ಬೆಂಗಳೂರಿನಲ್ಲಿ ಅಪಘಾತದ ನೆಪದಲ್ಲಿ ವ್ಯಕ್ತಿ ಹತ್ಯೆಗೆ ಸಂಚು: ಐವರ ವಿರುದ್ಧ ದಾಖಲಾಯ್ತು ಕೇಸು

ಬೆಂಗಳೂರಿನಲ್ಲಿ ಅಪಘಾತದ ನೆಪದಲ್ಲಿ ವ್ಯಕ್ತಿ ಹತ್ಯೆಗೆ ಸಂಚು: ಐವರ ವಿರುದ್ಧ ದಾಖಲಾಯ್ತು ಕೇಸು


ರಾಯಲ್ ಎನ್ ಫೀಲ್ಡ್, ಟೆಂಪೊ ಟ್ರಾವೆಲರ್

ಬೆಂಗಳೂರು, ಜನವರಿ 16: ಬೈಕ್ ಅಪಘಾತದ ನೆಪದಲ್ಲಿ ವ್ಯಕ್ತಿಯನ್ನು ಮುಗಿಸಲು ಸಂಚು ರೂಪಿಸಿದ್ದ (ಕೊಲೆ ಯತ್ನ) ಘಟನೆ ಬೆಂಗಳೂರು (ಬೆಂಗಳೂರು) ಚಿಕ್ಕಜಾಲ ಪೊಲೀಸ್ ಠಾಣಾ ಸಂಭವಿಸಿದೆ. ಬೇಕಂತಲೇ ಬೈಕ್‌ಗೆ ಟೆಂಪೊ ಟ್ರಾವೆಲರ್ ಗುದ್ದಿಸಿ ನಂತರ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಜನವರಿ 7ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೈಯದ್ ಯಾಸೀನ್ ಹಲ್ಲೆಗೊಳಗಾದ ವ್ಯಕ್ತಿ. ಸದ್ಯ ಚಿಕ್ಕಜಾಲ ಪೊಲೀಸ್ ಠಾಣೆಗೆ ಸೈಯದ್ ಯಾಸೀನ್ ತಂದೆ ದೂರು ನೀಡಿದ್ದಾರೆ.

ನಡೆದದ್ದೇನು?

ಜನವರಿ 7 ರಂದು ಸೈಯದ್ ಯಾಸೀನ್ ತಮ್ಮ ರಾಯಲ್ ಫೀಲ್ಡ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಉದ್ದೇಶಪೂರ್ವಕವಾಗಿ ಬೈಕ್‌ಗೆ ಟಿಟಿ ಗುದ್ದಿ ಕೊಲೆಗೆ ಯತ್ನಿಸಲಾಗಿದೆ. ಅಷ್ಟೇ ಅಲ್ಲದೆ ಕೆಳಗೆಬಿದ್ದವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಆರೋಪ ಕೂಡ ಕೇಳಿಬಂದಿದೆ. ಮದುವೆ ನಂತರ ವೈಯಕ್ತಿಕ ದ್ವೇಷವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಚಿಕ್ಕಜಾಲ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ: ಬಾಲಕಿ ಕಣ್ಣೆದುರೇ ತಂದೆಯ ಕೊಲೆ ಪ್ರಕರಣ: ನಿಗೂಢ ಕೊಲೆಯ ಸುಳಿವು ನೀಡಿದ ಕಾರು! ಕೊನೆಗೂ ಬಲೆಗೆ ಬಿದ್ದ ಹಂತಕರು

ಇನ್ನು ಸೈಯದ್‌ಗೆ ಕಾಲಿನ ಮೂಳೆ ಮುರಿದಿದ್ದು, ಹೊಟ್ಟೆ, ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯವಾಗಿದೆ. ವೈದ್ಯಕೀಯದಲ್ಲಿ ಕೊಲೆ ಯತ್ನ ವರದಿಯಾಗಿದೆ ಎಂಬುದು ದೃಢಪಟ್ಟಿದೆ. ಹೀಗಾಗಿ ಆರೋಪಿಗಳು ಸೇರಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿ ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಐವರ ವಿರುದ್ಧ ದೂರು

ಸದ್ಯ ಚಿಕ್ಕಜಾಲ ಪೊಲೀಸ್ ಠಾಣೆಗೆ ಸೈಯದ್ ಯಾಸೀನ್ ತಂದೆ ಸೈಯದ್ ಯೂಸುಫ್ರಿಂದ ದೂರು ನೀಡಲಾಗಿದೆ. ಕೆಜಕಶನ್ ಖಾಲಿದ್, ಫರ್ಹಾನ್ ಖಾಲಿದ್, ಉಸ್ಮಾನ್, ಹಾಶಿಮ್, ಸೈಯದ್ ರಾಹಬೆರ್ ವಿರುದ್ಧ ಕೊಲೆ ಯತ್ನ ಆರೋಪದಡಿ ದೂರು ದಾಖಲಾಗಿದೆ.

ಆಟೋಗೆ ಅಪರಿಚಿತ ವಾಹನ ಡಿಕ್ಕಿ: ಪ್ರಯಾಣಿಕ ಸಾವು

ಆಟೋಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕ ಸ್ಥಳದಲ್ಲಿಯೇ ಸಾವನ್ನಪ್ಪಿರುವಂತಹ ನೆಲಮಂಗಲ ತಾಲೂಕಿನ ತಾಳೆಕೆರೆ ಗೇಟ್ ಬಳಿ ನಡೆದಿದೆ. ಗೋವೇನಹಳ್ಳಿ ನಿವಾಸಿ ಹನುಮಂತಪ್ಪ ಮೃತ. ಇಬ್ಬರಿಗೆ ಗಾಯಗಳಾಗಿದ್ದರೆ, ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ಸಂಚಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವರದಿ: ವಿಕಾಸ್ ಕ್ರೈಂ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *