ಮೈಲಾರಲಿಂಗನಿಗೆ ಬಲಿ ಕೊಡಲು ತಂದಿದ್ದ ಕುರಿಗಳನ್ನ ವಶಕ್ಕೆ ಪಡೆದು ಮಾರಾಟ ಮಾಡಿದ ಅಧಿಕಾರಿಗಳು

ಮೈಲಾರಲಿಂಗನಿಗೆ ಬಲಿ ಕೊಡಲು ತಂದಿದ್ದ ಕುರಿಗಳನ್ನ ವಶಕ್ಕೆ ಪಡೆದು ಮಾರಾಟ ಮಾಡಿದ ಅಧಿಕಾರಿಗಳು


ಮೈಲಾರಲಿಂಗನ ಜಾತ್ರೆಗೆ ಭಕ್ತರು ತಂದಿದ್ದ ಕುರಿಮರಿಗಳು

ಯಾದಗಿರಿ, ಜನವರಿ 16: ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತ್ಯಂತ ಪ್ರಸಿದ್ಧ ಮೈಲಾರಲಿಂಗನ ಜಾತ್ರೆ (ಮೈಲಾರಲಿಂಗೇಶ್ವರ ಜಾತ್ರೆ) ಅದ್ಧೂರಿಯಾಗಿ ನಡೆದಿದೆ. ಜಾತ್ರೆಯಲ್ಲಿ ಮೈಲಾರನ ಪಲ್ಲಕ್ಕಿ ಮೇಲೆ ಭಕ್ತರು ಕುರಿಮರಿಗಳನ್ನು ತೆಗೆದುಕೊಂಡು ಬರುತ್ತಾರೆ. ಆದರೆ ಈ ಪದ್ದತಿಗೆ ಬ್ರೇಕ್ ಬಿದ್ದಿರುವ ಕಾರಣಕ್ಕೆ ಭಕ್ತರು (ಭಕ್ತರು) ತಂದಿದ್ದ ಕುರಿಮರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದೀಗ ಅದೇ ಕುರಿಮರಿಗಳ ಟೆಂಡರ್ ಮೂಲಕ ರೈತರಿಗೆ ಮಾರಾಟ ಮಾಡುವುದರಿಂದ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಲಕ್ಷ ಲಕ್ಷ ಆದಾಯ ಹರಿದು ಬಂದಿದೆ.

ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ನಡೆದಿದೆ. ವಿವಿಧ ಜಿಲ್ಲೆ ಮತ್ತು ರಾಜ್ಯಗಳಿಂದ ಭಕ್ತರ ದಂಡೆ ಜಾತ್ರೆಗೆ ಹರಿದು ಬಂದಿತ್ತು. ಈ ಜಾತ್ರೆಯಲ್ಲಿ ಮೈಲಾರಲಿಂಗನನ್ನ ಪಲ್ಲಕ್ಕಿಯಲ್ಲಿ ಕುರಿಸಿಕೊಂಡು ಸಂಕ್ರಮಣದ ದಿನದಂದು ಹೊನ್ನ ಕೆರೆಗೆ ಗಂಗಾ ಸ್ನಾನ ಮಾಡಿಸಲು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಬಹುದು. ಈ ವೇಳೆ ಪಲ್ಲಕ್ಕಿ ಮೇಲೆ ಕುರಿಮರಿಗಳ ಎಸೆದು ಹರಕೆ ತೀರಿಸುವುದು ಇಲ್ಲಿನ ವಾಡಿಕೆ.

ಭಕ್ತರು ತಂದಿದ್ದ ೭೭೮ ಕುರಿಮರಿಗಳ ಜಪ್ತಿ

ಪ್ರಾಣಿ ಹಿಂಸೆ ಮಾಡಬಾರದು ಎಂಬ ಕಾರಣಕ್ಕೆ ಈ ಸಂಪ್ರದಾಯಕ್ಕೆ ಕಳೆದ ಕೆಲ ವರ್ಷಗಳಿಂದ ಬ್ರೇಕ್ ಹಾಕಲಾಗಿದೆ. ಆದರೂ ಭಕ್ತರು ನೂರಾರು ಕುರಿಮರಿಗಳನ್ನು ಪಲ್ಲಕ್ಕಿ ಮೇಲೆ ತೆಗೆದುಕೊಂಡು ಬರುತ್ತಾರೆ. ಇದ್ದನ್ನ ತಡೆಯೋಕೆ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿತ್ತು. ಹೀಗಾಗಿ ಭಕ್ತರು ಆಗಮಿಸಿದ ವಾಹನಗಳ ಪರಿಶೀಲನೆ ನಡೆಸಿ ಭಕ್ತರು ತಂದಿದ್ದ ಕುರಿಮರಿಗಳನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಯಾದಗಿರಿ ಮೈಲಾರಲಿಂಗ ಜಾತ್ರೆಯಲ್ಲಿ ಹಳದಿ ಮಾರುತ: ಭಂಡಾರದೋಕುಳಿಯಲ್ಲಿ ಮುಂದೆದ್ದ ಭಕ್ತರು

ಈ ವರ್ಷ ಭಕ್ತರು ತಂದಿದ್ದ 778 ಕುರಿಮರಿಗಳನ್ನ ಜಪ್ತಿ ಮಾಡಿದ್ದಾರೆ. ಅಧಿಕಾರಿಗಳು ಮತ್ತು ಅಧಿಕಾರಿಗಳನ್ನು ಜಪ್ತಿ ಮಾಡಿದ ಕುರಿಮರಿ ಪಶು ಇಲಾಖೆಯಿಂದ ನಿರ್ಮಾಣ ಮಾಡಲಾಗಿದ್ದ ಶೆಡ್‌ನಲ್ಲಿ ಇಡಲಾಗಿದೆ. ಇದೆ ಕುರಿಮರಿಗಳಿಂದ ಇದೀಗ ದೇವಸ್ಥಾನಕ್ಕೆ ರೂ. ಆದಾಯ ಹರಿದು ಬಂದಿದೆ.

ಪ್ರತಿ ವರ್ಷ ಜಾತ್ರೆಯಲ್ಲಿ ವಶ ಪಡಿಸಿಕೊಂಡ ಕುರಿಮರಿಗಳನ್ನ ಯಾದಗಿರಿ ನಗರದಲ್ಲಿರುವ ಪಶು ಆಸ್ಪತ್ರೆಗೆ ತರಲಾಗುತ್ತೆ. ಇಲ್ಲಿ ಶೆಡ್‌ಗಳನ್ನು ಮಾಡಿ ಕುರಿಗಳನ್ನು ಇರಿಸಲಾಗಿದೆ. ಬಳಿಕ ಹರಾಜ್ ಮೂಲಕ ತಲಾ 20 ಕುರಿಗಳನ್ನು ರೈತರಿಗೆ ಹಾಗೂ ವ್ಯಾಪರಸ್ಥರಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಪಶು ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಇಡುವುದರಿಂದ ಕೆಲ ಕುರಿಮರಿಗಳು ಸಾವನ್ನಪ್ಪುತ್ತಿದ್ದವು. ಇದೆ ಕಾರಣಕ್ಕೆ ಕಳೆದ ನಾಲ್ಕು ವರ್ಷಗಳಿಂದ ಜಾತ್ರೆಗೂ ಮುನ್ನವೇ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ವ್ಯಾಪರಸ್ಥರಿಗೆ ಕರೆದು ಟೆಂಡರ್ ಮಾಡಲಾಗುತ್ತಿದೆ.

ಯಾರೇ ಕುರಿಮರಿಗಳ ಖರೀದಿ ಮಾಡಿದರೂ ಕನಿಷ್ಠ 100 ಕುರಿಗಳನ್ನು ಖರೀದಿಸಬೇಕಾಗಿತ್ತು. ಪ್ರತಿ ಕುರಿಮರಿಗೆ ಅಧಿಕಾರಿಗಳು 1700 ರೂ ದರ ನಿಗದಿ ಮಾಡಲಾಗಿತ್ತು. ಇದರ ಮೇಲೆ ಟೆಂಡರ್‌ನಲ್ಲಿ ಭಾಗವಹಿಸಿದವರು ಬೆಲೆ ಏರಿಸಿ ಟೆಂಡರ್ ಪಡೆಯಬಹುದಾಗಿತ್ತು. ಒಟ್ಟು ಈ ಬಾರಿ ಟೆಂಡರ್ ಪ್ರಕ್ರಿಯೆಯಲ್ಲಿ 15 ಜನರು ಭಾಗವಹಿಸಿದ್ದರು. ಪ್ರತಿಯೊಂದು ಕುರಿಗೆ 2800 ರೂ ಯಿಂದ ಹಿಡಿದು 3211 ರೂ. ತನಕ ಬೆಲೆಯನ್ನ ಏರಿಕೆ ಮಾಡಿ ಟೆಂಡರ್ ಪಡೆದಿದ್ದರು ಸುಮಾರು 8 ಜನರಿಗೆ ಮಾತ್ರ ಕುರಿಗಳನ್ನು ಖರೀದಿಸಲು ಅವಕಾಶ ಸಿಕ್ಕಿದೆ.

23 ಲಕ್ಷಕ್ಕೂ ಅಧಿಕ ಆದಾಯ

ಮೈಲಾರಪುರ ಹತ್ತಿರ ಹಾಕಿದ್ದ ಶೆಡ್ ಬಳಿಯ ಟೆಂಡರ್ ಪಡೆದವರು 100 ಕುರಿಮರಿಗಳ ಜಮಾ ಆಗುತ್ತಿದ್ದ ಹಾಗೆ ವಾಹನ ತಂದು ಹೋಗಿದ್ದಾರೆ. ಸುಮಾರು 23 ಲಕ್ಷಕ್ಕೂ ಅಧಿಕ ಆದಾಯ ಹರಿದು ಬಂದಿದೆ. ಕಳೆದ ಬಾರಿ 760 ಕುರಿಗಳನ್ನು ವಶಕ್ಕೆ ಪಡೆಯಲಾಗಿತ್ತು, ಸುಮಾರು 19 ಲಕ್ಷ ರೂ ಆದಾಯ ಬಂದಿತ್ತು. ಆದರೆ ಈ ಬಾರಿ ಟೆಂಡರ್ ನಿಂದ ಹೆಚ್ಚಿನ ಆದಾಯ ದೇವಸ್ಥಾನಕ್ಕೆ ಹರಿದು ಬಂದಿದೆ. ಇನ್ನು ಕುರಿಮರಿಗಳ ಟೆಂಡರ್‌ನಿಂದ ಹರಿದು ಬಂದ ಹಣದಿಂದ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಬಳಸಲಾಗುತ್ತಿದೆ.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ಮೊದಲ ದಿನದ ಉತ್ಖನನ ಅಂತ್ಯ: ಏನು ಸಿಕ್ತು? ಮುಂದೇನು? ಅಧಿಕಾರಿ ಹೇಳಿದಷ್ಟು

ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನು ತಿನ್ನುವ ಪದ್ಧತಿಗೆ ಬ್ರೇಕ್ ಬಿದ್ದಿರುವ ಕಾರಣಕ್ಕೆ ಭಕ್ತರು ತಂದಿದ್ದ ಕುರಿಮರಿಗಳಿಂದ ದೇವಸ್ಥಾನಕ್ಕೆ ಭರ್ಜರಿ ಆದಾಯ ಬಂದಿದೆ. ಹೀಗಾಗಿ ಕುರಿಮರಿಗಳಿಂದ ಬಂದ ಹಣದಿಂದ ದೇವಸ್ಥಾನದಲ್ಲಿ ಭಕ್ತರಿಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಕೂಡ ಆಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *