧಿಸಿ ಠಾಣೆಗೆ ಕರೆತಂದ ಪೊಲೀಸರಿಗೆ ಕಾದಿತ್ತು ಶಾಕ್! ಕಳ್ಳತನ ಮಾಡಿದ್ದು ಅವನಲ್ಲ ಅವಳು!
ಅಪ್ಲೋಡ್ ಆದ ವಿಡಿಯೋವನ್ನು ಇಲಾಖೆ ಪರಿಶೀಲಿಸಿದ್ದು, ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ವಿವರಣೆ ಕೇಳಿ ನೋಟಿಸ್ ನೀಡಿದೆ. ಕುಂಬಾರವಾಡ ರೇಂಜ್ ಫಾರೆಸ್ಟ್ ಕಛೇರಿಗೆ ಹಾಜರಾಗಿ ಈ ಬಗ್ಗೆ ವಿವರಣೆ ನೀಡುವಂತೆ ಡಿಸೆಂಬರ್ ನಲ್ಲಿ ತಿಳಿಸಲಾಗಿದೆ, ಅವರು ಪ್ರತಿಕ್ರಿಯೆ ನೀಡಿದ ಕಾರಣ 2ರಂದು ಯೂಟ್ಯೂಬರ್ ವಿರುದ್ಧ ದೂರು ದಾಖಲು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಂಬಾರವಾಡ ರೇಂಜ್ ಫಾರೆಸ್ಟ್ ಅಧಿಕಾರಿ (ಆರ್ಎಫ್ಒ) ಗಿರೀಶ್ ಚೌಗಲೆ , ಆರೋಪಿತ ವ್ಯಕ್ತಿ ತಮ್ಮ ಮುಂದೆ ಹಾಜರಾಗಿ ವಿವರಣೆ ನೀಡಿದ್ದಾರೆ . ಡ್ರೋನ್ ಹಾಗೂ ವಿಡಿಯೋ ಕ್ಯಾಮೆರಾವನ್ನು ಸಂಪೂರ್ಣ ಪರಿಶೀಲನೆ ನಡೆಸಿ ದೃಶ್ಯಗಳನ್ನು ಡಿಲೀಟ್ ಮಾಡುವಂತೆ ಇಲಾಖೆ ಸೂಚಿಸಿದೆ ಎಂದು ಅವರು ಹೇಳಿರೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.